Thursday, September 15, 2016

ಮುಂಗಾರು ಮಳೆ -೨.. ಚಿತ್ರ ವಿಮರ್ಶೆ

ಮುಂಗಾರು ಮಳೆ -೨.. ಕನ್ನಡದ ಬಹು ನಿರೀಕ್ಷಿತ ಚಿತ್ರ...ಈ ಚಿತ್ರದ ಸೀಕ್ವೆಲ್ ಮಾಡಲು ಧೈರ್ಯ ಮಾಡಿದ ನಿರ್ದೇಶಕರಾದ ಶಶಾಂಕ್ ರವರನ್ನು ಅಭಿನಂದಿಸಲೇಬೇಕು....
ಕಾರಣ ಪ್ರೇಕ್ಷಕ ಚಿತ್ರದ ಪ್ರತಿ ಆಯಾಮವನ್ನು ಭಾಗ ೧ ಕ್ಕೆ ತಳುಕು ಹಾಕುವುದಂತೂ ಕಟ್ಟಿಟ್ಟ ಬುತ್ತಿ.. ಇದರ ಅರಿವಿರುವ ನಿರ್ದೇಶಕರು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದಾರೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಚಿತ್ರ ಬಿಡುಗಡೆಗೆ ಮುನ್ನವೇ ಸುಳಿವು ಕೊಟ್ಟಿದ್ದಾರೆ..
"ಕಾಲ ಬದಲಾಗಿದೆ..
ಪ್ರೀತಂ ಕೂಡ ಬದಲಾಗಿದ್ದಾನೆ..
ಅವನ ದೃಷ್ಠಿಕೋನವು ಬದಲಾಗಿದೆ"
ಆದರೆ....

"ನೋಡುಗರ ದೃಷ್ಠಿಕೋನವೂ ಬದಲಾಗಬೇಕಿದೆ"
ಸಿನಿಮಾ ನೋಡದ ಎಷ್ಟೋ ಜನ..ಯಾರೋ ಕೆಲವರ ನೆಗೆಟೀವ್ ಪಬ್ಲಿಸಿಟಿಗೆ ಒಳಗಾಗಿ ಸಿನಿಮಾ ಚೆನ್ನಾಗಿಲ್ಲ ಎಂದೂ ನಿರ್ಧರಿಸುವುದು ಅದೆಷ್ಟರ ಮಟ್ಟಿಗೆ ಸರೀಯೋ ನಾ ಕಾಣೆ...
ರಿಮೇಕ್ ಸಿನಿಮಾಗಳಿಗೆ ಜೈ ಅನ್ನುವಾ ಮೊದಲೂ.. ನಮ್ಮ ನಿರ್ದೇಶಕರ ಕನ್ನಡದ ಸ್ವಮೇಕ್ ಚಿತ್ರಗಳಿಗೆ ಬಂಬಲಿಸಿ..ಒಬ್ಬ ನಿರ್ದೇಶಕ ಒಂದು ಸ್ವಮೇಕ್ ಚಿತ್ರವನ್ನು ತೆರೆಯ ಮೇಲೆ ತರುವುದು ಸುಲಭದ ಮಾತಲ್ಲ..ಆ ಚಿತ್ರವನ್ನು ನೋಡಿ ನಂತರ ಆ ಚಿತ್ರದ ಬಗ್ಗೆ ಕಮೆಂಟ್ ಮಾಡುವುದು ಸರಿ ಅನಿಸುತ್ತದೆ..ಯಾರೋ ಹೇಳಿದ ಮಾತನ್ನು ಕೇಳಿ ನಾವು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುವುದು ಒಬ್ಬ ಸದಭಿರುಚಿಯ ಪ್ರೇಕ್ಷಕನ ಲಕ್ಷಣವಲ್ಲ...
ಮುಂಗಾರು ಮಳೆ ಸಿನಿಮಾವನ್ನೆ ಬಯಸಿದ್ದೆ ಆದರೆ..ಭಟ್ಟರ ಭಾಗ ೧ ನ್ನು ನೋಡಬಹುದು..
ಇದು ಭಾಗ ೨....
ಕಣ್ಣಿಗೆ ಮುದ ನೀಡುವ ಶೇಖರ್ ಚಂದ್ರಾರವರ ಛಾಯಾಗ್ರಹಣವಿದೆ..
ಕಿವಿಗೆ ಇಂಪೆನಿಸುವ ಜನ್ಯಾರವರ ಸಂಗೀತವಿದೆ..
ಕವಿ ಶ್ರೇ಼ಷ್ಠರ ಸುಮಧುರ ಸಾಹಿತ್ಯವಿದೆ..
ಕಥೆಯ ನಿರೂಪಣಾ ಶೈಲಿಯಲ್ಲಿ ತಾಜಾತನವಿದೆ..
ಗಣೇಶ್ ಮತ್ತೊಮ್ಮೆ ಮನಸ್ಸಿಗೆ ಹತ್ತಿರವಾಗುತ್ತಾರೆ..
ರವಿಚಂದ್ರನ್ ಅಪ್ಪನ ಪಾತ್ರದಲ್ಲಿ "ಹೀರೋ" ಆಗಿದ್ದಾರೆ..
ನೇಹಾ ಶೆಟ್ಟಿ ಮೊದಲ ಚಿತ್ರದಲ್ಲೆ..ಚಂದನವನದಲ್ಲಿ ನೆಲೆಯೂರುವ ಮುನ್ಸೂಚನೆ ನೀಡಿದ್ದಾರೆ...
ಐಂದ್ರಿತಾ ..ಪಾತ್ರದಲ್ಲಿ ಪ್ರೀತಂಗೆ ಬೋರೆನಿಸುತ್ತಾರೆ ಆದರೆ ಪ್ರೇಕ್ಷಕನಿಗಲ್ಲ..
ಸಾಧುರವರು ಹಾಸ್ಯದಲ್ಲಿ, ರವಿಶಂಕರ್ ಅಪ್ಪನ ಪಾತ್ರದ ಗಂಭೀರ ನಟನೆಯಲ್ಲಿ ಇಷ್ಟವಾಗುತ್ತಾರೆ...
ಯೂರೋಪ್ ಹಾಗು ರಾಜಸ್ಥಾನ ಮತ್ತು ಮಡಿಕೇರಿಯ ರಮ್ಯ ಸ್ಥಾನಗಳು ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರು..
ಇಷ್ಟೆಲ್ಲಾ ಇರುವ ಮುಂಗಾರುಮಳೆ ೨ ..ಸದಭಿರುಚಿಯ ಪೈಸಾ ವಸೂಲ್ ಮೂವಿ ಎಂದೂ ಹೇಳಿದರೆ ಅತಿಶಯೋಕ್ತಿ ಎನಿಸುವುದಿಲ್ಲ...
ಒಬ್ಬ ನಿರ್ದೇಶಕನಾಗಿ ಶಶಾಂಕ್ ರವರು ಗೆದ್ದಿದ್ದಾರೆ....ಬಂದ್ ಹಾಗು ಗಾಸಿಪ್ಗಳಿಂದ ಚಿತ್ರಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ..
ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಿ....
ವಿಶೇಷ ಸೂಚನೆ : ಯಾವುದೇ ಒಂದು ಸಿನಿಮಾವನ್ನು ವೀಕ್ಷಿಸದೆ.. ಯಾರದೋ ಮಾತನ್ನು ಕೇಳಿ..ಹೊಗಳದಿದ್ದರೂ ಪರವಾಗಿಲ್ಲ ತೆಗಳಬೇಡಿ...
ನಿರ್ದೇಶಕನ ಕನಸು, ನಿರ್ಮಾಪಕನ ಹಣ, ಕಲಾವಿದರ,ತಂತ್ರಜ್ಞರ ಶ್ರಮದ ಪ್ರತಿಫಲದಿಂದ ಒಂದು ಉತ್ತಮ ಚಿತ್ರವಾಗುತ್ತದೆ..ಹಲವಾರು ಜನರ ಭವಿಷ್ಯ ಅದರಲ್ಲಿ ಅಡಗಿರುತ್ತದೆ...
ಈ ಎಲ್ಲಾ ದಿಸೆಗಳಲ್ಲಿ ಮುಂಗಾರು ಮಳೆ ೨...ಒಂದು ಉತ್ತಮ ಚಿತ್ರ..
ನೋಡದೆ ಇದ್ದ ಪಕ್ಷದಲ್ಲಿ ..ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ವೀಕ್ಷಿಸಿ..

                                                            ಸತೀಶ್ ಎ.ಎಸ್

No comments:

Search This Blog