Thursday, December 31, 2009

"happy new year frnz,,,


ಎದ್ದೇಳು ಕನ್ನಡಿಗ....ಕನ್ನಡಿಗರಲ್ಲಿ ಮನವಿ.......
             ಎದ್ದೇಳಿ....ಸಾಕು ನಿಮ್ಮ ಉದಾರತೆ ..ಇಲ್ಲದಿದ್ದರೆ
             ಮಲಗಿದಲ್ಲೇ ಮಣ್ಣು ಮುಚ್ಚುವರು...ಈ ಹೊಸ ವರ್ಷದಿಂದ ಹೊಸ ಮನುಷ್ಯರಾಗಿ
ಕಳೆದು ಹೋಗುತ್ತಿರುವ ನಮ್ಮ ಕನ್ನಡವನ್ನು ಉಳಿಸಿಕೊಳ್ಳೋಣ ....ಇಂದು ನೀವು ಏಳದಿದ್ದರೆ ಮುಂದೆ ನಿಮ್ಮ ಮಕ್ಕಳು ಮಲಗಲು ಸಾದ್ಯವಿಲ್ಲ ,,,,, ಪರಭಾಷೆಯ ವ್ಯಾಮೋಹ ಸಾಕು.....ಉಳಿಸಿ ಬೆಳಸಿ ನಮ್ಮ ಕನ್ನಡವನ್ನು......
ಮಲಗಿದಲ್ಲೇ ಮಣ್ಣು ಮುಚ್ಚಿ ಕೊಂದರು ...ನಮ್ಮ ಮಣ್ಣಲ್ಲೇ ನಾ ಸಾಯುತ್ತಿರುವೆ  ಎನ್ನುವ ನಿಮ್ಮ ಉದಾರತೆಯನ್ನು ಸಾಕು ಮಾಡಿ ಈ ಹೊಸ ವರ್ಷದಿಂದ ಪರಭಾಷೆಯವರ ಜೊತೆ ಕನ್ನಡದಲ್ಲಿ ಮಾತನಾಡಿ ಈ ಕನ್ನಡ  ನಿಮ್ಮದು...ಗೆಳೆಯರೇ....ಈ ಕವನದ  ಉದ್ದೇಶ ಪ್ರಶಸ್ತಿ ಗೆಲ್ಲಬೇಕು ಅಥವಾ ನಾ ಕವಿಯೆಂದು ತೋರಿಸಬೇಕೆಂದಲ್ಲ ,,,,,ಈ ಕವನ ಓದಿದವರಲ್ಲಿ ಹತ್ತು ಜನ... ಅವರ ಪರಭಾಷೆಯ ಗೆಳೆಯರು ಸಿಕ್ಕಿದಾಗ ಒಣಕ್ಕಂ ಅನ್ನುವ ಮುಂಚೆ ಈ ಕವನವನ್ನು ನೆನೆದು ನಮಸ್ಕಾರ ಎಂದರೆ ನಾ ರುಣಿಯಾಗಿರುವೆ...ನಮೆಲ್ಲ ಗೆಳೆಯರಿಗೆ ಹೊಸ ವರ್ಷದ ಶುಭಾಶಯಗಳು.....
         ಎಲ್ಲ ಭಾಷೆ ಕಲಿಯಿರಿ ಆದರೆ ಕನ್ನಡವನ್ನು ಉಳಿಸಿ ಬೆಳಸಿ......
       
       
ಎದ್ದೇಳು ಕನ್ನಡಿಗನೇ
         ಹೊಸ ವರುಷ ಬಂದಿಹುದು ...
ಮಲಗಿದಲ್ಲೇ ಮಣ್ಣು ಮುಚ್ಚುವ ಜನರಿಹರು ...
                   
 ಬಂದವರಿಗೆಲ್ಲ ಬಾ ಎಂದು....
ನೀ ಸಹೃದಯಿಯಾದೆ ,,,
             ಸಾಕು ಮಾಡು....
ಬಂದವರೆಲ್ಲ ಯೋಗ್ಯರಲ್ಲ ......
ಬಂದವರನ್ನು ಬದಲಾಯಿಸು....
ನೀ ಬದಲಾಗದಿರು....

           ಉದಾರತೆಯ ಉತ್ತುಂಗದಲಿ
                  ಹಾರುವ ಮುನ್ನ .......
   ನೆನೆಸಿಕೊ ಒಮ್ಮೆ......
          ರೆಕ್ಕೆ ಇಲ್ಲದ ಹಕ್ಕಿಯನ್ನ......

ಸ್ವಾರ್ತಿಯಾಗು....
         ನಿನಗಾಗಿ ಅಲ್ಲ
ನಿನ್ನ ನೆಲ ಜಲ ಭಾಷೆಗಾಗಿ...

ಭಾಷೆ ಉಳಿವಿಗೆ ...
ಬೇಕಿಲ್ಲ ಗೆಳೆಯ ಬಲಿಧಾನ....
ಮೊದಲು ನೀ ನುಡಿ ನಿನ್ನ ಭಾಷೆಯ ,,,
ಕಂಡಾಗ ಪರಭಾಷೆಯ ಮಹಾಶಯ..........

                ಸತ್ಯ..........

ಏನಿತ್ತು ಅವಸರ...?


                                      ವಿಷ್ಣು ಸರ್ ,,,ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ...
                                                           ವೀ ಮಿಸ್ ಯು .................

Tuesday, December 29, 2009

""ಯಾವ ಮೋಹನ ಮುರುಳಿ ಕರೆಯಿತು ದೂರ ತೀರಕೆ ನಿಮ್ಮನು....""ಓ..ದೇವರೇ ಒಳ್ಳೆಯವರಿಗೆ,,ಆಯಸ್ಸುಕಡಿಮೆ ..ಎಂದು..ಮತ್ತೊಮೆ ನಿಜ ಮಾಡಿದೆ....
ಜನ್ಮದಿನದಂದೆ ಜವರಾಯನ ಕರೆಗೆ ಓಗೊಟ್ಟು ನಮ್ಮನೆಲ್ಲ ಅಗಲಿದ ಅಶ್ವಥ್ ಸರ್...ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ....ವೀ ಮಿಸ್ ಯು ......
ನಿಮಗಾಗಿ ಅರ್ಪಣೆ ಈ ಚಿಕ್ಕ ಕವನ ......


    ಏನಿತ್ತು ಅವಸರ
            ಗಾನ ಗಾರುದಿಗನೆ..
ಅಗಲಿ ಹೋಗಲು ನಮ್ಮನು....
 ಹೇಳಿ ಹೋಗು ಕಾರಣ ಹೋಗುವ ಮೊದಲು..
ಎಂದು ಹೇಳಿದ ನೀವೇ ಹೋಗಿರುವಿರಿ
ಹೇಳದೆ ನಮಗೆ ಕಾರಣ...
ಇದು ತಪ್ಪಲ್ಲವೇ ಗುರುವೇ....ಎಂದರೆ?
ಮತ್ತೆ ನೀವೇ ಹೇಳುವಿರಿ....
ತಪ್ಪು ಮಾಡದೋರ್ ಯಾರವ್ರೆ.....?
ಕಂಚಿನ ಕಂಠದಿ ...ನಮಗೆಲ್ಲ
ಸಂಗೀತ ಸುದೆಯ ರಸ ಉಣಬಡಿಸಿ...
ಅದೆಸ್ಟೋ ಶಿಷ್ಯಕೋಟಿಗೆ ಗುರುವಾಗಿ..
ಕನ್ನಡಿಗರ ಆರಾದ್ಯ ದೈವವಾಗಿ...
ಸಂಗೀತಲೋಕದ ಅನಬಿಶಕ್ತ ದೊರೆಯಾಗಿ...
ಭಾವಗೀತೆಗಳ ಭವ್ಯದೀಪ್ತಿಯಾಗಿ....
ಪ್ರಜ್ವಲವಾಗಿ ಬೆಳಗುತ್ತಿದ್ದ ಈ ಹಣತೆ..
ನಂದಿದೆ ಇಂದಿಗೆ .....
ಉಳಿದಿರುವುದು ಕತ್ತಲು ಮಾತ್ರ...
ಆ ಕತ್ತಲಲ್ಲೂ ನಿಮ್ಮ ಹಾಡು ,,,ನಮ್ಮೊಂದಿಗಿದೆ....
 ನೀವಿರುವಿರಿ ನಮ್ಮ ಮನಗಳಲ್ಲಿ ಇಂದಿಗೂ  ಎಂದೆಂದಿಗೂ....
ಅದಾವ ಮೋಹನ ಮುರಳಿ ಕರೆಯಿತು ಗುರುಗಳೇ..
                             ದೂರ ತೀರಕೆ ನಿಮ್ಮನು.......
       ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ,,,,,,,,,,,,
ಮತ್ತೊಮ್ಮೆ ಹುಟ್ಟಿ ಬನ್ನಿ ನಮಗಾಗಿ......
              ನಿಮ್ಮ ಬರುವಿಕೆಯ ನಿರೀಕ್ಷೆಯಲ್ಲಿ ....
                             ಎಲ್ಲ ಕನ್ನಡಿಗರು........
                            
                                           ಸತ್ಯ...........

Monday, December 28, 2009

How can i wish u.....?


Hi frnz,,, u wanna impress ur girlfriend who is away from u ,,,,by wishing in a special way on her birthday..,,,
lets,,,see sathya,,,s style,,,ofcourse it works,,, i am damn sure.......and tell me ur openion after reading this....

Hi
   Dear...

    How can i wish u .........?
    
     can i hug u and wish u
                  or
      can i give rose and wish u
                  or
      can i give a card and wish u...
                  or
      can i shake ur hand and wish u...
                  or
     can igive a kiss and wish u........

              NO
                        I  CAN"T
  because u r not with me
    still i wanna wish u.....
           SO
  I decided
                  first pray to god ......
Oh...god give me a chance
to wish in all the above types to mydear...
every year that to for ever........
        AND
Now i am wishing you...
   through this small poem,,,,
as a gift on your birthday.....
           I WISH U MANY MORE RETURNS OF THE DAY....DEAR
                 BE HAPPY FOR EVER.....

                           MISS....................YOU..........................
                                      yours.....
                                 SATHYA....SIMPLY .... STUPID....

CARDIAC QUEEN

Hi frnz,, this is my first poem in english..that to 5 yearsback,,, i know some mistakes are there still i dnt want to change because its my 1st poem...so more attachment.....
Whenever i Saw
her loveliness, so perfectly she seems
made me a statue....

Whenever i talk
her voice only recall
made me dumb...

Whenever i approch
her brightness clearly shines
made me a blind.....

        but...
 Whenever i remember...
her loveliness,voice,brightness
stands infront of me ,,,
that made me living,talking & seeing person..

u know who is she,,,

she is my CARDIAC QUEEN,,,,,,
           
                                      sathya...........

Friday, December 25, 2009

MARINE PEARL...


I Saw a marine pearl
glittering in a seashore..
that made me glance
again and again.....

 when i try to reach that ,,,
 it just went away...
when i tried to leave that,,,,
 it attracts me,,,,

   If i get that,,,
                then,,,
          i save that in abbys of my heart....
         and make my blood marine.....
   If i dnt...
              then,,,
    i lead my life in rememberence of that pearl....
    and my tears make the marine for its stay.....

 Do u knw who is that   ""MARINE PEARL""

 She is my only   ""CARDIAC QUEEN""

  Who always remind me to  ""BE HAPPY""
       
                                                     SATHYA.........

ನಾ ಕವಿಯಾಗಿದ್ದು.........

ಹಾಯ್,,, ಗೆಳೆಯರೇ  ಈ ಕವನ ಮೂಡಿ ಬಂದಿದ್ದು ..
ನನ್ನ ಗೆಳತಿಗಾಗಿ...ಆಕೆಯ ಹೆಸರು...ರಜಿ,,,,
ಆಕೆ ನನ್ನ ಕವನಗಳನ್ನು ನೋಡಿ...ಛೇಡಿಸಿದ್ದು,,,ಹೀಗೆ...
ಪ್ರೀತಿಯ,,, ವರ್ಣಿಸಿ ಕವನ ಬರೆಯುವುದನ್ನು ಬಿಟ್ಟು...ನೀನು ಕವಿಯಾಗಿದ್ದರೆ ಪ್ರಕೃತಿಯ ವರ್ಣಿಸಿ...ಕವನ  ಬರೆದು... ತೋರಿಸು....ಎಂದು....
ಆದ್ದರಿಂದ ....ಈ...ಕಿರು ಕವನ ......
ನಾನೆದ್ದೆ ಬೇಗನೆ ಇಂದು
ಕಾರಣ ಬರೆಯಲೇಬೇಕು ಕವನ ಪ್ರಕೃತಿಯ ಮೇಲೆಂದು...
ಹಕ್ಕಿಗಳ ಚಿಲಿಪಿಲಿಯ ನಾದಕ್ಕೆ
ಅರಳುತ್ತಿರುವ ಹೂಗಳ ಕಂಪಿಗೆ
ಚುಮುಚುಮು ಮಂಜಿನ ಸ್ಪರ್ಶಕೆ
ನಾ ಮರತೆ ನನ್ನನ್ನು ಇಂದು .....
           ಮಾಗಿಯ ಚಳಿಗೆ ಎಚ್ಹೆತ್ತು ಕಣ್ತೆರೆದು ನೋಡಿದೆ ..
           ಪಡುವಣದಿ ಮೂಡಿದ ರವಿಯು...
           ಮಾಡಿದ ನನ್ನನ್ನು ಒಬ್ಬ ಕವಿಯು..
ಈ ಕವನಕ್ಕೆ ಸ್ಪೂರ್ತಿ ರವಿಯೋ ,,ರಜಿಯೋ
ತಿಳಿಯದು ಈ ಕವಿ ಹೃದಯಕ್ಕೆ
ಅಂತೂ ಬರೆದೆನು ಕವನ ಪ್ರಕೃತಿಯ ಮೇಲೆ ..
ತೋರಿಸಲು ಆ ಕಪಿ ಹೃದಯಕ್ಕೆ...
                                   sathya.....

Thursday, December 03, 2009

ಪ್ರೀತಿಯ......ಫಲಚಿನ್ನ ನಾ ಪ್ರೀತಿಸಿದೆ ನಿನ್ನ ...
ಬಯಸದೆ ಬೇರೇನೂ ನಿನ್ನಿಂದ ...
ಬಯಸದ ನನಗೆ ನೀ ಕೊಟ್ಟ ಉಡುಗೊರೆ...
ನೊಂದ ಹೃದಯ .......
ಬರಿದಾದ ಮನ .....
ಬತ್ತಿ ಹೋದ ಭಾವನೆಗಳು ....
ಕಾಡುವ ನೆನಪುಗಳು....
ಭಗ್ನ ಪ್ರೇಮಿ ಎಂಬ ಬಿರುದು .....
ಇವಿಷ್ಟು ಕೊಟ್ಟು ನೀ ಸ್ವಾಭಿಮಾನಿಯಾದೆ
ಪಡೆದ ನಾನು..... .......
........... ............. ......
ಕಳೆದು ಹೋಗಿರುವೆ....
ಚಿನ್ನಾ...
ಬಯಸದೆ ಬಂದ ಭಾಗ್ಯ ಅಂದರೆ ಇದೇನಾ?

....[ದು][ನಿ]ರಾಸೆ
ಹಾಲಿನಂತ ಸ್ನೇಹಕ್ಕೆ, ಪ್ರೀತಿಯೆಂಬ ಎರಡಕ್ಷರದ ಹುಳಿ ಹಿಂಡಿ
ಒಡೆದು ಹೋದ ಹಾಲನ್ನಿಡಿದು ದು:ಖಿಸುತ್ತಿರುವ ಪಾಪಿ ನಾನು
ತಿಳಿಯದೆ ಹುಳಿ ಹಿಂಡಿದೆ ಕ್ಷಮಿಸು ಎಂದು ಸುಳ್ಹೇಗೆ ಹೇಳಲಿ
ತಿಳಿದು ಏಕೆ ಹುಳಿ ಹಿಂಡಿದೆ ಎಂದು ನೀ ಕೇಳಿದರೆ ನಾ ಏನ ಹೇಳಲಿ
ಬೆಳದಿಂಗಳಿಗೆ ಆಸೆ ಪಟ್ಟು
ನಕ್ಷತ್ರದ ಬೆಳಕಿಗೂ ಚ್ಯುತಿ ತಂದಿರುವೆ
ಕ್ಷಮಿಸುವೆಯ ಗೆಳತಿ ....
''ನಿರಾಸೆ''ಗೀಡು ಮಾಡಿದ ಈ ''ದುರಾಸೆ''ಯ
ದ್ರೋಹಿ ಮನಸನ್ನ .........
ಸತ್ಯ.............

'ಬಂಜರೆದೆಯ ಒಡೆಯ''


'

ಬಂದವರೆಲ್ಲ ಪ್ರೀತಿ ಎಂಬ
ಬೀಜ ಬಿತ್ತಿದರು.....
ಬಿತ್ತಿದ ಬೀಜಕ್ಕೆ....
ಭಾವನೆಗಳ ಮಳೆ ಸುರಿಸಿ
ಕನಸಿಂದ ಆರೈಕೆ ಮಾಡುತ್ತ
ಪಸಲಿಗಾಗಿ ಕಾಯುತಿದ್ದೆ....
ಪಸಲು ಬರುವ ಮುನ್ನವೇ
ಬೆಳೆದು ನಿಂತ ಪ್ರೀತಿಯ ಮರವನ್ನು
ಬುಡ ಸಮೇತ ಕತ್ತರಿಸಿ
ನೆನಪೆಂಬ ಬೇರನ್ನು ಬಿಟ್ಟಿದ್ದಾರೆ.....
ಬತ್ತಿರುವ ಭಾವನೆಗಳಿಂದ
ಮಳೆ ಸುರಿಸಲಾಗದೆ ...
ಕಮರಿ ಹೋಗಿರುವ ಕನಸುಗಳಿಂದ
ಉಳುಮೆ ಮಾಡಲಾಗದೆ
ಪರಿತಪಿಸುತ್ತಿರುವ .....
''ಬಂಜರೆದೆಯ ಒಡೆಯ ನಾನು''.......

                                     ಸತ್ಯ .........

ಸ್ನೇಹಾನಾ/ಪ್ರೀತಿನಾ.....?

ನೆನೆದ ಪ್ರತಿ ಕ್ಷಣವೂ ನಿನ್ನ ಪಡೆಯಬೇಕೆಂಬ ಹಂಬಲ...
ಪಡೆಯುವುದು ಕನಸೆಂದು ಅರಿವಾದಾಗ
ಬೇಡವಾಗಿದೆ ಈ ನಿಜ ಜೀವನ...
ಯಾರಿಗೆ ಹೇಳಲಿ ಏನೆಂದು ಹೇಳಲಿ ನಾ ಪಡುತ್ತಿರುವ ಪರಿತಾಪ...
ನೆನಪಿಗೆ ಮಸಿ ಬಳಿದು, ಕನಸ್ಸಿಗೆ ಕಣ್ಕಟ್ಟಿ
ಸ್ನೇಹಕ್ಕೆ ಬೆಲೆಕೊಡಲೆತ್ನಿಸುತ್ತಿರುವೆ...
ಆದರೂ ನೀ ಮರಳಿ ನೆನಪಾಗುತ್ತಿರುವೆ, ಕನಸಾಗಿ ಕಾಡುತ್ತಿರುವೆ
ನೀನೆ ಹೇಳು ....ಇದು ಸ್ನೇಹಾನಾ/ಪ್ರೀತಿನಾ......?

ಸತ್ಯ ....

ಒಂಟಿ ನಾವಿಕ ........ಮನದಾಳದಲ್ಲಿ ನೆನಪಿನ ಅಲೆ ಬಡಿದು....
ದಿಕ್ಕೆಟ್ಟು ನಿಂತ ಪ್ರೀತಿಯ ಹಡಗಿನ....
ಒಂಟಿ ನಾವಿಕನ ಅಂತರಾಳದ ಮಾತು....
ಕೂಗಿ ಹೇಳಿದರು ಕೇಳದಷ್ಟು ಅಲೆಯ ಸದ್ದು...
ನೆನಪಿನ ಭೋರ್ಗರೆತಕೆ ಮನಸನ್ನು ಮುಡಿಪಿಟ್ಟು....
ನಾ ಒಂಟಿಯಲ್ಲವೇ ಎಂದು ಬೇಸರದ ನಿಟ್ಟುಸಿರಿಟ್ಟು ...
ಕಾಯುತ್ತಿರುವೆ ನಿನಗಾಗಿ ಈ ಹೃದಯ ಮೀಸಲಿಟ್ಟು ...
ಬರುವೆಯಾ ಗೆಳತಿ ........
ಈ ಒಂಟಿ ನಾವಿಕನ .........
ಪ್ರೀತಿಗೆ ಬೆಲೆಕೊಟ್ಟು ........?
                       ಸತ್ಯ .......

''ನೀ ಮಾಡಿದ್ದು ಸರಿಯಾ......?''ಓ.... ಮನಸೇ
ನಿನ್ನ ಅರಿಯದ ಮನಸ್ಸಿಗೆ, ನೀ ಏಕೆ ಸೋಲುವೆ
ನಿನಗನಿಸಿದ್ದೆಲ್ಲ ನನ್ನಿಂದ ಮಾಡಿಸುವೆ
ನೀ ಏಕೆ ಹೀಗೆ....
ಬಿಟ್ಟು ಬಿಡು ನನ್ನ.....
ಭಾವನೆಗಳ ಜೊತೆ ಆಟ ಆಡಿ...
ಪ್ರೀತಿ ಎಂಬ ಅಪರಾಧ ಮಾಡಿಸಿ
ಭಗ್ನ ಪ್ರೇಮಿ ಎಂಬ ಬಿರುದು ಕೊಟ್ಟು ...
ಯಾವುದೋ ಮೂಲೆಯಲ್ಲಿ ಅವಿತು ನಗುತ್ತಿರುವೆಯಾ ?
ನಗು....ನಗು.....
ಆದರೆ
ನನ್ನದೊಂದು ಮನವಿ.....
ನಿನಗೂ ಒಂದು ಒಳ ಮನಸ್ಸಿದೆಯಲ್ಲ ....
ಕೇಳು ಒಮ್ಮೆ ಆ ಮನಸ್ಸನ್ನು ....
ನೀ ...ಮಾಡಿದ್ದು ಸರಿಯಾ.....?

ಇಂತಿ ನಿನ್ನ ಪ್ರೀತಿಯ.....
          ನನ್ನ ಹೃದಯ .....
                        ಸತ್ಯ.......

'' ಮತ್ತೆ ಸಿಗುವ ''ಹೇಗೆ ಹೇಳಲಿ ಗೆಳತಿ ವಿದಾಯ
ನನಗಿಂತ ನಾ ಇಷ್ಟಪಡುವ ಕೆಲವರಲ್ಲಿ ಒಬ್ಬಳಾಗಿರುವ ನಿನಗೆ
ನಾ ಹೇಗೆ ಹೇಳಲಿ ಗೆಳತಿ ವಿದಾಯ
ಅರಿಯದೆ ಬೆಳೆದ ಗೆಳೆತನದ ಆಳ ನಮಗೆ ತಿಳಿಯದು
ನೆನೆದರೆ ತೆಲುವೆ, ಮರೆತರೆ ಮುಳುಗುವೆ ಎನ್ನುವ ನನಗೆ
ದಡವ ಸೇರುವ ತವಕವಿಲ್ಲ ......
ಚಳಿಯೋ ಮಳೆಯೋ ಪ್ರಾಣವಿರುವವರೆಗೂ,
ಈ ಬಾಳ ನೌಕೆಯಲಿ ಸ್ನೇಹದ ಪ್ರಯಾಣ .....
ಇದ ನೀ ಮರೆಯದಿರು ಮರೆತು ಮರುಗದಿರು ಗೆಳತಿ.....
ಇಸ್ಟೆಲ್ಲಾ ತಿಳಿದು ನಾ ಹೇಗೆ ಹೇಳಲಿ ವಿದಾಯ ....
ಬದಲಿಗೆ ನಾ ಹೇಳುವೆ ''ಮತ್ತೆ ಸಿಗುವ''

                                               ಸತ್ಯ...........

ನೆನಪು .......ನಾ ನನ್ನ ಮರೆಯುವೆ ನೀ ನನಗೆ ನೆನಪಾದಾಗ
ನೀ ನನಗೆ ತಿಳಿಯದೆ ನೆನಪಾಗುವೆ ನಾ ನಿನ್ನ ಮರೆಯಲೆತ್ನಿಸಿದಾಗ
ನಿನ್ನ ನೆನಪಲ್ಲೇ ನಾ ಬದುಕುತ್ತಿರುವೆ
ಬದುಕೇ ನೆನಪಾದರೆ ಎಂಬ ಭಯವೂ ಇದೆ
ನಿನ್ನ ನೆನಪಿಲ್ಲದೆ ಬದುಕೇ ಇಲ್ಲ ಅನಿಸುತ್ತಿದೆ ...
ನಿನ್ನ ನೆನೆದು ಬದುಕಲೋ, ಬದುಕಲು ನಿನ್ನನ್ನು ನೆನೆಯಲೋ
ಇದನರಿಯದ ಬದುಕು ಕ್ಷೀಣಿಸುತ್ತಿದೆ ........
ಕ್ಷೀಣಿಸುತ್ತಿರುವ ಬದುಕಿನಲ್ಲೂ ನಿನ್ನ
     ''ನೆನಪೆಂಬ ಹಣತೆ''
         ಬೆಳಗುತ್ತಿದೆ.......
                            ಸತ್ಯ..........

ಮನದಾಳದ ಮಾತು ......
ಗೆಳತಿ ...
ನನ್ನ ಮನಸೆಂಬ ಕಣಜದಲ್ಲಿ
ನಿನ್ನ ಪ್ರತಿಬಿಂಬ ಹಿಡಿದಿಟ್ಟು
ಆಸೆ ಎಂಬ ಹೊದಿಕೆ ಹೊದಿಸಿ
ಪ್ರೀತಿ ಎಂಬ ಜೋಗುಳ ಹಾಡಿ
ನಿನ್ನ ನಿದ್ದೆಯ ಕಾಯುವೆ ......
ನೀ ಎಚ್ಚರವಾಗದಿರು ಗೆಳತಿ
ನನ್ನ ಹೊದಿಕೆ ಸರಿಸುವತನಕ
ನನ್ನ ಜೋಗುಳ ನಿಲ್ಲುವತನಕ ......
ಇದ ನೀ ಪಾಲಿಸಿದ್ದೆಯಾದರೆ
ನಿನಗೆ ಚಿರನಿದ್ರೆ ಕಚಿಥ ...........

ಸತ್ಯ..........

ಮಧುರ ಯಾತನೆ....... 
 
ಮನಸಿನಲಿ ಹಿಡಿದು
ಹೃದಯದಲಿ ಬಚ್ಚಿಟ್ಟು
ನೆತ್ತರಲಿ ಬರೆದು
ಎದೆ ಬಡಿತದಲಿ ನುಡಿಯುತ್ತಿರುವೆ
ನಾ ನಿನ್ನ ಪ್ರೀತಿಸುವೆ ಎಂದು......

ತಿಳಿಯದೆ ನಿನಗೆ ಈ ಹೃದಯದ ಯಾತನೆ
ನಾ ಹೇಗೆ ತಿಳಿಸಲಿ ಭಾವನೆಗಳ ಚಿಂತನೆ
ಇದ ನೀ ಅರಿಯದಿದ್ದರು ನನಗಿಲ್ಲ ಯೋಚನೆ
ಕಾರಣ
ಈ ಮುಗ್ದ ಮನಸ್ಸಿಗೆ ಇದೆ ""ಮಧುರ ಯಾತನೆ ""

ಸತ್ಯ.......

Wednesday, December 02, 2009

'ಬಿಳಿ ಹಾಳೆಯ ಪಯಣ''


ಹಾಯ್ ಗೆಳೆಯರೇ ಈ ಕವನ ನಮ್ಮ ಪ್ರವಾಸದ ದಿನಗಳಲ್ಲಿ ಮೂಡಿ ಬಂದದ್ದು ...
ಈ ಕವಿತೆಗೆ ಸ್ಪೂರ್ತಿ ನನ್ನ ಗೆಳೆಯ ವಿನಯ್ ...
ಕಾರಣ ಪ್ರತಿ ಬಾರಿ ನಾವು ಪ್ರವಾಸ ಹೋದಾಗಲೂ ಇವನು ಒಂದು ಪುಸ್ತಕದಲ್ಲಿ ನಮ್ಮೆಲ್ಲರ ಹಸ್ತಾಕ್ಷರ ತೆಗೆದುಕೊಳ್ಳುತ್ತಾನೆ ....ಈ ವಿಚಾರವೇ ನನ್ನ ಈ ಕವಿತೆಗೆ ಸ್ಪೂರ್ತಿ ........
''ಬಿಳಿ ಹಾಳೆಯ ಪಯಣ''
ಮರೆಯಲಾಗದ ದಿನಗಳು
ಕುಶಿಯಲ್ಲಿ ಮಿಂದೆದ್ದ ದಿನಗಳು
ನಮ್ಮ ಪ್ರವಾಸದ ದಿನಗಳು ....
ಅದಕ್ಕಿಡಿದ ನಿಲುವುಗನ್ನಡಿ ...
ನೆನಪನ್ನು ಮೆಲಕು ಹಾಕುವ .....
ಈ ಬಿಳಿಯ ಪುಟಗಳು .....
ಇಲ್ಲುಂಟು ಪ್ರತಿಯೊಬ್ಬರ ಹಸ್ತಾಕ್ಷರ ..
ಈ ಹಸ್ತಾಕ್ಷರಗಳ ಬೆಲೆ
ನಮ್ಮ ಗೆಳೆತನದ ಸಾಕ್ಷಾತ್ಕಾರ ....
ಬದುಕಿರುವಷ್ಟು ದಿನ
ಈ ಬಿಳಿ ಹಾಳೆಯಲ್ಲಿ
ನಡೆಯಲಿ ನಮ್ಮ ಗೆಳೆತನದ ಪಯಣ...
ಈ ಬಿಳಿ ಹಾಳೆಯ ಪಯಣಕ್ಕೆ
ಅನುವು ಮಾಡಿದ ಓ ನನ್ನ ಗೆಳೆಯನೆ
ನಿನಗಿದೋ ನನ್ನ ನಮನ....
ಸತ್ಯ ......
೨೨ ಫೆಬ್ರವರಿ ೨೦೦೯

ತಳ ಮಳ


ತಳ ಮಳ
ಕ್ಷಣ ಕ್ಷಣವೂ ನಿನದೆ ನೆನಪು
ಮನದ ಕಣ ಕಣದಲ್ಲೂ ನಿನದೆ ಛಾಪು
ಕನಸಿನಲ್ಲೂ ನಿನದೆ ಪ್ರತಿರೂಪು
ತಿಳಿಯದಾಗಿದೆ ನನಗೆ ನಿಜ ರೂಪು ...
ಕೇಳುವ ಆಸೆ ದೈರ್ಯವಿಲ್ಲ
ಕೇಳದೆ ಇರಲು ಆಗುವುದಿಲ್ಲ
ಊಹಿಸುವ ಶಕ್ತಿ ನನಗಿಲ್ಲ
ಕಾಯುವ ತಾಳ್ಮೆ ಇಲ್ಲವೇ ಇಲ್ಲ ......
ಬೇಗನೆ ಹೇಳು ಉತ್ತರವ
ತಡೆಯಲಾರೆ ತಳಮಳವ
ಬಿಡುಗಡೆಗೊಳಿಸು ಹೃದಯವ
ದೂರ ಮಾಡು ಮನಸಿನ ದುಗುಡವ .......
ಸತ್ಯ.....

Search This Blog