Tuesday, December 21, 2010

ಮುರಿದ ಸಾಲುಗಳು


ಹಾಯ್ ಫ್ರೆಂಡ್ಸ್... ಈ ಅಂಕಣಕ್ಕೆ ಸ್ಪೂರ್ತಿ,,,

ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು,,ಎಂಬ,ಬ್ಲಾಗಿನ  ಹೆಸರಲ್ಲಿ,,,ಮನಸಿಗೆ ಹತ್ತಿರವಾದ ಕವನ ಹಾಗು ಅಂಕಣಗಳನ್ನು ಬರೆಯುತ್ತಿರುವ ಸೌಮ್ಯ ಎಂಬವರು,,,,

 ಬೋರ್ ಹೊಡಿಸೋ ಕ್ಲಾಸಿನಲ್ಲಿ ಕುಳಿತು ನೋಟ್ ಬುಕ್ ನ ಕೊನೆಯ ಪೇಜಿನಲ್ಲಿ ಗೀಚಿದ ಸಾಲುಗಳನ್ನು ಅವರು..... ಬೇಸರದ ಮನದ ಭಾವಗಳಿಗೆ "ಮುರಿದ ಸಾಲುಗಳು " "broken lines "ಎಂಬ ತಲೆ ಬರಹದೊಂದಿಗೆ ತುಂಬಾ ಅದ್ಬುತವಾಗಿ ಬರೆದಿದ್ದರು,,,ಇದನ್ನು ಓದಿದ ನನಗೆ ನನ್ನ ನೋಟ್ ಬುಕ್ ಕೊನೆಯ ಹಾಳೆಗಳು ನೆನಪಿಗೆ ಬಂದವು,,ಅದರ ಪರಿಣಾಮವೇ..ಈ ನನ್ನ   ''ಮುರಿದ ಸಾಲುಗಳು'' 
 ಕ್ಷಮಿಸಿ ಸೌಮ್ಯ ...ನಾನು ಕೂಡ ಅದೇ ತಲೆ ಬರಹವನ್ನು ಉಪಯೋಗಿಸುತ್ತಿದ್ದೇನೆ,,ಕಾರಣ ಅದು,,ನನಗೆ  ತುಂಬಾ ಇಷ್ಟವಾಯಿತು ಮತ್ತು ಅದಕ್ಕಿಂತ ಸೂಕ್ತವಾದ ತಲೆ ಬರಹ ಇನ್ನೊಂದಿಲ್ಲ ಎಂಬುದು ನನ್ನ ಅನಿಸಿಕೆ..

''ಭಗ್ನ ಪ್ರೇಮಿಯ ಬಂಜರೆದೆಯಲ್ಲಿ ಭಾವನೆಗಳ ಕಾರಂಜಿ''...!

''ನಿನ್ನ ದಾರಿಗಾಗಿ ಕಾದೆ, ಕಾದೆ,ಕಾದು.. ಸುಸ್ತಾದೆ....ಆದರೂ ಕಾಯುತ್ತಿರುವೆ,,ಏಕೆಂದರೆ ನಾನಿನ್ನು ಬದುಕಿರುವೆ"........!
 
''ಕಣ್ ಮುಚ್ಚಿದರು  ನೀನೆ ಕಾಣುವೆ ಎಂದ ಮೇಲೆ  ನನ್ನ ಚಾಳೀಸಿಗೇನು ಕೆಲಸ''.......!
 
''ನಿನ್ನ ನೆನಪಲ್ಲೇ ನನ್ನ ನಾ ಮರತೆ....ಅದು ಸರಿ ನಾನು ಯಾರು...?
 
''ಮೊದಲ ನೋಟದಲ್ಲೇ ಪ್ರೀತಿ ಹುಟ್ಟತ್ತೆ ಅಂತ ನಿನ್ನ  ನೋಡೋದ ಮೇಲೆ  ಅನ್ನಿಸಿದ್ದು....
                                                         ಹಾಗೇನೆ,,
ಆ  ಪ್ರೀತಿ ಬಹಳ ದಿನ ಉಳಿಯಲ್ಲ ಅಂತ ಇವಾಗ ನನ್ನ ನೋಡಿ ಅನ್ನಸ್ತಾ ಇದೆ'' .....!
  
''ನೀನು ಪ್ರೀತ್ಸಲ್ಲ ಅಂತಾ ಗೊತ್ತಿದ್ರು ನಿನ್ನನ್ನೇ ಪ್ರೀತಿಸ್ತಾ ಇರೋ ನನ್ನಂತ ಭಂಡ  ಈ ಜಗತ್ತಿನಲ್ಲೇ  ಯಾರು  ಇಲ್ಲ ಕಣೆ ''....! 
 
ನಿದ್ದೆ ಇರದ ಪ್ರತಿ ರಾತ್ರಿ ನಿನದೆ ನೆನಪು ....
ನಿನ್ನ ನೆನದ ಪ್ರತಿ ರಾತ್ರಿ ನಿದ್ದೆಯೇ ಬಾರದು...
ನಿನ್ನ ನೆನಪಿರದ ರಾತ್ರಿಯೇ ಇಲ್ಲದಾಗಿದೆ...
ಬೇಗ ಬಂದು ನನ್ನ ಮಲಗಿಸೆ ಹುಡುಗಿ.....! 
 
ಮುಸ್ಸಂಜೆಯ ಕನಸಲ್ಲಿ ನಿನ್ನನ್ನು ಕಂಡೆ...
ಎಚ್ಚರಾಗಿ ಕಣ್ತೆರೆದು ನೋಡಿದೆ ಎಲ್ಲೆಲ್ಲು ಕತ್ತಲೆ....
ಮತ್ತೆ ಕಣ್ಮುಚ್ಚಿದೆ ಆದರೆ ನೀನೆ ಕಂಡೆ......!
 
''ಕಾಯುತ್ತಿವೆ  ಕಣ್ಣುಗಳು ನಿನ್ನ ಬರುವಿಕೆಗೆ....ಅಗಲಿದ ಅಮ್ಮನಿಗೆ ಕಾಯುತ್ತಿರುವ ಅನಾಥ ಮಗುವಿನಂತೆ''...! 
 
  ''ನೀನಿಲ್ಲದಿರುವ ನಾನು, ನೀರಿನಿಂದ  ಹೊರಗಿರುವ ಮೀನು''...! 
 
''ಪ್ರೀತಿಯ ಅಮಲಿನಲ್ಲಿ ಅಮಾವಾಸ್ಯೆಯ ಇರುಳು ಹಗಲಿನಂತೆ....!
 
''ದೀರ್ಘ ಕಾಲದ ಹ್ಯಾಂಗ್ ಓವರ್ ಮುರಿದ ಪ್ರೀತಿಯ ನಿಶೆ.....!
 
''ಯಾವೊಬ್ಬನು,,,ನಾ ಹುಟ್ಟುವಾಗ ಇದೆ ಜಾತಿಯಲ್ಲಿ ಹುಟ್ಟಬೇಕೆಂದು,,ಅಪ್ಲಿಕೇಶನ್  ಹಾಕ್ಕೊಂಡು,,ಹುಟ್ಟಲ್ಲ''...!
 
''ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ,,,
                     ಉಸಿರಿರೋವರೆಗೂ ನಾ ಪ್ರೀತಿಸುವೆ ಬಿಡದೆ ನಿನ್ನನೆ''....!
 
''ಸೋತವರೆಲ್ಲ,,,ಪ್ರೀತಿಸಲಿಲ್ಲವೇ,,,ಎಂಬ..ಪ್ರಶ್ನೆಯು,,,ಯಾವಾಗಲು ಕಾಡುತ್ತದೆ....
                              ನಾನು ಸೋತಿರುವೆ,,,,ಆದರೆ...ಜಾಸ್ತಿ,,ಪ್ರೀತಿಸಿದೆ ಅನ್ಸತ್ತೆ '',,,,! 
  
 
''she is the girl whoo fullfills all my imaagination...
  i forgot the thing that .....
                    even she also had an imagination........!
 
'' ಮರಳಿ ಬರುವೆಯಾ ನೀ ನೆಡೆದು ಹೋದ ದಾರಿಯಲ್ಲಿ,,,
ಕಾರಣ ಕಾಯುತ್ತಿರುವೆ ನಾ ಬೇರೆ ಯಾರಾದರು ಅಳಿಸಿಯಾರು ಎಂಬ ಭಯದಲ್ಲಿ'' .....! 
 
ಪ್ರೀತಿನಾ..ಪ್ರೀತಿಯಿಂದ ಗೆಲ್ಲಬೇಕು..ಅಂತ,,ಇರುವ ಪ್ರೀತಿಯನ್ನೆಲ್ಲಾ ಧಾರೆ ಎರೆದು... ಗೆದ್ದು,,ಪ್ರೆಮಿಗಳಾದವರು,,ಕೆಲವರು....
ಸೋತು... ಭಗ್ನ ಪ್ರೆಮಿಗಳಾದವರು,,ಹಲವರು,,,!
 
ಪ್ರೀತಿ ಮಾಡುವುದು,,ಅಪರಾಧ,,ಎಂದಾಗಿದ್ದರೆ,,,ಭೂಮಿಯ ಮೇಲೆ,,,,ಕಾರಾಗೃಹದ ವಿನಹ,,ಬೇರೇನೂ,,ಇರುತ್ತಿರಲಿಲ್ಲ...!
 
ಭಾಷೆ ಉಳಿವಿಗೆ ...
ಬೇಕಿಲ್ಲ ಗೆಳೆಯ ಬಲಿಧಾನ....
ಮೊದಲು ನೀ ನುಡಿ ನಿನ್ನ ಭಾಷೆಯ ,,,
ಕಂಡಾಗ ಪರಭಾಷೆಯ ಮಹಾಶಯ..........!

''ನಾ ಕಂಡ ಪ್ರತಿ ಚಂದದ ಹುಡುಗಿ ನನ್ನ ಪ್ರಿಯತಮೆಯಾಗಿದ್ದರೆ ಎಂಬ ನವಿರಾದ ಮನಸ್ಸಿನ ಭಾವ ನಿಜವಾಗಿದ್ದರೆ....? 
 
''ಕಣ್ಣು ಕಡಲಾದ ಮೇಲೆ ಕಣ್ಣೀರಿಗೆ ಬರವೇ,,,,!
 
''ಕೊರೆಯುವ ಚಳಿಯಲ್ಲಿ, ಸುರಿಯುವ ಮಳೆಯಲ್ಲಿ ಅದ್ಯಾಕೆ ನೆನಪಿಗೆ ಬರ್ತಿಯೇ,,,ಹುಡುಗಿ''...! 
 
"ಬಳಲಿ ಬೆಂಡಾಗಿರುವೆ  ಆದರೂ ತೆಳಲಾಗದೆ ಮುಳುಗುತ್ತಿರುವೆ ...! 
 
''ಇರನಾರದವನು ಇರುವೆ ಬಿಟ್ಕೊಂಡ ಅಂತ ನಿನ್ನ ಪ್ರೀತಿಸಿದ್ ಮೇಲೆ ಅನ್ನಿಸಿದ್ದು...! 
 
''ಹೆಣ್ಣು '' ತರ್ಕಕ್ಕೆ ನಿಲುಕದವಳು, ವರ್ಣನೆಗೆ ಎಟುಕದವಳು, ಊಹೆಗೆ ಸಿಗದವಳು...ಒಂದೇ ಮಾತಲ್ಲಿ ಹೇಳ್ಬೇಕಂದ್ರೆ.....
ನಮ್ ತಾಯಾಣೆ ಗೊತ್ತಿಲ್ಲ ...!  
 
 
                                                     ಸತ್ಯ ಸಿಂಪ್ಲಿ ಸ್ಟುಪಿಡ್...? 

 

10 comments:

Soumya. B said...

''ಭಗ್ನ ಪ್ರೇಮಿಯ ಬಂಜರೆದೆಯಲ್ಲಿ ಭಾವನೆಗಳ ಕಾರಂಜಿ''
''ನಿನ್ನ ನೆನಪಲ್ಲೇ ನನ್ನ ನಾ ಮರತೆ....ಅದು ಸರಿ ನಾನು ಯಾರು...?
ನಿದ್ದೆ ಇರದ ಪ್ರತಿ ರಾತ್ರಿ ನಿನದೆ ನೆನಪು ....
ನಿನ್ನ ನೆನದ ಪ್ರತಿ ರಾತ್ರಿ ನಿದ್ದೆಯೇ ಬಾರದು...
ನಿನ್ನ ನೆನಪಿರದ ರಾತ್ರಿಯೇ ಇಲ್ಲದಾಗಿದೆ...
ಬೇಗ ಬಂದು ನನ್ನ ಮಲಗಿಸೆ ಹುಡುಗಿ.....!
''ದೀರ್ಘ ಕಾಲದ ಹ್ಯಾಂಗ್ ಓವರ್ ಮುರಿದ ಪ್ರೀತಿಯ ನಿಶೆ.....!

superb lines satya :) liked it :) and thanx :)

ಸಿಂಪ್ಲಿ ಸ್ಟುಪಿಡ್ ಸತ್ಯ,,,,, said...

thank,,,u sowmya......

ವಾಣಿಶ್ರೀ ಭಟ್ said...

super!!!!!
nanna blogigomme banni

ಸಿಂಪ್ಲಿ ಸ್ಟುಪಿಡ್ ಸತ್ಯ,,,,, said...

thank..u..vanishree,,,already i am a follower of ur blog

ಕಾವ್ಯ ಸುಗಂಧ said...

she is the girl who fulfills all my imagination, i forgot a thinh that even she has imagination....
super kano...

kannere kadaladare kanneerige barave,, chennagide...

ಸಿಂಪ್ಲಿ ಸ್ಟುಪಿಡ್ ಸತ್ಯ,,,,, said...

thank,,,u dear

Pradeep Rao said...

Really wonderful lines... ಸಾಲುಗಳು ಮುರಿದವಾದರು.. ಮನಸ್ಸು ಮುಟ್ಟುವಂಥದ್ದು.. ಸೌಮ್ಯರವರ ಮುರಿದ ಸಾಲುಗಳು ಸಹ ಓದಿದ್ದೆ.. ತುಂಬಾ ಚೆನ್ನಾಗಿದೆ..

ಸಿಂಪ್ಲಿ ಸ್ಟುಪಿಡ್ ಸತ್ಯ,,,,, said...

tgank..u pradeep.......

santhoshvidya said...

gr8 maga.......u hav d ability........keep going............ Datz y, i told, " U CAN NOT WALK AWAY FROM LOVE "

ಸಿಂಪ್ಲಿ ಸ್ಟುಪಿಡ್ ಸತ್ಯ,,,,, said...

any way ,thanks,,,dude

Search This Blog