Sunday, February 14, 2010

...ಪ್ರೇಮಿಗಳ ದಿನ,,,,,,,


ಫೆಬ್ರವರಿ ೧೪ ...ಪ್ರೇಮಿಗಳ ದಿನ,,,,,,,
                   ಪ್ರೀತಿನಾ..ಪ್ರೀತಿಯಿಂದ ಗೆಲ್ಲಬೇಕು..ಅಂತ,,ಇರುವ ಪ್ರೀತಿಯನ್ನೆಲ್ಲಾ ಧಾರೆ ಎರೆದು... ಗೆದ್ದು,,ಪ್ರೆಮಿಗಳಾದವರು,,ಕೆಲವರು,,,...,,ಸೋತು... ಭಗ್ನ ಪ್ರೆಮಿಗಳಾದವರು,,ಹಲವರು,,, .....
ಪ್ರೀತಿಯಲ್ಲಿ ಗೆದ್ದವರಿಗೆ,,ಪ್ರೇಮಿಗಳ ಆಚರಣೆಯ,,,ಸಡಗರ,,,,, ಸೋತು,,ಭಗ್ನ ಪ್ರೆಮಿಗಳಾದವರಿಗೆ ...ಪ್ರೀತಿ,,ಯಾಕೆ,,ಮಾಡಿದೆನೋ,,ಎಂಬ ಪಶ್ಚತಾಪದಲ್ಲಿ..ಮನಸ್ಸು,,,ಮರಮರ ....
                       ಎಲ್ಲ,,ಪ್ರೇಮಿಗಳಿಗೂ,,,ಹಾಗು,,ನನ್ನ ಪ್ರೀತಿಯ ನೊಂದ,,ಭಗ್ನ ಪ್ರೇಮಿಗಳಿಗೂ....ನಿಮ್ಮ ಭಗ್ನ ಪ್ರೇಮಿ ಗೆಳೆಯ,,,ಸತ್ಯ ಸಿಂಪ್ಲಿ ಸ್ತುಪಿಡ್ನಿಂದ...... ಪ್ರೇಮಿಗಳ ದಿನದ ಶುಭಾಶಯಗಳು,,,,,

ಶ್ರೀ,,ರಾಮ ಸೇನೆಯವರಿಗೆ,,,,,
ನಾವು,,ಭಾರತೀಯರು,,,ಪಾಶ್ಚಾತ್ಯ ಸಂಸ್ಕೃತಿಯನ್ನು,,,ಅಳವಡಿಸಿ ಕೊಳ್ಳಬಾರದು  ,,ಎಂಬ ನಿಮ್ಮ ನಿಲಿವಿಗೆ,,,,ಸ್ವಾಗತ....
ಆದರೆ,,ನಿಮಗೆ,,ಭಾರತೀಯರಲ್ಲಿ,,ಪ್ರೇಮಿಗಳ ದಿನದ ಆಚರಣೆ ಮಾತ್ರ  ಪಾಶ್ಚಾತ್ಯ ಸಂಸ್ಕೃತಿಯ,,,ಪ್ರತೀಕವಾಗಿ ,,ಕಂಡಿತೆ,,,,ಇನ್ನುಳಿದ,,,ಎಲ್ಲ ವಿಚಾರದಲ್ಲೂ,,ನಾವು,,ಭಾರತೀಯ   ಸಂಸ್ಕೃತಿಯನ್ನೇ ,,ಬಳಸುತ್ತಿದ್ದೆವೆಯೇ,, ಒಮ್ಮೆ ಯೋಚಿಸಿ,,ನೋಡಿ,,,,
                      ಪ್ರೇಮಿಗಳ ದಿನ....ಪಾಶ್ಚಾತ್ಯ ಸಂಸ್ಕೃತಿಯ ಪ್ರತೀಕವಿರಬಹುದು ..ಆದರೆ,,,ಪ್ರೀತಿ..ಅಲ್ಲ...ಭಾರತೀಯರಿಗೂ,,ಹೃದಯ ಮನಸ್ಸು ಭಾವನೆ,,ಎಲ್ಲ ಇವೆ,,,,
ಪವಿತ್ರವಾದ ಪ್ರೀತಿಗೆ,,,ಸಂಸ್ಕೃತಿಯೆಂಬ,,,ಪವಿತ್ರ ಪದವನ್ನು ,,ಅಕ್ರಮ..ರೀತಯಲ್ಲಿ.. ಬೆರೆಸಿ,,,ಎಲ್ಲ ಯುವ ಜನಾಂಗದ...ಅಸಂಸ್ಕ್ರುತಿಯೆಂಬ  ಅಪವಿತ್ರತೆಯ,,,,ದ್ವೇಷಕ್ಕೆ,,ಗುರಿಯಾಗಬೇಡಿ,,,,ಒಳ್ಳೆಯದು,,ಎಲ್ಲೇ ಇದ್ದರು,,ಅಳವಡಿಸಿಕೊಳ್ಳಿ...ನೀವು ಚಿಕ್ಕವರಾಗುವುದಿಲ್ಲ ........
ಪ್ರೀತಿ ಮಾಡುವುದು,,ಅಪರಾಧ,,ಎಂದಾಗಿದ್ದರೆ,,,ಭೂಮಿಯ ಮೇಲೆ,,,,ಕಾರಾಗೃಹದ ವಿನಹ,,ಬೇರೇನೂ,,ಇರುತ್ತಿರಲಿಲ್ಲ ,,,,

ಪ್ರೇಮಿಗಳಿಗೆ,,,,,,,
 ಗೆಳೆಯರೇ,,ಪ್ರೇಮಿಗಳು,,ಅಂದರೆ ಯಾರು,,,,,ಪ್ರೀತಿಯಲ್ಲಿ ಗೆದ್ದವರು ಅನ್ನಬಹುದೇ,,,,,ಜಗತ್ತಿನಲ್ಲಿ ..ಪ್ರೀತಿಯಲ್ಲಿ ಗೆದ್ದವರಿಗಿಂತ,,ಸೋತವರೇ,,ಹೆಚ್ಚು,,,,,ಯಾಕೆ..?  ಸೋತವರಾರು,,ಪ್ರೀತಿಸಲೇ ಇಲ್ಲವೇ,,,?
ಅಸಲಿಗೆ,,ಪ್ರೀತಿ ..ಎಂದರೆ,,,ಏನು,,,,,
ಎರಡು,,ಮನಸ್ಸುಗಳ,,ಮಿಲನ,,ಅನ್ನಬಹುದೇ....
ಅಥವಾ
ಮೊದಲ ನೋಟದಲ್ಲೇ,,,,ಮನಸನ್ನು,,,,ಸೆರೆಮಾಡಿದ,,ಭಾವ,,ಅನ್ನಬಹುದೇ...
ಅಥವಾ,,
ತಪ್ಪು ಅಂತ,,ತಿಳಿದ ,,ಮೇಲು,,ಮಾಡುವ ಮತ್ತೊಂದು,,ತಪ್ಪು,,ಅನ್ನಬಹುದೇ,,,,
ಹೀಗೆ,,ಒಬ್ಬೊಬ್ಬರದು,,ಒಂದೊಂದು,,ವ್ಯಾಕ್ಯಾನ...
ಗೆಳೆಯರಿಗೆ,,ಪ್ರೀತಿಗೆ,,ವ್ಯಾಕ್ಯಾನನೆ  ,,ಇಲ್ಲ,,,
ಅದೊಂದು,,,,,ವರ್ಣಿಸಲಾಗದೆ ,,,,,ಅನುಭವಿಸುವ,,ಸುಂದರ,,ಭಾವ,,,,ಇದು,,ಕೂಡ,, ವ್ಯಾಕ್ಯಾನ ...ಅಲ್ಲ ನನ್ನ ಅಭಿಪ್ರಾಯ,,,,,
ಹೀಗಿರುವಾಗ,,,,ನಮ್ಮ ಯುವಕರು,,ಪ್ರೀತಿ,,ಯಾಕೆ ಮಾಡ್ತಾರೆ,,,?
ಶೋಕಿಗಾಗಿ,,,,
ವಯಸ್ಸಿನ ಹಂಬಲಕ್ಕಾಗಿ....
ಕ್ಷಣಿಕ ಸುಖಕ್ಕಾಗಿ .......
ಕಾಲ ಹರಣ ಮಾಡಲು  .....
 ಇನ್ನು,,ಇತ್ಯಾದಿ ಕಾರಣಗಳಿಗಾಗಿ  ,,ಪ್ರೀತಿಮಾಡ್ತಾರೆ,,,,ಇದನ್ನೆಲ್ಲಾ ಪ್ರೀತಿ..ಎಂದು,,ಯಾವತ್ತಿಗೂ,,,,ಕರೆಯಬೇಡಿ,,,,
ಪ್ರೀತಿ,,ಪವಿತ್ರವಾದ ಸಂಬಂದ  ,,,,ಅದನ್ನು,,,ಕೆಟ್ಟ ಕಾರಣಗಳಿಗಾಗಿ,,,,,ಉಪಯೋಗಿಸಬೇಡಿ,,,,,,,
ಹಾಗೆ,,ಮಾಡಿದಲ್ಲಿ ನೀವು ನಮ್ಮ ಸಂಸ್ಕೃತಿ,,ಹಾಗು ನಿಮ್ಮ ಪ್ರೀತಿ ಎರಡನ್ನು ಉಳಿಸಿದಂತೆ,,,,,
ಎಲ್ಲರ ,,ಪ್ರೀತಿ,, ಯಶಸ್ವಿಯಾಗಲಿ,,ಸುಮಧುರ ಸುಂದರ ಬದುಕು ನಿಮ್ಮದಾಗಲಿ.....
                          ಸಿಂಪ್ಲಿ ಸ್ಟುಪಿಡ್ ಸತ್ಯ,,,,,?

Sunday, February 07, 2010

my autograph.....


ಹಾಯ್ ಗೆಳೆಯರೇ ಇದು ನಿಮ್ಮ ಸತ್ಯನ ಆಟೋಗ್ರಾಪ್ ......
ನಾನು ಇವಾಗ ಹೇಳೋಕೆ ಹೊರಟಿರೋದು ನನ್ನ ಜೀವನದಲ್ಲಿ ನಡೆದ ಒಂದು ಪ್ರೇಮ ಕಥೆಯ ಬಗ್ಗೆ,,,,,,,

ಕಂಡೆ ಕಡಲ ತೀರದ ಚೆಲುವೆಯ...
ಕನ್ನಡಮ್ಮನ ಮಡಿಲಲ್ಲಿ .....
ಕಂಡ ಒಡನೆ ಮೂಡಿತು ಪ್ರೀತಿ....
ಎನ್ನ ಮನದಂಗಳದಲ್ಲಿ .......

ಇದೇನಿದು ಕವನ ಅಂದುಕೊಂಡ್ರಾ? ಮುಂದೆ...ಓದಿ....
ನನ್ನಾಕೆಯನ್ನು...... ಕ್ಷಮಿಸಿ ನಾ ಇಷ್ಟ ಪಟ್ಟ ಹುಡುಗಿಯನ್ನು ಐದು ವರ್ಷದ ಹಿಂದೆ ಮೊದಲ ಬಾರಿ ಕಂಡಾಗ ಬರೆದ ನಾಲ್ಕು ಸಾಲುಗಳಿವು... ಅದೇನಾಯ್ತೋ...ಮುಂದೆ ಬರೆಯಲು ಆಗಲೇ ಇಲ್ಲ... ಬಹಳ ಪ್ರಯತ್ನ ಪಟ್ಟು ಕೊನೆಗೆ ಕ್ಲೈಮಾಕ್ಸ್ ...ನೋಡಿ ಬರೆದರಾಯಿತು ಎಂದು ಸುಮ್ಮನಿದ್ದೆ,,,,, ಇವಾಗ ಆ ಕಾಲ ಕೂಡಿ ಬಂದಿದೆ,,,,ಶ್ ಶ್ ಶ್
ಫ್ರೆಂಡ್ಸ್,,,ನಾ ಇಷ್ಟ ಪಟ್ಟ ಹುಡುಗಿ ಕಡಲ ತೀರದವಳು...ಅಂದರೆ ಕೇರಳದವಳು....ಹಾಗೆ ಚೆಲುವೆಯು... ಕೂಡ .ನಾ ಅವಳ ಕಂಡಿದ್ದು ನನ್ನ ಮೊದಲ ವರ್ಷದ ಬಿ ಎಸ್ಸಿ ಕ್ಲಾಸ್ನಲ್ಲಿ ...ಆ ದಿನ ಮೊದಲ ನೋಟಕ್ಕೆ ಎದ್ವಾ ತದ್ವಾ ಫಿದಾ
ಆಗ್ ಬಿಟ್ಟಿದ್ದೆ ಹೇಳ್ಬೇಕು ಅಂದ್ರೆ,,ಪಾಗಲ್ ಆಗಿದ್ದೆ ಕಾರಣ ...ಆ ದಿನ ಆಕೆ ಧರಿಸಿದ್ದ ನೀಲಿ ಬಣ್ಣದ ಫುಲ್ ಸ್ಲೀವ್ ಡ್ರೆಸ್, ಮತ್ತು ಆ ಮುಗ್ದ ಮುಗುಳ್ನಗೆ, ಹಣೆಯಲ್ಲಿ ದರಿಸಿದ್ದ ಕುಂಕುಮ, ಒಂದೇ ನೋಟಕ್ಕೆ ನನ್ನನ್ನು ನಾ ಮರೆಯುವಂತೆ ಮಾಡಿದ್ದಳು, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಕಲ್ಪನೆಯ ಹುಡುಗಿ ಅವಳಾಗಿದ್ದಳು.....ಇಷ್ಟು ಸಾಕಲ್ಲವೇ ಅವಳ ಬಗ್ಗೆ,,,,,
ಅಂದಿನಿಂದ ನನ್ನ ಸೈಕಲ್ ತುಳಿತ ಶುರುವಾಯಿತು ......ಎಲ್ಲೇ ಹೋದರು ಹಿಂಬಾಲಿಸುವುದು...ಅವಳು ಲೈಬ್ರರಿಗೆ ಹೋದ ತಕ್ಷಣ ನನಗೆ ಓದುವುದರ ಬಗ್ಗೆ ಇಂಟರೆಸ್ಟ್ ಬರ್ತಿತ್ತು..ಅವಳಿಗೆ ತಿಳಿಯದಂತೆ ಅವಳನ್ನು ಕದ್ದು ನೋಡುವುದು,,,ಇವೆಲ್ಲ ನಡೆದೆ ಇತ್ತು.. ಎಷ್ಟೇ ಆದರು ಒಂದೇ ಕ್ಲಾಸ್ ಅಲ್ವಾ ಹಾಗೆ ಪರಿಚಯನೂ ಆಯ್ತು ...ಆದರೆ ನಾ ಮಾತಾಡಿಸಿದ್ದು ಕಡಿಮೆ ..ಏಕೆಂದರೆ ಅದು ಹೇಳೋಕಾಗೋಲ್ಲ ,,,ಪ್ರೀತಿಸಿ ನೋಡಿ..ನಿಮಗೆ ತಿಳಿಯುತ್ತೆ ..ಹೀಗೆ ಅವಳನ್ನು ನೋಡುತ್ತಾ ನೋಡುತ್ತಾ ಮೂರು ವರ್ಷಕಳದೆ....
ಈ ಮೂರು ವರ್ಷದಲ್ಲಿ ನಾ ಅವಳ ಮೊದಲು ನೋಡಿದ ದಿನ ,,ಅವಳ ಮೊಬೈಲ್ ನಂಬರ್ ಸಿಕ್ಕ ದಿನ ..ಹೇಗೆ ಹಲವಾರು ವಿಷಯಗಳು ನನ್ನ ಡೈರಿಯಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿವೆ,,,ಅಷ್ಟೇ ಯಾಕೆ ಇವತ್ತಿಗೂ ಅವಳೇ ನನ್ನ ಎಲ್ಲ ಇ ಮೇಲ್
IDಗೆ ಪಾಸ್ವರ್ಡ್ ಆಗಿದ್ದಾಳೆ ಇದೆಲ್ಲ ಯಾಕೆ ಮಾಡಿದೆ ಎಂದರೆ ...ನನಗೆ ಉತ್ತರ ಅವತ್ತು ಗೊತ್ತಿರ್ಲಿಲ್ಲ ಆದರೆ ಇವಾಗ ಉತ್ತರ ಸಿಕ್ಕಿದೆ ಅನಿಸುತ್ತಿದೆ.....ಯಾಕಂದರೆ,,ಈ ರೀತಿ ಒಂದು ಆಟೋಗ್ರಾಪ್ ಸ್ಟೋರಿಗೆ ಬೇಕಿತ್ತೇನೋ ಇದೆಲ್ಲಾ.....ಅನಿಸುತ್ತೆ...
ನನ್ನ ಪ್ರತಿ ಕವನದ ಸ್ಫೂರ್ತಿ ಅವಳಾಗಿದ್ದಳು...ಒಂದು ರೀತಿಯಲ್ಲಿ ಹೇಳ್ಬೇಕಂದ್ರೆ ನನ್ನನ್ನು ಪರಿಪೂರ್ಣ ಕವಿ ಮಾಡಿದಳು ...ವಿಧಿ ವಿಪರ್ಯಾಸ ಅಂದರೆ...ನನ್ನಾವ ಕವನವನ್ನು ಅವಳು ಓದಲಿಲ್ಲ ಕಾರಣ ಅವಳಿಗೆ ಕನ್ನಡ ಬರುತ್ತಿರಲಿಲ್ಲ ..ಮಲೆಯಾಳಂನಲ್ಲಿ ಕವನ ಬರೆಯಲು ನನಗೆ ಮಲಯಾಳಂ ಬರುತ್ತಿರಲಿಲ್ಲ ...ಇನ್ನು ಇಂಗ್ಲಿಷ್ನಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪದಿಸುವಷ್ಟು ಪರಿಣಿತ ನಾನಾಗಿರಲಿಲ್ಲ....
ಅಂತು ಇಂತೂ ಕಷ್ಟ ಪಟ್ಟು ಮಲಯಾಳಂ ಮಾತಾಡೋದು ಕಲಿತೆ ...ಅದೇ ಜೋಶ್ನಲ್ಲಿ ಕಾಲೇಜ್ ಡೇನಲ್ಲಿ "ಹೃದಯದಲ್ಲೂ ನೀನೆ ಇರುವೆ, ಕಣ್ ಮುಂದೆಯೂ ನೀನೆ ಇರುವೆ,,ಕಣ್ ಮುಚ್ಚಿದರು ನೀನೆ ಇರುವೆ,,ಫಾತಿಮಾ ..ಎಂಬ ಮಲೆಯಾಳಂ ಆಲ್ಬಮ್ ಹಾಡನ್ನು ನಾ ಇಷ್ಟ ಪಡುತ್ತಿರವ ಹುಡುಗಿಗಾಗಿ ಸಮರ್ಪಣೆ ಎಂದು ನಾನೇ ಹೇಳಿಕೊಂಡು ಒಂದು ರೀತಿಯಲ್ಲಿ ಹೀರೋ ಆದೆ,,,ಕಾರಣ ಕನ್ನಡದ ಹುಡುಗನೊಬ್ಬ ನಮ್ಮ ಕಾಲೇಜ್ ಇತಿಹಾಸದಲ್ಲಿ ಮಲಯಾಳಂ ಹಾಡು ಹಾಡಿದ್ದು ಪ್ರಥಮ ಆದರೆ ಅಸಲಿ ಪ್ರಾಬ್ಲಮ್ ಶುರುವಾಗಿದ್ದೆ ಅಲ್ಲಿಂದ .... ನಮ್ಮ ಶಿಕ್ಷಕರಿಂದ ಹಿಡಿದು ನನ್ನ ಫ್ರೆಂಡ್ಸ್ ನನ್ನ ಕ್ಲಾಸ್ ಮೇಟ್ಸ್ ... ಎಲ್ಲರದು ಒಂದೇ ಪ್ರಶ್ನೆ...ಯಾರದು ನಿನ್ನ ಫಾತಿಮಾ ?
ಈ ಪ್ರಶ್ನೆಗೆ ಹಾರಿಕೆಯ ಉತ್ತರಗಳನ್ನು ಕೊಡುತ್ತ ಕಾಲ ಕಳೆಯುತ್ತಿದ್ದೆ ,,ಆ ಸಮಯದಲ್ಲಿ ನಾ ಪ್ರೀತಿಸುತ್ತಿರುವ ಹುಡುಗಿಯು ಕೂಡ ನನ್ನನ್ನು ಕೇಳಿದಳು ಯಾರು ನಿನ್ನ ಫಾತಿಮಾ......ಹೇಗಾಗಿರಬಾರದು,,,ನನ್ನ ಪರಿಸ್ಥಿತಿ ...ಬಂದ ಕಣ್ಣಿರನ್ನು ತಡೆದುಕೊಂಡು ಏನೋ ಹಾರಿಕೆ ಉತ್ತರ ಕೊಟ್ಟು ತಪ್ಪಿಸಿಕೊಂಡೆ.......ಇಲ್ಲೂ ವಿಧಿ ಆಟ ಆಡಿತು ,,,,,
ಇನ್ನು farewell ಡೇ ಬಂತು ಕಷ್ಟಪಟ್ಟು ಸಾದನೆ ಮಾಡಿ ಅವಳೊಂದಿಗೆ ಒಂದು ಫೋಟೋ ತೆಗೆಸಿಕೊಂಡೆ,,, ಇಲ್ಲೂ ವಿಧಿ ಆಟ ಆಡಿತು ಅದೊಂದು ಫೋಟೋ ಬಿಟ್ಟು ಉಳಿದೆಲ್ಲ ಫೋಟೋ ಚೆನ್ನಾಗಿ ಬಂದಿದ್ದವು,,,,
ಇನ್ನು ಕೊನೆಯ ದಿನಗಳಲ್ಲಿ ಅವಳ ವರ್ತನೆ ಸ್ವಲ್ಪ ಬದಲಾಯಿತು ಕಾರಣ ಆಕೆಯೇ ನನ್ನ ಫಾತಿಮಾ ಎಂಬ ಅನುಮಾನ ಅವಳಲ್ಲಿ ಮೂಡಿರಬಹುದೆಂಬ ಅನಿಸಿಕೆ ನನ್ನದು....ಅದೇನಾಯಿತೋ ಏನೋ ಆಕೆ ಹೋಗುವಾಗ ನನಗೆ bye ಕೂಡ ಹೇಳದೆ ಹೋದಳು....
ಇದೆಲ್ಲಾ ಆದ ಮೇಲೆ ನಾನು ಸ್ವಲ್ಪ ದಿನ ಭಗ್ನ ಪ್ರೇಮಿ ಆಗಿದ್ದೆ..ಅವಾಗ ನನ್ನಲ್ಲಿ ಬಹಳ ಪ್ರಶ್ನೆ ಮೂಡಿದ್ದವು ,,ನಾ ಪ್ರೀತಿಸಿದ್ದು ತಪ್ಪಾ ,,,ನಾ ಅವಳಿಗೆ ಹೇಳದಿದ್ದು ತಪ್ಪಾ,,,ಅಥವಾ ಪ್ರೀತಿನೆ ತಪ್ಪಾ ಅಂತಾ... ಇಂತಹ ಪ್ರಶ್ನೆಗಳನ್ನು ಹೆದರಿಸುತ್ತಿರುವ ನನ್ನಂತಹ ಸಾವಿರಾರು ಬಡಪಾಯಿ ಹುಡುಗರಿದ್ದಾರೆ,,,, ಅವರಿಗೆಲ್ಲ ನಾ ಹೇಳುವುದು ಇಷ್ಟೇ ,,ನಿಮ್ಮ ಜೀವನದ ಘಟನೆಗಳನ್ನು ಮುಂದೊಂದು ದಿನ ನೆನೆದಾಗ ನಿಮಗೆ ನಗು ಬರುತ್ತದೆ ,,,,,ನಿಜ,,, ನಾನು ಈ ಅಂಕಣ ಬರೆಯುವಾಗ ನಕ್ಕಿದ್ದುಂಟು,,ನಾನು ಹೀಗೆಲ್ಲ ಮಾಡಿದ್ದೇನೆ ಎಂದು,,,,ಆದರೆ ಆ ನಗುವು ಮುಗಿಯು ಮುನ್ನ ನಿಮ್ಮ ಮನದಲ್ಲಿ ಎಲ್ಲೋ ಒಂದು ಕಡೆ ಹೇಳಲಾರದ ಒಂದು ,,,ಭಾವನೆ ಮೂಡುತ್ತದೆ,,,,ಕಣ್ ತುಂಬಿ ಬರುತ್ತದೆ ಅದೇ ನಿಮ್ಮ ನಿಷ್ಕಲ್ಮಶ ಪ್ರೀತಿ,,,,
ಇನ್ನು ...ಆಕೆ ಹೋದ ಮೇಲೆ ನಾ ಅವಳನ್ನು ಮಾತಾಡಿಸಿದ್ದು ಅವಳ ಹುಟ್ಟಿದ ದಿನದಂದು ...ಅವಳಿಗೆ ಶುಭಾಷಯ ಕೋರಲು ಕರೆ ಮಾಡಿದಾಗ ..ಹೀಗೆ ವಿಶೇಷ ಸಂದರ್ಭಗಳ ನೆಪ ಮಾಡಿಕೊಂಡು ಕಾಲ್ ಮಾಡುತ್ತಿದ್ದೆ ಆಕೆಯು ಮಾತನಾಡುತ್ತಿದ್ದಳು...ಈ ಬಾರಿ ಹೊಸ ವರ್ಷದಂದು ಕಾಲ್ ಮಾಡಿದಾಗ ,,ನನ್ನ ಮದುವೆ ನಿಶ್ಚಯವಾಗುವ ಲಕ್ಷಣಗಳಿವೆ..ಹಾಗೆ ಆದಲ್ಲಿ ನಾ ತಿಳಿಸುವೆ ನೀನು ಬರಬೇಕು ಎಂದಳು...ಏನು ಮಾತನಾಡಲಾಗದೆ ಹೂ ಎಂದು ಫೋನ್ ಇಟ್ಟೇ....ಈಗ ಅಂದರೆ ಫೆಬ್ರುವರಿ ಏಳರಂದು ಅವಳ ಮದುವೆ,,,,ಆಕೆ ನನ್ನನ್ನು ಕರೆಯಲಿಲ್ಲ ಬೇರೆ ನನ್ನ ಗೆಳತಿಯರಿಂದ ವಿಷಯ ತಿಳಿಯಿತು ನಾನು ಈ ಕಥೆ ಬರೆದು ಮುಗಿಸುವಹೊತ್ತಿಗೆ ಅವಳ ಮದುವೆ,,,ಬೇರೊಬ್ಬನ ಜೊತೆಗೆ ಕ್ಷಮಿಸಿ ಅವಳು ಇಷ್ಟಪಟ್ಟ ಹುಡುಗನ ಜೊತೆಗೆ ನೆಡೆದುಹೋಗಿದೆ,,,,ನಾ ಅವಳಿಗಾಗಿ ಕೊಡಬೇಕೆಂದು ಐದು ವರ್ಷದಿಂದ ಇಟ್ಟಿದ್ದ ನವಿಲುಗರಿ ನನ್ನೊಂದಿಗೆ ಉಳಿಯಿತು..ಪ್ರಾಯಶಃ ಮದುವೆಗೆ ಕರೆದಿದ್ದಾರೆ ..... ಅದನ್ನು ಆಕೆಗೆ ಕೊಡುವ,,ಕಾಲ ಕೂಡಿಬರುತಿತ್ತು....ಅದರಿಂದಲೂ ನಾ ವಂಚಿತನಾದೆ.....ಪಾಪ...ಮದುವೆಯ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ಮರೆತಿರಬೇಕು....ಹಾಗೆಂದುಕೊಂಡು ನನ್ನ ನಾ ಸಮಾದಾನ ಮಾಡಿಕೊಳ್ಳದೆ ಬೇರೆ ದಾರಿ ಇಲ್ಲ ...
ಗೆಳೆಯರೇ ನನ್ನ ಕಲ್ಪನೆಯ ಹುಡುಗಿ ಅವಳಾಗಿದ್ದಳು ,,,ಅದೇ ರೀತಿ ಅವಳಿಗೂ ಅವನ ಹುಡುಗನ ಬಗ್ಗೆ ಕಲ್ಪನೆ ಇದೆಯಲ್ಲವೇ,,ನಾನು ಅವನಾಗಿರಲಿಲ್ಲ ,,,,,,,,
ಗೊತ್ತಿಲ್ಲದವರಿಗೂ ಒಳ್ಳೆಯದಾಗಲಿ ಎಂದು ಹರಸುವ ನಾನು ......ನಾ ಪ್ರೀತಿಸಿದ ಕ್ಷಮಿಸಿ ನಾ ಪ್ರೀತಿಸುತ್ತಿರುವ ಹುಡುಗಿ ನನ್ನವಳಾಗಲಿಲ್ಲ ಎಂಬ ಮಾತ್ರಕ್ಕೆ ದ್ವೇಷಿಸುವುದು ಯಾವ ನ್ಯಾಯ..?
ಈ ಅಂಕಣದ ಮೂಲಕ ನಾ ಅವಳ ವೈವಾಹಿಕ ಜೀವನ ಶುಭವಾಗಿರಲೆಂದು ,,,,ಹಾರೈಸುತ್ತಿರುವೆ ,,,,ಹಾಗು ಈ ಅಂಕಣ ಓದಿದ ನನ್ನ ಗೆಳೆಯರಲ್ಲಿ ನಾ ಕೆಳುವುದಿಷ್ಟೇ ನೀವು ಕೂಡ ಅವಳ ವೈವಾಹಿಕ ಜೀವನಕ್ಕೆ ಶುಭವಾಗಲೆಂದು ಹಾರೈಸಿ

ನಾ ಬಯಸಿದ್ದೆ ನೀ ಹರಿಸುವೆ..
ನನ್ನ ಬಾಳಲ್ಲಿ ಪ್ರೀತಿಯ ಜಲಧಾರೆ...
ಆದರೆ ನೀನಾಗಿ ಹೋದೆ ನನಗೆ...
ಕೈಗೆಟುಕದ ತಾರೆ .............

WISH U HAPPY MARRIED LIFE DEAR .........
I MISS YOU ...........

ಇಷ್ಟೆಲ್ಲಾ ಆಯಿತು ,,ಮುಂದಾ.......
ದೇವದಾಸ್ ಆಗಿ.....ಹುಚ್ಚನ ತರಹ ತಿರುಗೋ,,,,,, ಯಾವ ಕಲ್ಪನೆಯೂ ಇಲ್ಲ ....ಯಾಕಂದ್ರೆ ಅವಳು ಅವಳನ್ನು ಪ್ರೀತಿಸುತ್ತಿದ್ದ ಒಂದು ಪ್ರೀತಿಯ ಪುಟ್ಟ ಹೃದಯವನ್ನು ಕಳೆದುಕೊಂಡಳು.....
ನಾನು ಕೂಡ ಏನು ಗಳಿಸಲಿಲ್ಲ ,,,ಆದರೆ....ನನಗಾಗಿ ಮುಡಿಪಿಟ್ಟ ಸುಮದುರ ಸುಂದರ ಸವಿ ಸವಿ ನೆನಪುಗಳು....ಕಾಮನಬಿಲ್ಲಿನಂತೆ...ಆಗಾಗ ಬಂದು ಹೋಗುತ್ತವೆ,,,,ಆ ಕಾಮನಬಿಲ್ಲು ಬಂದಾಗ ಎರಡನಿ ಮಳೆ ಬರಲೇಬೇಕು....ಆ ಮಳೆಯ ರೂಪವೇ ...ನನ್ನ ಕಣ್ಣೀರು .... ಆ ಕಣ್ಣೀರಿನ,,,ಹಿಂದಿರುವ ಬಿಂಬ ಎಂದಿಗೂ ಅವಳದೇ  ಆಗಿರುತ್ತೆ  ....
ಇದ್ದಿಷ್ಟು ಪ್ರೀತಿ ಆಯಿತು,,,, ಇದಕ್ಕೂ ಮೀರಿದ್ದು ಜೀವನ ...ಅದನ್ನು ನಡೆಸಲು.....ಮತ್ತೊಬ್ಬಳ..ಅವಶ್ಯಕತೆ..... ಇದ್ದೆ ಇದೆ.....
ಮುಂದಾ,,,,,,,ಮತ್ತೊಂದು ಹಕ್ಕಿಗಾಗಿ ಬೇಟೆ ಶುರು,,,, ಆದರೆ ಈ ಬಾರಿ ನಾ ಮಿಕವಾಗುವುದಿಲ್ಲ ...
                                                                                              ಸತ್ಯ ಸಿಂಪ್ಲಿ ಸ್ಟುಪಿಡ್.......

Search This Blog