Thursday, December 03, 2009
ನೆನಪು .......
ನಾ ನನ್ನ ಮರೆಯುವೆ ನೀ ನನಗೆ ನೆನಪಾದಾಗ
ನೀ ನನಗೆ ತಿಳಿಯದೆ ನೆನಪಾಗುವೆ ನಾ ನಿನ್ನ ಮರೆಯಲೆತ್ನಿಸಿದಾಗ
ನಿನ್ನ ನೆನಪಲ್ಲೇ ನಾ ಬದುಕುತ್ತಿರುವೆ
ಬದುಕೇ ನೆನಪಾದರೆ ಎಂಬ ಭಯವೂ ಇದೆ
ನಿನ್ನ ನೆನಪಿಲ್ಲದೆ ಬದುಕೇ ಇಲ್ಲ ಅನಿಸುತ್ತಿದೆ ...
ನಿನ್ನ ನೆನೆದು ಬದುಕಲೋ, ಬದುಕಲು ನಿನ್ನನ್ನು ನೆನೆಯಲೋ
ಇದನರಿಯದ ಬದುಕು ಕ್ಷೀಣಿಸುತ್ತಿದೆ ........
ಕ್ಷೀಣಿಸುತ್ತಿರುವ ಬದುಕಿನಲ್ಲೂ ನಿನ್ನ
''ನೆನಪೆಂಬ ಹಣತೆ''
ಬೆಳಗುತ್ತಿದೆ.......
ಸತ್ಯ..........
ಮನದಾಳದ ಮಾತು ......
ಗೆಳತಿ ...
ನನ್ನ ಮನಸೆಂಬ ಕಣಜದಲ್ಲಿ
ನಿನ್ನ ಪ್ರತಿಬಿಂಬ ಹಿಡಿದಿಟ್ಟು
ಆಸೆ ಎಂಬ ಹೊದಿಕೆ ಹೊದಿಸಿ
ಪ್ರೀತಿ ಎಂಬ ಜೋಗುಳ ಹಾಡಿ
ನಿನ್ನ ನಿದ್ದೆಯ ಕಾಯುವೆ ......
ನೀ ಎಚ್ಚರವಾಗದಿರು ಗೆಳತಿ
ನನ್ನ ಹೊದಿಕೆ ಸರಿಸುವತನಕ
ನನ್ನ ಜೋಗುಳ ನಿಲ್ಲುವತನಕ ......
ಇದ ನೀ ಪಾಲಿಸಿದ್ದೆಯಾದರೆ
ನಿನಗೆ ಚಿರನಿದ್ರೆ ಕಚಿಥ ...........
ಸತ್ಯ..........
ನನ್ನ ಮನಸೆಂಬ ಕಣಜದಲ್ಲಿ
ನಿನ್ನ ಪ್ರತಿಬಿಂಬ ಹಿಡಿದಿಟ್ಟು
ಆಸೆ ಎಂಬ ಹೊದಿಕೆ ಹೊದಿಸಿ
ಪ್ರೀತಿ ಎಂಬ ಜೋಗುಳ ಹಾಡಿ
ನಿನ್ನ ನಿದ್ದೆಯ ಕಾಯುವೆ ......
ನೀ ಎಚ್ಚರವಾಗದಿರು ಗೆಳತಿ
ನನ್ನ ಹೊದಿಕೆ ಸರಿಸುವತನಕ
ನನ್ನ ಜೋಗುಳ ನಿಲ್ಲುವತನಕ ......
ಇದ ನೀ ಪಾಲಿಸಿದ್ದೆಯಾದರೆ
ನಿನಗೆ ಚಿರನಿದ್ರೆ ಕಚಿಥ ...........
ಸತ್ಯ..........
ಮಧುರ ಯಾತನೆ.......
ಮನಸಿನಲಿ ಹಿಡಿದು
ಹೃದಯದಲಿ ಬಚ್ಚಿಟ್ಟು
ನೆತ್ತರಲಿ ಬರೆದು
ಎದೆ ಬಡಿತದಲಿ ನುಡಿಯುತ್ತಿರುವೆ
ನಾ ನಿನ್ನ ಪ್ರೀತಿಸುವೆ ಎಂದು......
ತಿಳಿಯದೆ ನಿನಗೆ ಈ ಹೃದಯದ ಯಾತನೆ
ನಾ ಹೇಗೆ ತಿಳಿಸಲಿ ಭಾವನೆಗಳ ಚಿಂತನೆ
ಇದ ನೀ ಅರಿಯದಿದ್ದರು ನನಗಿಲ್ಲ ಯೋಚನೆ
ಕಾರಣ
ಈ ಮುಗ್ದ ಮನಸ್ಸಿಗೆ ಇದೆ ""ಮಧುರ ಯಾತನೆ ""
ಸತ್ಯ.......
ಹೃದಯದಲಿ ಬಚ್ಚಿಟ್ಟು
ನೆತ್ತರಲಿ ಬರೆದು
ಎದೆ ಬಡಿತದಲಿ ನುಡಿಯುತ್ತಿರುವೆ
ನಾ ನಿನ್ನ ಪ್ರೀತಿಸುವೆ ಎಂದು......
ತಿಳಿಯದೆ ನಿನಗೆ ಈ ಹೃದಯದ ಯಾತನೆ
ನಾ ಹೇಗೆ ತಿಳಿಸಲಿ ಭಾವನೆಗಳ ಚಿಂತನೆ
ಇದ ನೀ ಅರಿಯದಿದ್ದರು ನನಗಿಲ್ಲ ಯೋಚನೆ
ಕಾರಣ
ಈ ಮುಗ್ದ ಮನಸ್ಸಿಗೆ ಇದೆ ""ಮಧುರ ಯಾತನೆ ""
ಸತ್ಯ.......
Wednesday, December 02, 2009
'ಬಿಳಿ ಹಾಳೆಯ ಪಯಣ''
ಈ ಕವಿತೆಗೆ ಸ್ಪೂರ್ತಿ ನನ್ನ ಗೆಳೆಯ ವಿನಯ್ ...
ಕಾರಣ ಪ್ರತಿ ಬಾರಿ ನಾವು ಪ್ರವಾಸ ಹೋದಾಗಲೂ ಇವನು ಒಂದು ಪುಸ್ತಕದಲ್ಲಿ ನಮ್ಮೆಲ್ಲರ ಹಸ್ತಾಕ್ಷರ ತೆಗೆದುಕೊಳ್ಳುತ್ತಾನೆ ....ಈ ವಿಚಾರವೇ ನನ್ನ ಈ ಕವಿತೆಗೆ ಸ್ಪೂರ್ತಿ ........
''ಬಿಳಿ ಹಾಳೆಯ ಪಯಣ''
ಮರೆಯಲಾಗದ ದಿನಗಳು
ಕುಶಿಯಲ್ಲಿ ಮಿಂದೆದ್ದ ದಿನಗಳು
ನಮ್ಮ ಪ್ರವಾಸದ ದಿನಗಳು ....
ಅದಕ್ಕಿಡಿದ ನಿಲುವುಗನ್ನಡಿ ...
ನೆನಪನ್ನು ಮೆಲಕು ಹಾಕುವ .....
ಈ ಬಿಳಿಯ ಪುಟಗಳು .....
ಇಲ್ಲುಂಟು ಪ್ರತಿಯೊಬ್ಬರ ಹಸ್ತಾಕ್ಷರ ..
ಈ ಹಸ್ತಾಕ್ಷರಗಳ ಬೆಲೆ
ನಮ್ಮ ಗೆಳೆತನದ ಸಾಕ್ಷಾತ್ಕಾರ ....
ಬದುಕಿರುವಷ್ಟು ದಿನ
ಈ ಬಿಳಿ ಹಾಳೆಯಲ್ಲಿ
ನಡೆಯಲಿ ನಮ್ಮ ಗೆಳೆತನದ ಪಯಣ...
ಈ ಬಿಳಿ ಹಾಳೆಯ ಪಯಣಕ್ಕೆ
ಅನುವು ಮಾಡಿದ ಓ ನನ್ನ ಗೆಳೆಯನೆ
ನಿನಗಿದೋ ನನ್ನ ನಮನ....
ಸತ್ಯ ......
೨೨ ಫೆಬ್ರವರಿ ೨೦೦೯
ತಳ ಮಳ
ತಳ ಮಳ
ಕ್ಷಣ ಕ್ಷಣವೂ ನಿನದೆ ನೆನಪು
ಮನದ ಕಣ ಕಣದಲ್ಲೂ ನಿನದೆ ಛಾಪು
ಕನಸಿನಲ್ಲೂ ನಿನದೆ ಪ್ರತಿರೂಪು
ತಿಳಿಯದಾಗಿದೆ ನನಗೆ ನಿಜ ರೂಪು ...
ಕೇಳುವ ಆಸೆ ದೈರ್ಯವಿಲ್ಲ
ಕೇಳದೆ ಇರಲು ಆಗುವುದಿಲ್ಲ
ಊಹಿಸುವ ಶಕ್ತಿ ನನಗಿಲ್ಲ
ಕಾಯುವ ತಾಳ್ಮೆ ಇಲ್ಲವೇ ಇಲ್ಲ ......
ಬೇಗನೆ ಹೇಳು ಉತ್ತರವ
ತಡೆಯಲಾರೆ ತಳಮಳವ
ಬಿಡುಗಡೆಗೊಳಿಸು ಹೃದಯವ
ದೂರ ಮಾಡು ಮನಸಿನ ದುಗುಡವ .......
ಸತ್ಯ.....
ಕ್ಷಣ ಕ್ಷಣವೂ ನಿನದೆ ನೆನಪು
ಮನದ ಕಣ ಕಣದಲ್ಲೂ ನಿನದೆ ಛಾಪು
ಕನಸಿನಲ್ಲೂ ನಿನದೆ ಪ್ರತಿರೂಪು
ತಿಳಿಯದಾಗಿದೆ ನನಗೆ ನಿಜ ರೂಪು ...
ಕೇಳುವ ಆಸೆ ದೈರ್ಯವಿಲ್ಲ
ಕೇಳದೆ ಇರಲು ಆಗುವುದಿಲ್ಲ
ಊಹಿಸುವ ಶಕ್ತಿ ನನಗಿಲ್ಲ
ಕಾಯುವ ತಾಳ್ಮೆ ಇಲ್ಲವೇ ಇಲ್ಲ ......
ಬೇಗನೆ ಹೇಳು ಉತ್ತರವ
ತಡೆಯಲಾರೆ ತಳಮಳವ
ಬಿಡುಗಡೆಗೊಳಿಸು ಹೃದಯವ
ದೂರ ಮಾಡು ಮನಸಿನ ದುಗುಡವ .......
ಸತ್ಯ.....
Saturday, September 19, 2009
Subscribe to:
Posts (Atom)





