Thursday, December 03, 2009

'' ಮತ್ತೆ ಸಿಗುವ ''ಹೇಗೆ ಹೇಳಲಿ ಗೆಳತಿ ವಿದಾಯ
ನನಗಿಂತ ನಾ ಇಷ್ಟಪಡುವ ಕೆಲವರಲ್ಲಿ ಒಬ್ಬಳಾಗಿರುವ ನಿನಗೆ
ನಾ ಹೇಗೆ ಹೇಳಲಿ ಗೆಳತಿ ವಿದಾಯ
ಅರಿಯದೆ ಬೆಳೆದ ಗೆಳೆತನದ ಆಳ ನಮಗೆ ತಿಳಿಯದು
ನೆನೆದರೆ ತೆಲುವೆ, ಮರೆತರೆ ಮುಳುಗುವೆ ಎನ್ನುವ ನನಗೆ
ದಡವ ಸೇರುವ ತವಕವಿಲ್ಲ ......
ಚಳಿಯೋ ಮಳೆಯೋ ಪ್ರಾಣವಿರುವವರೆಗೂ,
ಈ ಬಾಳ ನೌಕೆಯಲಿ ಸ್ನೇಹದ ಪ್ರಯಾಣ .....
ಇದ ನೀ ಮರೆಯದಿರು ಮರೆತು ಮರುಗದಿರು ಗೆಳತಿ.....
ಇಸ್ಟೆಲ್ಲಾ ತಿಳಿದು ನಾ ಹೇಗೆ ಹೇಳಲಿ ವಿದಾಯ ....
ಬದಲಿಗೆ ನಾ ಹೇಳುವೆ ''ಮತ್ತೆ ಸಿಗುವ''

                                               ಸತ್ಯ...........

No comments:

Search This Blog