Thursday, September 15, 2016

ನೀರ್ ದೋಸೆ ಚಿತ್ರ ವಿಮರ್ಶೆ


"ನೀರ್ ದೋಸೆ " - ಹೂಟ್ಟೆ ಹುಣ್ಣಾಗುವಷ್ಟು ನಗು ಮತ್ತು ಮನಸ್ಸಿಗೆ ಹತ್ತಿರವಾಗುವ ಮೌಲ್ಯಗಳನ್ನೊಳಗೊಂಡ ಸಂಭಾಷಣೆಯ ರಸವತ್ತಾದ ಔತಣ....
ನಿರ್ದೇಶಕ ವಿಜಯ್ ಪ್ರಸಾದ್ ಜೀವನದ ವಿವಿಧ ಅನುಭವಗಳನ್ನು ನಾಲ್ಕು ಪಾತ್ರಗಳ ಜೊತೆ ತಮ್ಮ ವಿಭಿನ್ನ ಹಾಸ್ಯದ ಸಂಭಾಷಣೆಯ ಮೂಲಕ ರುಚಿಯಾಗಿ ಉಣಬಡಿಸಿದ್ದಾರೆ..ಇದರಲ್ಲಿ ಉಪ್ಪು ಹುಳಿ ಕಾರ ಕಹಿ ಸಿಹಿ ಎಲ್ಲಾ ಇದೆ, ಮೇಲ್ನೋಟಕ್ಕೆ ಸಿನಿಮಾದಲ್ಲಿ ದ್ವಂದ್ವಾರ್ಥದ ಡೈಲಾಗ್ ಇರುವದಂತೂ ಸತ್ಯ ಆದರೆ ಪ್ರತಿ ಡೈಲಾಗ್ ಹಿಂದೆ ಜೀವನಕ್ಕೆ ಬೇಕಾದ ಮೌಲ್ಯಗಳು ತುಂಬಾ ಇದೆ.. ಸಿನಿಮಾ ನೋಡಿದ ಪ್ರೇಕ್ಷಕನ ಮುಖದಲ್ಲಿ ನಗು ಕಾಣುವುದಂತೂ ಸತ್ಯ..ಕೊಟ್ಟ ದುಡ್ಡಿಗೆ ಮೋಸವಿಲ್ಲ..
ಜಗ್ಗೇಶ್ ಸರ್ ಹೆಸರಿಗೆ ತಕ್ಕಂತೆ ನವರಸ ನಾಯಕ ಮತ್ತೊಮ್ಮೆ ಮಠ ಚಿತ್ರವನ್ನು ನೆನಪಿಸಿದ್ದಾರೆ ತಮ್ಮ ವಿಶಿಷ್ಠ ನಟನೆ ಹಾಗು ಮ್ಯಾನರಿಸಂನಿಂದ ರಂಜಿಸಿದ್ದಾರೆ...ಹಾಗು ದತ್ತಣ್ಣ ಈ ಪಾತ್ರದಿಂದ ಮತ್ತಷ್ಟು ಹತ್ತಿರವಾಗುತ್ತಾರೆ.. "ಆಗುವುದೆಲ್ಲಾ ಒಳ್ಳೆಯದಕ್ಕೆ" ಎಂಬುದು ಈ ಚಿತ್ರದಲ್ಲಿ ಹರಿಪ್ರಿಯಾರವರ ನಟನೆ ನೋಡಿ ನಿಜ ಅನಿಸಿತು..ಕಾರಣಾಂತರಗಳಿಂದ ಸಿಕ್ಕ ಪಾತ್ರಕ್ಕೆ ನೂರು ಪ್ರತಿಶಹ ನ್ಯಾಯ ಒದಗಿಸಿದ್ದಾರೆ..ಸುಮನಾ ರಂಗನಾಥ್ ಕೂಡ ತುಂಬಾ ಇಷ್ಟವಾಗುತ್ತಾರೆ..
ಈ ಚಿತ್ರದ ಮತ್ತೊಂದು ಧನಾತ್ಮಕ ಅಂಶ ಅನೂಪ್ ಸೀಳಿನ್ ರವರ ಹಿನ್ನಲೆ ಸಂಗೀತ..ಅದ್ಬುತವಾಗಿ ಮೂಡಿ ಬಂದಿದೆ..
"ಬದುಕಿನ ಎಲ್ಲಾ ಪಾಠಗಳನ್ನು ಅನುಭವಿಸಿ ಕಲಿಯಲು ಅಸಾಧ್ಯ..ಕೆಲವನ್ನು ಈ ಸಿನಿಮಾದಿಂದ ಕಲಿಯಬಹುದು ಎಂಬುದು ನನ್ನ ಅನಿಸಿಕೆ"
ಸಿನಿಮಾದ ಕೊನೆಯಲ್ಲಿ ಇಷ್ಟ ಆಗದೆ ಇದ್ರೆ ಮುಖಕ್ಕೆ ಉಗೀರಿ ಅಂತಾ ಹೇಳಿದಿರಾ....ನೋಡಿದ ಪ್ರತಿಯೊಬ್ಬರೂ ಹೊಗಳುತಿದ್ದಾರೆ...ಈ ಹೊಗಳಿಕೆ ಇಡೀ ಚಿತ್ರತಂಡಕ್ಕೆ..ವಿಶೇಷವಾಗಿ ನಿರ್ದೇಶಕ ವಿಜಯ್ ಪ್ರಸಾದ್ ಸರ್ ರವರಿಗೆ..

                                                                  ಸತೀಶ್ ಎ.ಎಸ್ ..


No comments:

Search This Blog