Thursday, September 15, 2016

A TRIBUTE TO TEAM MUNGARU MALE 2

ಚಂದನವನದಲ್ಲಿ ಮತ್ತೆ ಮಳೆ ಸುರಿಸಲು ಮುಂದಾದ ಮುಂಗಾರು ಮಳೆ ೨ ತಂಡಕ್ಕೆ .... 
ಅಭಿಮಾನದ ಅಭಿನಂದನಾ ಗೀತಾರ್ಪಣೆ....
ಮುಂಗಾರು ಮಳೆ -೨.. ಕನ್ನಡದ ಬಹು ನಿರೀಕ್ಷಿತ ಚಿತ್ರ...ಈ ಚಿತ್ರದ ''ಸರಿಯಾಗಿ ನೆನಪಿದೆ ನನಗೆ" ಹಾಡಿಗೆ ಗುರುಗಳಾದ ಜಯಂತ್ ಕಾಯ್ಕಿಣಿವರು ಸಾಹಿತ್ಯ ಬರೆದಿದ್ದು ..ಎಲ್ಲರಿಗೂ ಇಷ್ಟವಾಗಿದ್ದು ಗುನುಗಲು ಶುರು ಮಾಡಿರುವುದಂತೂ ನಿಜ.. ಈ ಹಾಡಿನ ಸಂಗೀತಕ್ಕೆ ನನಗೂ ಸಾಹಿತ್ಯ ಬರೆಯಬೇಕೆನಿಸಿ ಮಾಡಿದ ಪ್ರಯತ್ನದ ಫಲ....ಈ ಸಾಲುಗಳು...
ಈ ಸಾಲುಗಳಿಗೆ ಧ್ವನಿಯಾಗಿರುವುದು ಗೆಳೆಯ ರವಿಕಿರಣ್
ಉತ್ತಮ ಸಂಗೀತ ನೀಡಿದ ಅರ್ಜುನ್ ಜನ್ಯಾರವರಿಗೆ ಹಾಗು ಸೀಕ್ವೆಲ್ ಮಾಡಲು ಧೈರ್ಯ ಮಾಡಿದ ನಿರ್ದೇಶಕರಾದ ಶಶಾಂಕ್ ರವರಿಗೆ ಧನ್ಯವಾದಗಳು....
ಮುಂಗಾರು ಮಳೆ ತಂಡಕ್ಕೆ ಶುಭಾಷಯಗಳು...
ಕನಸಲ್ಲಿ ಕೆಣಕಿದೆ ನನಗೆ...
ಇದಕೆಲ್ಲಾ ಕಾರಣ ಕಿರುನಗೆ...
ಮನದಾ..
ಪ್ರತಿ ಹಾಳೆಯೊಳಗೂ ನಿನದೇ ಬರವಣಿಗೆ...
ಕನಸಿನ ಒಲುಮೆಗೆ ಹೆಸರನು ಹುಡುಕುತಾ...
ಅಲೆದಾಡುವುದು....
ಇನ್ನು ಖಚಿತಾ.. ‌‌‌‌ |‌‌‌‌|ಕನಸಲ್ಲಿ||
ನಿನ್ನಲ್ಲೇ ಇದೆ‌ ಎಲ್ಲಾ ಉತ್ತರ...
ನೀನೆ ನನ್ನಯ ಪ್ರಶ್ನಾ ಪತ್ರಿಕೆ....
ಕಣ್ಣಾ ಮುಚ್ಚಲೂ ನೀನೆ ಕಾಣುವೆ..
ನೀನೆ ದೀವಿಗೆ ನನ್ನ ಬಾಳಿಗೆ...
ಬರೆದೂ ನಾನು ಮುದ್ದಾದ ಅಧ್ಯಾಯ...
ಕೂಗಿ ಹೇಳುವೆ ನಿನ್ನಸರೆ ಉಪಮೇಯ..
ನನ್ನಯ ಪ್ರತಿನುಡಿ ನಿನ್ನನೇ ಜಪಿಸುತಾ...
ಹಾಡಾಗುವುದು....
ಇನ್ನು ಖಚಿತಾ.... ||ಕನಸಲ್ಲಿ||
ನಿನ್ನ ನೋಟಕೆ ಸೋತು ಹೋಗಿದೆ..
ಗೆಲುವೆ ಬೇಡದ ನನ್ನ ಹೃದಯವೂ...
ನಿನ್ನ ಕಾಣದ ನನ್ನ ಜೀವಕೆ..
ಊಹೆ ಮೀರಿದ ಅಂಧಕಾರವೂ...
ಕಣ್ಣ ಕರೆಗೆ ನಾನಾದೆ ನಿನ್ನೋನು..
ಕಣ್ಣಂಚಲ್ಲೇ ಉಳಿಬೇಡ ನೀನಿನ್ನೂ...
ಕನಸಿನ ಮಡುವಲಿ ನೆನಪನೂ ಕೆದಕುತಾ...
ಕಳೆದೋಗುವುದು..
ಇನ್ನು ಖಚಿತಾ.... ‌‌‌||ಕನಸಲ್ಲಿ||

ಸಾಹಿತ್ಯ : ಸತೀಶ್ ಎ .ಎಸ್
ಗಾಯನ : ರವಿಕಿರಣ್ ಎಸ್ ಎಮ್

No comments:

Search This Blog