Wednesday, December 02, 2009

'ಬಿಳಿ ಹಾಳೆಯ ಪಯಣ''


ಹಾಯ್ ಗೆಳೆಯರೇ ಈ ಕವನ ನಮ್ಮ ಪ್ರವಾಸದ ದಿನಗಳಲ್ಲಿ ಮೂಡಿ ಬಂದದ್ದು ...
ಈ ಕವಿತೆಗೆ ಸ್ಪೂರ್ತಿ ನನ್ನ ಗೆಳೆಯ ವಿನಯ್ ...
ಕಾರಣ ಪ್ರತಿ ಬಾರಿ ನಾವು ಪ್ರವಾಸ ಹೋದಾಗಲೂ ಇವನು ಒಂದು ಪುಸ್ತಕದಲ್ಲಿ ನಮ್ಮೆಲ್ಲರ ಹಸ್ತಾಕ್ಷರ ತೆಗೆದುಕೊಳ್ಳುತ್ತಾನೆ ....ಈ ವಿಚಾರವೇ ನನ್ನ ಈ ಕವಿತೆಗೆ ಸ್ಪೂರ್ತಿ ........
''ಬಿಳಿ ಹಾಳೆಯ ಪಯಣ''
ಮರೆಯಲಾಗದ ದಿನಗಳು
ಕುಶಿಯಲ್ಲಿ ಮಿಂದೆದ್ದ ದಿನಗಳು
ನಮ್ಮ ಪ್ರವಾಸದ ದಿನಗಳು ....
ಅದಕ್ಕಿಡಿದ ನಿಲುವುಗನ್ನಡಿ ...
ನೆನಪನ್ನು ಮೆಲಕು ಹಾಕುವ .....
ಈ ಬಿಳಿಯ ಪುಟಗಳು .....
ಇಲ್ಲುಂಟು ಪ್ರತಿಯೊಬ್ಬರ ಹಸ್ತಾಕ್ಷರ ..
ಈ ಹಸ್ತಾಕ್ಷರಗಳ ಬೆಲೆ
ನಮ್ಮ ಗೆಳೆತನದ ಸಾಕ್ಷಾತ್ಕಾರ ....
ಬದುಕಿರುವಷ್ಟು ದಿನ
ಈ ಬಿಳಿ ಹಾಳೆಯಲ್ಲಿ
ನಡೆಯಲಿ ನಮ್ಮ ಗೆಳೆತನದ ಪಯಣ...
ಈ ಬಿಳಿ ಹಾಳೆಯ ಪಯಣಕ್ಕೆ
ಅನುವು ಮಾಡಿದ ಓ ನನ್ನ ಗೆಳೆಯನೆ
ನಿನಗಿದೋ ನನ್ನ ನಮನ....
ಸತ್ಯ ......
೨೨ ಫೆಬ್ರವರಿ ೨೦೦೯

No comments:

Search This Blog