Thursday, September 04, 2014

ಕಣ್ಣೊಳಗಿನ ಕನ್ನಡಿ


 ಕನ್ನಡ ಚಿತ್ರರಂಗದ ಸ್ವಮೇಕ್ ರಿಮೇಕ್ ವಾದ ವಿವಾದಗಳ ನಡುವೆ ಮೊನ್ನೆ ನನ್ನ ಫ್ರೆಂಡ್ ಬ್ಲಾಗನಲ್ಲಿ ಓದಿದ ಒಂದು ಬರಹ ತುಂಬಾ ಇಷ್ಟವಾದ ಕಾರಣ ಇಂಗ್ಲಿಷ್ನಲ್ಲಿದ್ದ ಅದನ್ನು ಕನ್ನಡಕ್ಕೆ  ತರ್ಜುಮೆ ಮಾಡಬೇಕು ಅನ್ನಿಸಿತ್ತು  ಅವರಿಂದ  ಕಾಪಿ ರೈಟ್ಸ್ ಪಡೆದು ತರ್ಜುಮೆ ಮಾಡಿದ್ದೇನೆ. ತರ್ಜುಮೆಗೆ ಒಪ್ಪಿಗೆ ನೀಡಿದ್ದಕೆ ಧನ್ಯವಾದಗಳು ನಂದಿತಾವಿನಯ್ 
ಅಂಗ್ಲ ಭಾಷೆಯಲ್ಲಿ ಮೂಲ ಬರಹವನ್ನು ಓದಲು ಇಲ್ಲಿ ಕ್ಲಿಕ್ಕಿಸಿ 
 http://thought-traffik.blogspot.in/2014/06/story.html?m

ಪ್ರಪಂಚ ಪ್ರತಿಯೊಬ್ಬನು  ನೋಡುವ ರೀತಿಯ ಮೇಲೆ ಅವಲಂಬಿತವಾಗಿದೆ, ನೋಡುವ ಕಣ್ಣುಗಳಲ್ಲಿ ಪ್ರತಿಯೊಂದು ಸನ್ನಿವೇಶಗಳು ಅವರದೇ ಆದ ಆಯಾಮದಲ್ಲಿ ಚಿತ್ರಿಸಿಕೊಳ್ಳುತ್ತಾರೆ, ಚಿತ್ರಿಸಿಕೊಂಡ ನಂತರ ಒಮ್ಮೆ  ತಾಳ್ಮೆಯಿಂದ ವಿಶ್ಲೇಷಿಸಿದರೆ  ಅದೆಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ .
 ಅರ್ಥೈಸಿಕೊಂಡರೆ ಎದುರಿಗಿರುವವರ ಪ್ರತಿಯೊಂದು ಕಣ್ಣು ಒಂದೊಂದು ಕಥೆ ಹೇಳುತ್ತದೆ ...... 



ಕೆಲ ದಿನಗಳ ಹಿಂದೆ ಸಂಜೆ ಸೂರ್ಯ ತನ್ನ ದಿನಚರಿ ಮುಗಿಸಿ ಮನೆಗೆ ಹೊರಡುವ ಹುಮ್ಮಸ್ಸಿನಲ್ಲಿದ್ದ ಮುಸ್ಸಂಜೆಯ ಕತ್ತಲು ಕಿಕ್ಕಿರಿದ ಜನಸಂದಣಿಯ ನಡುವೆ ನಾನು ಸಿಟಿ ಬಸ್ಸನ್ನೇರಿ ಮನೆ ಸೇರುವ ತವಕದಲ್ಲಿದ್ದೆ. ದಿನವಿಡೀ ದುಡಿದು ತಮ್ಮ ಮನೆ ಸೇರುವ ಆತುರದಲ್ಲಿರುವ ಸಹಪ್ರಯಾಣಿಕರ ನೋಡಿದ ನನಗೆ ಅವರ ಕಣ್ಣುಗಳು ಒಂದೊಂದು ಕಥೆ ಹೇಳುವ ರೀತಿ ಭಾಸವಾಯಿತು. ಆ ಭಾಸಕ್ಕೆ ಅರ್ಥಕೊಟ್ಟು ಕಲ್ಪಿಸಿದ್ದಕ್ಕೆ ಸಿಕ್ಕ ಪಲಿತಾಂಶ ಈ ಅಂಕಣ ...

ನಾ ಗಮನಿಸಿದ  ಮೊದಲ ಕಣ್ಣುಗಳು ೩೦ ವಯಸ್ಸಿನ ಒಬ್ಬ ಮಹಿಳೆಯದ್ದು, ಆಕೆ ಆತನ ಗಂಡನ ಪಕ್ಕ ಕೂತಿದ್ದಳು, ಕಣ್ ತುಂಬಿ ಬಂದಿದ್ದರು ತಡೆ ಹಿಡಿದಿಟ್ಟಿದ್ದ ರಪ್ಪೆಗಳು ಏನನ್ನೋ ನೀರಿಕ್ಷಿಸುತ್ತಾ ಆಕೆಯ ಭಾರವಾದ ಹೃದಯಕ್ಕೆ ಸಂತೈಸುತ್ತಿರುವ  ಪ್ರಯತ್ನ ಮಾಡುವಂತಿತ್ತು. ಆಕೆಯು ತನ್ನ ಗಂಡನಿಂದ ಏನನ್ನೋ ನಿರಿಕ್ಷಿಸುತ್ತಿದ್ದಳು ಆಕೆಯ ಕೈಗಳು ತನ್ನ ಗಂಡನ ಹಿಡಿತಕ್ಕೆ ಹಾತೊರೆಯುತ್ತಿತ್ತು ಕೆಲ ಕ್ಷಣಗಳ ನಂತರ ತನ್ನ ಗಂಡನಿಗೆ ಕಾಯದೆ ತಾನೇ ಆತನೆಡೆಗೆ ತಿರುಗಿ ಮುಗುಳ್ನಕ್ಕು ಹೇಳಿದ್ದು ಕೇವಲ ಒಂದೇ ಪದ ''ಸಾರಿ'' .  ತದೇಕಚಿತ್ತದಿಂದ ಗಮನಿಸುತ್ತಿದ್ದ ನನಗೆ ಆ ಕಡೆಯಿಂದ ಕೇಳಿದ ಪ್ರತ್ಯುತ್ತರವು  ಒಂದೇ ಶಬ್ದ  ''ಸಾರಿ''.
ಏನಾಗಿತ್ತೋ ಅವರ ನಡುವೆ ನನಗಂತೂ ಅರಿವಿಲ್ಲ ಅದು ಅವರಿಗೂ ಬೇಕಾಗಿರಲಿಲ್ಲ ಎಲ್ಲಾ ಮರೆತ ಅವರ ಮುಖದಲ್ಲಿ  ನರ್ತಿಸುತಿದ್ದಿದ್ದು ''ನಿಷ್ಕಲ್ಮಶ ನಗು" ಗೆದ್ದಿದ್ದು ಅವರ ''ಪ್ರೀತಿ''

ನಾ ಗಮನಿಸಿದ ಮತ್ತೊಬ್ಬ ವ್ಯಕ್ತಿ ೭೦ ವರ್ಷ ವಯಸ್ಸಿನ ಒಬ್ಬ ಹಿರಿಯರನ್ನ,  ತಾನು ಕೂತಿದ್ದ ಸೀಟಿನ ಪಕ್ಕದಲ್ಲೇ ತನ್ನ ಮಡದಿಗೆ ಜಾಗವನ್ನು ಕಾದಿರಿಸಿ ಕೂರಿಸಿಕೊಂಡ ಆ ಮುಸ್ಸಂಜೆಯ ಪ್ರೀತಿಯ ಕಣ್ಣುಗಳಲ್ಲಿ ಬಹು ದೂರ ಪ್ರಯಾಣಿಸಿದ  ದಣಿವು ಕಾಣುತಿತ್ತು. ಅವರು ಕಿಟಕಿಯಿಂದಾಚೆಗಿನ ಆ ಕಲರ್ಫುಲ್ ದುನಿಯಾವನ್ನು ಕಣ್ ಮಿಟುಕಿಸದೆ ಮೌನದಿಂದ ನೋಡುತಿದ್ದ ರೀತಿ ಪ್ರಾಯಶಃ ಆ ನಗರಕ್ಕೆ ಹೊಸಬರಂತೆ ಬಿಂಬಿಸುತ್ತಿತ್ತು. 

ನಾ ನೋಡಿದ ಕಣ್ಣುಗಳ ಸಾಲಿಗೆ ಮತ್ತೊಂದು ಸೇರ್ಪಡೆ ಸುಮಾರು ೨ ವರ್ಷದ ಮಗು. ನಿಧಾನವಾಗಿ ಚಲಿಸುತ್ತಿದ್ದ ಬಸ್ಸಿನಲ್ಲಿ ತನ್ನ ಕೊರಳಿನಲ್ಲಿ ತೂಗಾಡುತ್ತಿದ್ದ ''ಛೋಟಾ ಭೀಮ್ '' ಬಾಟೆಲ್ನಲ್ಲಿ ನೀರನ್ನು ಹೀರುತ್ತಾ ತನ್ನದೇ ಆದ ಪ್ರಪಂಚದಲ್ಲಿ ಚಪ್ಪಾಳೆ ಹಾಕುತ್ತಾ ಸೀಟಿನಿಂದ ಕೆಳಗೆ ಬೀಳುವುದೆಂಬ ತಾಯಿಯ ಭಯವನ್ನು ಲೆಕ್ಕಿಸದೆ ಕುಣಿಯುತ್ತಾ  ರಾ,,,ಆಆಆಆಆಆ ...ಈಈಈ ಎಂದು ಹಾಡುತ್ತಿದ್ದ ಆ ಪುಟ್ಟ ಗಾಯಕ ತನ್ನ ಸುತ್ತಲಿನ ಪ್ರಪಂಚದ ಅರಿವಿಲ್ಲದೆ ತನ್ನದೇ ಲೋಕದಲ್ಲಿ ಯಾವುದೇ ಚಿಂತೆಯಿಲ್ಲದೆ ಮುಗ್ದತೆಯಿಂದ ನಗುತ್ತಿದ್ದ .....

 ನಾ ಮರೆಯಲಾಗದ ಮುಗ್ದ ಕಣ್ಣುಗಳು ದೇವರಿಗೆಂದು ತನ್ನ ತಲೆಕೂದಲನ್ನು ಜಡೆಯಾಗಿ ಮಾರ್ಪಡಿಸಿ ಮುಡಿ ಕಟ್ಟಿದ್ದ ಆ ಹಳ್ಳಿ ಹುಡುಗನದ್ದು, ಆತನು ಕೂಡ ಈ ಮಾಯಾನಗರಿಗೆ ಹೊಸಬನಿರಬೇಕು ತನ್ನ ಅಗಲವಾದ ಕಣ್ಣುಗಳಿಂದ ರಸ್ತೆಬದಿಯಲ್ಲಿರುವ ಪ್ರತಿ ಅಂಗಡಿಯ ಫಲಕಗಳನ್ನು ಜೋರಾದ ಧ್ವನಿಯಲ್ಲಿ ಓದುತ್ತಿದ್ದ . ನಿಧಾನಗತಿಯ ಟ್ರಾಫಿಕ್ ಕೂಡ  ಪ್ರತಿ ಫಲಕವನ್ನು ಓದಲು ಅನುವು ಮಾಡಿಕೊಡುತ್ತಿತ್ತು.  ಆತನ ಶ್ರದ್ದೆ ಎಷ್ಟಿತ್ತೆಂದರೆ  ಕಿಟಿಕಿಯ ಕಡೆಯಿಂದ ಮುಖವನ್ನೇ ತೆಗೆದಿರಲಿಲ್ಲ, ಬಸ್ಸಿನಿಂದ ಇಳಿಯುವಾಗ ಅವನ ಮುಖದಲ್ಲಿದ್ದ ನಗು ಕಿಟಿಕಿಯ ಗಾಜಿನ ಮುಸುಕಿನಿಂದ ಕಾಣದ ಸೌಂದರ್ಯವನ್ನು ತನ್ನ ತೆರೆದ ಕಣ್ಣಿನಿಂದ ಆಹ್ಲಾದಿಸಲು ಹೊರಟಂತಿತ್ತು.... ಎಲ್ಲೋ ಕೇಳಿದ ಮಾತು "ಸೌಂದರ್ಯ ನೋಡುವವರ ಕಣ್ಣು ಹಾಗು ಮನಸ್ಸಿನಲ್ಲಿ ಅಡಗಿರುತ್ತದೆ" ಎಂಬುದು ನಿಜ ಅನ್ನಿಸಿತು..

ಇಷ್ಟೆಲ್ಲಾ ಆದ ಮೇಲೆ ಐ ಟಿ ಸಿಟಿಯಲ್ಲಿ ಕಿವಿಗೆ ಇಯರ್ ಫೋನ್ ಹಾಕಿ ವೈಲ್ಡ್ ಕ್ರಾಫ್ಟ್ ಬ್ಯಾಗ್ ಹಿಡಿದು ಚಂದದ ಉಡುಗೆ ಉಟ್ಟಿರುವ ಯುವಕನ ತಪ್ಪಿಸಲು ಸಾಧ್ಯವೇ ? ಆತನ ಮೊಬೈಲ್ ರಿಂಗಣಿಸಿದಾಗ ಬೆಚ್ಚಿದಂತೆ ಮೊಬೈಲ್ ತೆಗೆದು ಸೈಲೆಂಟ್ ಮಾಡಿದ, ಬಸ್ಸಿನಲ್ಲಿರುವ ಜನ ಅವನೆಡೆಗೆ ಅಪರಾಧಿಯ  ರೀತಿ ನೋಡಿದ್ದು ಕಂಡು ಕಣ್ ಮುಚ್ಚಿ ತಲೆಯೊರಗಿಸಿ ಮಲಗಿದ,ಅವನ ತಲೆಯಲ್ಲಿ ಅದ್ಯಾವ ಸಿನಿಮಾ ಕಥೆ ಓಡುತಿತ್ತೋ ಸ್ವಲ್ಪ ಸಮಯದ ನಂತರ ಮತ್ತೆ ಕಣ್ ತೆಗೆದು ಕಂಡಕ್ಟರ್ ಬಳಿ ಚಿಲ್ಲರೆ ಪಡೆದು ಹೊರನೆಡೆದ....

ನಾವು ಹೋದಲ್ಲೆಲ್ಲ ಲಕ್ಷಾಂತರ ಜನರನ್ನು ನೋಡುತ್ತೇವೆ ಕೆಲವರು ಪರಿಚಿತರು ಅದೆಷ್ಟೋ ಅಪರಿಚಿತರು ಪ್ರತಿಯೋಬ್ಬರದು ಅವರದೇ ಆದ ಕಥೆಯಿರುತ್ತದೆ, ಅವರದೇ ಆದ ಸಂತೋಷ, ದುಃಖ, ಸಮಸ್ಯೆಗಳು, ನಾವು ಬೇರೊಬ್ಬರ ಕಥೆಯ ಪಾತ್ರವಾಗದಿರಬಹುದು ಆದರೆ ನಾವು ನಮ್ಮದೇ ಆದ ಒಂದು ಪಾತ್ರವನ್ನು ಪ್ರತಿದಿನ ಪ್ರತಿಕ್ಷಣ ನಿರ್ವಹಿಸುತ್ತಿರುತ್ತೇವೆ. ನಾವು ಕೇಳಿದ ಕಥೆಗಳು ಬೇರೊಬ್ಬರ ಜೀವನದ್ದೆ ಆದರು ನಮ್ಮ ಜೀವನವು ಬೇರೊಬ್ಬರಿಗೆ ಕಥೆಯಾಗಿರುತ್ತದೆ ...ಏನೇ  ಆದರು ಜೀವನ ಸಾಗುತ್ತಿರುತ್ತದೆ......  


                                                                                                        ಸತ್ಯ

Search This Blog