Tuesday, September 20, 2016
Nataraja service IAllah Allah Cauveri Version
ಈ ವರ್ಷದ ಸೂಪರ್ ಹಿಟ್ ಹಾಡು ನಟರಾಜ ಸರ್ವಿಸ್ ಚಿತ್ರದ ಅಲ್ಲಾ ಯಾ ಅಲ್ಲಾ... ಈ ಹಾಡಿಗೆ
ಸದ್ಯದ ನಮ್ಮ ಕಾವೇರಿ ಸಮಸ್ಯೆಯ ಪರಿಸ್ಥಿತಿಯನ್ನು ಹೋಲಿಸಿ ರಚಿಸಿದ ಸಾಲುಗಳು.. ಕೇಳಿ
ನಿಮ್ಮ ಅಭಿಪ್ರಾಯ ತಿಳಿಸಿ
ಗಾಯಕರು : ರವಿಕಿರಣ್ ಎಸ ಎಮ್
ಸಾಹಿತ್ಯ : ಸತೀಶ್ ಎ .ಎಸ್
Thursday, September 15, 2016
ಮುಂಗಾರು ಮಳೆ -೨.. ಚಿತ್ರ ವಿಮರ್ಶೆ
ಮುಂಗಾರು ಮಳೆ -೨.. ಕನ್ನಡದ ಬಹು ನಿರೀಕ್ಷಿತ ಚಿತ್ರ...ಈ ಚಿತ್ರದ ಸೀಕ್ವೆಲ್
ಮಾಡಲು ಧೈರ್ಯ ಮಾಡಿದ ನಿರ್ದೇಶಕರಾದ ಶಶಾಂಕ್ ರವರನ್ನು ಅಭಿನಂದಿಸಲೇಬೇಕು....
ಕಾರಣ ಪ್ರೇಕ್ಷಕ ಚಿತ್ರದ ಪ್ರತಿ ಆಯಾಮವನ್ನು ಭಾಗ ೧ ಕ್ಕೆ ತಳುಕು ಹಾಕುವುದಂತೂ ಕಟ್ಟಿಟ್ಟ ಬುತ್ತಿ.. ಇದರ ಅರಿವಿರುವ ನಿರ್ದೇಶಕರು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದಾರೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಚಿತ್ರ ಬಿಡುಗಡೆಗೆ ಮುನ್ನವೇ ಸುಳಿವು ಕೊಟ್ಟಿದ್ದಾರೆ..
"ಕಾಲ ಬದಲಾಗಿದೆ..
ಪ್ರೀತಂ ಕೂಡ ಬದಲಾಗಿದ್ದಾನೆ..
ಅವನ ದೃಷ್ಠಿಕೋನವು ಬದಲಾಗಿದೆ"
ಆದರೆ....
ಕಾರಣ ಪ್ರೇಕ್ಷಕ ಚಿತ್ರದ ಪ್ರತಿ ಆಯಾಮವನ್ನು ಭಾಗ ೧ ಕ್ಕೆ ತಳುಕು ಹಾಕುವುದಂತೂ ಕಟ್ಟಿಟ್ಟ ಬುತ್ತಿ.. ಇದರ ಅರಿವಿರುವ ನಿರ್ದೇಶಕರು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದಾರೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಚಿತ್ರ ಬಿಡುಗಡೆಗೆ ಮುನ್ನವೇ ಸುಳಿವು ಕೊಟ್ಟಿದ್ದಾರೆ..
"ಕಾಲ ಬದಲಾಗಿದೆ..
ಪ್ರೀತಂ ಕೂಡ ಬದಲಾಗಿದ್ದಾನೆ..
ಅವನ ದೃಷ್ಠಿಕೋನವು ಬದಲಾಗಿದೆ"
ಆದರೆ....
"ನೋಡುಗರ ದೃಷ್ಠಿಕೋನವೂ ಬದಲಾಗಬೇಕಿದೆ"
ಸಿನಿಮಾ ನೋಡದ ಎಷ್ಟೋ ಜನ..ಯಾರೋ ಕೆಲವರ ನೆಗೆಟೀವ್ ಪಬ್ಲಿಸಿಟಿಗೆ ಒಳಗಾಗಿ ಸಿನಿಮಾ ಚೆನ್ನಾಗಿಲ್ಲ ಎಂದೂ ನಿರ್ಧರಿಸುವುದು ಅದೆಷ್ಟರ ಮಟ್ಟಿಗೆ ಸರೀಯೋ ನಾ ಕಾಣೆ...
ರಿಮೇಕ್ ಸಿನಿಮಾಗಳಿಗೆ ಜೈ ಅನ್ನುವಾ ಮೊದಲೂ.. ನಮ್ಮ ನಿರ್ದೇಶಕರ ಕನ್ನಡದ ಸ್ವಮೇಕ್ ಚಿತ್ರಗಳಿಗೆ ಬಂಬಲಿಸಿ..ಒಬ್ಬ ನಿರ್ದೇಶಕ ಒಂದು ಸ್ವಮೇಕ್ ಚಿತ್ರವನ್ನು ತೆರೆಯ ಮೇಲೆ ತರುವುದು ಸುಲಭದ ಮಾತಲ್ಲ..ಆ ಚಿತ್ರವನ್ನು ನೋಡಿ ನಂತರ ಆ ಚಿತ್ರದ ಬಗ್ಗೆ ಕಮೆಂಟ್ ಮಾಡುವುದು ಸರಿ ಅನಿಸುತ್ತದೆ..ಯಾರೋ ಹೇಳಿದ ಮಾತನ್ನು ಕೇಳಿ ನಾವು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುವುದು ಒಬ್ಬ ಸದಭಿರುಚಿಯ ಪ್ರೇಕ್ಷಕನ ಲಕ್ಷಣವಲ್ಲ...
ಮುಂಗಾರು ಮಳೆ ಸಿನಿಮಾವನ್ನೆ ಬಯಸಿದ್ದೆ ಆದರೆ..ಭಟ್ಟರ ಭಾಗ ೧ ನ್ನು ನೋಡಬಹುದು..
ಇದು ಭಾಗ ೨....
ಕಣ್ಣಿಗೆ ಮುದ ನೀಡುವ ಶೇಖರ್ ಚಂದ್ರಾರವರ ಛಾಯಾಗ್ರಹಣವಿದೆ..
ಕಿವಿಗೆ ಇಂಪೆನಿಸುವ ಜನ್ಯಾರವರ ಸಂಗೀತವಿದೆ..
ಕವಿ ಶ್ರೇ಼ಷ್ಠರ ಸುಮಧುರ ಸಾಹಿತ್ಯವಿದೆ..
ಕಥೆಯ ನಿರೂಪಣಾ ಶೈಲಿಯಲ್ಲಿ ತಾಜಾತನವಿದೆ..
ಗಣೇಶ್ ಮತ್ತೊಮ್ಮೆ ಮನಸ್ಸಿಗೆ ಹತ್ತಿರವಾಗುತ್ತಾರೆ..
ರವಿಚಂದ್ರನ್ ಅಪ್ಪನ ಪಾತ್ರದಲ್ಲಿ "ಹೀರೋ" ಆಗಿದ್ದಾರೆ..
ನೇಹಾ ಶೆಟ್ಟಿ ಮೊದಲ ಚಿತ್ರದಲ್ಲೆ..ಚಂದನವನದಲ್ಲಿ ನೆಲೆಯೂರುವ ಮುನ್ಸೂಚನೆ ನೀಡಿದ್ದಾರೆ...
ಐಂದ್ರಿತಾ ..ಪಾತ್ರದಲ್ಲಿ ಪ್ರೀತಂಗೆ ಬೋರೆನಿಸುತ್ತಾರೆ ಆದರೆ ಪ್ರೇಕ್ಷಕನಿಗಲ್ಲ..
ಸಾಧುರವರು ಹಾಸ್ಯದಲ್ಲಿ, ರವಿಶಂಕರ್ ಅಪ್ಪನ ಪಾತ್ರದ ಗಂಭೀರ ನಟನೆಯಲ್ಲಿ ಇಷ್ಟವಾಗುತ್ತಾರೆ...
ಯೂರೋಪ್ ಹಾಗು ರಾಜಸ್ಥಾನ ಮತ್ತು ಮಡಿಕೇರಿಯ ರಮ್ಯ ಸ್ಥಾನಗಳು ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರು..
ಇಷ್ಟೆಲ್ಲಾ ಇರುವ ಮುಂಗಾರುಮಳೆ ೨ ..ಸದಭಿರುಚಿಯ ಪೈಸಾ ವಸೂಲ್ ಮೂವಿ ಎಂದೂ ಹೇಳಿದರೆ ಅತಿಶಯೋಕ್ತಿ ಎನಿಸುವುದಿಲ್ಲ...
ಒಬ್ಬ ನಿರ್ದೇಶಕನಾಗಿ ಶಶಾಂಕ್ ರವರು ಗೆದ್ದಿದ್ದಾರೆ....ಬಂದ್ ಹಾಗು ಗಾಸಿಪ್ಗಳಿಂದ ಚಿತ್ರಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ..
ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಿ....
ವಿಶೇಷ ಸೂಚನೆ : ಯಾವುದೇ ಒಂದು ಸಿನಿಮಾವನ್ನು ವೀಕ್ಷಿಸದೆ.. ಯಾರದೋ ಮಾತನ್ನು ಕೇಳಿ..ಹೊಗಳದಿದ್ದರೂ ಪರವಾಗಿಲ್ಲ ತೆಗಳಬೇಡಿ...
ನಿರ್ದೇಶಕನ ಕನಸು, ನಿರ್ಮಾಪಕನ ಹಣ, ಕಲಾವಿದರ,ತಂತ್ರಜ್ಞರ ಶ್ರಮದ ಪ್ರತಿಫಲದಿಂದ ಒಂದು ಉತ್ತಮ ಚಿತ್ರವಾಗುತ್ತದೆ..ಹಲವಾರು ಜನರ ಭವಿಷ್ಯ ಅದರಲ್ಲಿ ಅಡಗಿರುತ್ತದೆ...
ಈ ಎಲ್ಲಾ ದಿಸೆಗಳಲ್ಲಿ ಮುಂಗಾರು ಮಳೆ ೨...ಒಂದು ಉತ್ತಮ ಚಿತ್ರ..
ನೋಡದೆ ಇದ್ದ ಪಕ್ಷದಲ್ಲಿ ..ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ವೀಕ್ಷಿಸಿ..
ಸತೀಶ್ ಎ.ಎಸ್
ಸಿನಿಮಾ ನೋಡದ ಎಷ್ಟೋ ಜನ..ಯಾರೋ ಕೆಲವರ ನೆಗೆಟೀವ್ ಪಬ್ಲಿಸಿಟಿಗೆ ಒಳಗಾಗಿ ಸಿನಿಮಾ ಚೆನ್ನಾಗಿಲ್ಲ ಎಂದೂ ನಿರ್ಧರಿಸುವುದು ಅದೆಷ್ಟರ ಮಟ್ಟಿಗೆ ಸರೀಯೋ ನಾ ಕಾಣೆ...
ರಿಮೇಕ್ ಸಿನಿಮಾಗಳಿಗೆ ಜೈ ಅನ್ನುವಾ ಮೊದಲೂ.. ನಮ್ಮ ನಿರ್ದೇಶಕರ ಕನ್ನಡದ ಸ್ವಮೇಕ್ ಚಿತ್ರಗಳಿಗೆ ಬಂಬಲಿಸಿ..ಒಬ್ಬ ನಿರ್ದೇಶಕ ಒಂದು ಸ್ವಮೇಕ್ ಚಿತ್ರವನ್ನು ತೆರೆಯ ಮೇಲೆ ತರುವುದು ಸುಲಭದ ಮಾತಲ್ಲ..ಆ ಚಿತ್ರವನ್ನು ನೋಡಿ ನಂತರ ಆ ಚಿತ್ರದ ಬಗ್ಗೆ ಕಮೆಂಟ್ ಮಾಡುವುದು ಸರಿ ಅನಿಸುತ್ತದೆ..ಯಾರೋ ಹೇಳಿದ ಮಾತನ್ನು ಕೇಳಿ ನಾವು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುವುದು ಒಬ್ಬ ಸದಭಿರುಚಿಯ ಪ್ರೇಕ್ಷಕನ ಲಕ್ಷಣವಲ್ಲ...
ಮುಂಗಾರು ಮಳೆ ಸಿನಿಮಾವನ್ನೆ ಬಯಸಿದ್ದೆ ಆದರೆ..ಭಟ್ಟರ ಭಾಗ ೧ ನ್ನು ನೋಡಬಹುದು..
ಇದು ಭಾಗ ೨....
ಕಣ್ಣಿಗೆ ಮುದ ನೀಡುವ ಶೇಖರ್ ಚಂದ್ರಾರವರ ಛಾಯಾಗ್ರಹಣವಿದೆ..
ಕಿವಿಗೆ ಇಂಪೆನಿಸುವ ಜನ್ಯಾರವರ ಸಂಗೀತವಿದೆ..
ಕವಿ ಶ್ರೇ಼ಷ್ಠರ ಸುಮಧುರ ಸಾಹಿತ್ಯವಿದೆ..
ಕಥೆಯ ನಿರೂಪಣಾ ಶೈಲಿಯಲ್ಲಿ ತಾಜಾತನವಿದೆ..
ಗಣೇಶ್ ಮತ್ತೊಮ್ಮೆ ಮನಸ್ಸಿಗೆ ಹತ್ತಿರವಾಗುತ್ತಾರೆ..
ರವಿಚಂದ್ರನ್ ಅಪ್ಪನ ಪಾತ್ರದಲ್ಲಿ "ಹೀರೋ" ಆಗಿದ್ದಾರೆ..
ನೇಹಾ ಶೆಟ್ಟಿ ಮೊದಲ ಚಿತ್ರದಲ್ಲೆ..ಚಂದನವನದಲ್ಲಿ ನೆಲೆಯೂರುವ ಮುನ್ಸೂಚನೆ ನೀಡಿದ್ದಾರೆ...
ಐಂದ್ರಿತಾ ..ಪಾತ್ರದಲ್ಲಿ ಪ್ರೀತಂಗೆ ಬೋರೆನಿಸುತ್ತಾರೆ ಆದರೆ ಪ್ರೇಕ್ಷಕನಿಗಲ್ಲ..
ಸಾಧುರವರು ಹಾಸ್ಯದಲ್ಲಿ, ರವಿಶಂಕರ್ ಅಪ್ಪನ ಪಾತ್ರದ ಗಂಭೀರ ನಟನೆಯಲ್ಲಿ ಇಷ್ಟವಾಗುತ್ತಾರೆ...
ಯೂರೋಪ್ ಹಾಗು ರಾಜಸ್ಥಾನ ಮತ್ತು ಮಡಿಕೇರಿಯ ರಮ್ಯ ಸ್ಥಾನಗಳು ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರು..
ಇಷ್ಟೆಲ್ಲಾ ಇರುವ ಮುಂಗಾರುಮಳೆ ೨ ..ಸದಭಿರುಚಿಯ ಪೈಸಾ ವಸೂಲ್ ಮೂವಿ ಎಂದೂ ಹೇಳಿದರೆ ಅತಿಶಯೋಕ್ತಿ ಎನಿಸುವುದಿಲ್ಲ...
ಒಬ್ಬ ನಿರ್ದೇಶಕನಾಗಿ ಶಶಾಂಕ್ ರವರು ಗೆದ್ದಿದ್ದಾರೆ....ಬಂದ್ ಹಾಗು ಗಾಸಿಪ್ಗಳಿಂದ ಚಿತ್ರಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ..
ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಿ....
ವಿಶೇಷ ಸೂಚನೆ : ಯಾವುದೇ ಒಂದು ಸಿನಿಮಾವನ್ನು ವೀಕ್ಷಿಸದೆ.. ಯಾರದೋ ಮಾತನ್ನು ಕೇಳಿ..ಹೊಗಳದಿದ್ದರೂ ಪರವಾಗಿಲ್ಲ ತೆಗಳಬೇಡಿ...
ನಿರ್ದೇಶಕನ ಕನಸು, ನಿರ್ಮಾಪಕನ ಹಣ, ಕಲಾವಿದರ,ತಂತ್ರಜ್ಞರ ಶ್ರಮದ ಪ್ರತಿಫಲದಿಂದ ಒಂದು ಉತ್ತಮ ಚಿತ್ರವಾಗುತ್ತದೆ..ಹಲವಾರು ಜನರ ಭವಿಷ್ಯ ಅದರಲ್ಲಿ ಅಡಗಿರುತ್ತದೆ...
ಈ ಎಲ್ಲಾ ದಿಸೆಗಳಲ್ಲಿ ಮುಂಗಾರು ಮಳೆ ೨...ಒಂದು ಉತ್ತಮ ಚಿತ್ರ..
ನೋಡದೆ ಇದ್ದ ಪಕ್ಷದಲ್ಲಿ ..ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ವೀಕ್ಷಿಸಿ..
ಸತೀಶ್ ಎ.ಎಸ್
ನೀರ್ ದೋಸೆ ಚಿತ್ರ ವಿಮರ್ಶೆ
"ನೀರ್ ದೋಸೆ " - ಹೂಟ್ಟೆ ಹುಣ್ಣಾಗುವಷ್ಟು ನಗು ಮತ್ತು ಮನಸ್ಸಿಗೆ ಹತ್ತಿರವಾಗುವ ಮೌಲ್ಯಗಳನ್ನೊಳಗೊಂಡ ಸಂಭಾಷಣೆಯ ರಸವತ್ತಾದ ಔತಣ....
ನಿರ್ದೇಶಕ ವಿಜಯ್ ಪ್ರಸಾದ್ ಜೀವನದ ವಿವಿಧ ಅನುಭವಗಳನ್ನು ನಾಲ್ಕು ಪಾತ್ರಗಳ ಜೊತೆ ತಮ್ಮ ವಿಭಿನ್ನ ಹಾಸ್ಯದ ಸಂಭಾಷಣೆಯ ಮೂಲಕ ರುಚಿಯಾಗಿ ಉಣಬಡಿಸಿದ್ದಾರೆ..ಇದರಲ್ಲಿ ಉಪ್ಪು ಹುಳಿ ಕಾರ ಕಹಿ ಸಿಹಿ ಎಲ್ಲಾ ಇದೆ, ಮೇಲ್ನೋಟಕ್ಕೆ ಸಿನಿಮಾದಲ್ಲಿ ದ್ವಂದ್ವಾರ್ಥದ ಡೈಲಾಗ್ ಇರುವದಂತೂ ಸತ್ಯ ಆದರೆ ಪ್ರತಿ ಡೈಲಾಗ್ ಹಿಂದೆ ಜೀವನಕ್ಕೆ ಬೇಕಾದ ಮೌಲ್ಯಗಳು ತುಂಬಾ ಇದೆ.. ಸಿನಿಮಾ ನೋಡಿದ ಪ್ರೇಕ್ಷಕನ ಮುಖದಲ್ಲಿ ನಗು ಕಾಣುವುದಂತೂ ಸತ್ಯ..ಕೊಟ್ಟ ದುಡ್ಡಿಗೆ ಮೋಸವಿಲ್ಲ..
ಜಗ್ಗೇಶ್ ಸರ್ ಹೆಸರಿಗೆ ತಕ್ಕಂತೆ ನವರಸ ನಾಯಕ ಮತ್ತೊಮ್ಮೆ ಮಠ ಚಿತ್ರವನ್ನು
ನೆನಪಿಸಿದ್ದಾರೆ ತಮ್ಮ ವಿಶಿಷ್ಠ ನಟನೆ ಹಾಗು ಮ್ಯಾನರಿಸಂನಿಂದ ರಂಜಿಸಿದ್ದಾರೆ...ಹಾಗು
ದತ್ತಣ್ಣ ಈ ಪಾತ್ರದಿಂದ ಮತ್ತಷ್ಟು ಹತ್ತಿರವಾಗುತ್ತಾರೆ.. "ಆಗುವುದೆಲ್ಲಾ
ಒಳ್ಳೆಯದಕ್ಕೆ" ಎಂಬುದು ಈ ಚಿತ್ರದಲ್ಲಿ ಹರಿಪ್ರಿಯಾರವರ ನಟನೆ ನೋಡಿ ನಿಜ
ಅನಿಸಿತು..ಕಾರಣಾಂತರಗಳಿಂದ ಸಿಕ್ಕ ಪಾತ್ರಕ್ಕೆ ನೂರು ಪ್ರತಿಶಹ ನ್ಯಾಯ
ಒದಗಿಸಿದ್ದಾರೆ..ಸುಮನಾ ರಂಗನಾಥ್ ಕೂಡ ತುಂಬಾ ಇಷ್ಟವಾಗುತ್ತಾರೆ..
ಈ ಚಿತ್ರದ ಮತ್ತೊಂದು ಧನಾತ್ಮಕ ಅಂಶ ಅನೂಪ್ ಸೀಳಿನ್ ರವರ ಹಿನ್ನಲೆ ಸಂಗೀತ..ಅದ್ಬುತವಾಗಿ ಮೂಡಿ ಬಂದಿದೆ..
"ಬದುಕಿನ ಎಲ್ಲಾ ಪಾಠಗಳನ್ನು ಅನುಭವಿಸಿ ಕಲಿಯಲು ಅಸಾಧ್ಯ..ಕೆಲವನ್ನು ಈ ಸಿನಿಮಾದಿಂದ ಕಲಿಯಬಹುದು ಎಂಬುದು ನನ್ನ ಅನಿಸಿಕೆ"
ಸಿನಿಮಾದ ಕೊನೆಯಲ್ಲಿ ಇಷ್ಟ ಆಗದೆ ಇದ್ರೆ ಮುಖಕ್ಕೆ ಉಗೀರಿ ಅಂತಾ ಹೇಳಿದಿರಾ....ನೋಡಿದ ಪ್ರತಿಯೊಬ್ಬರೂ ಹೊಗಳುತಿದ್ದಾರೆ...ಈ ಹೊಗಳಿಕೆ ಇಡೀ ಚಿತ್ರತಂಡಕ್ಕೆ..ವಿಶೇಷವಾಗಿ ನಿರ್ದೇಶಕ ವಿಜಯ್ ಪ್ರಸಾದ್ ಸರ್ ರವರಿಗೆ..
ಸತೀಶ್ ಎ.ಎಸ್ ..
ಈ ಚಿತ್ರದ ಮತ್ತೊಂದು ಧನಾತ್ಮಕ ಅಂಶ ಅನೂಪ್ ಸೀಳಿನ್ ರವರ ಹಿನ್ನಲೆ ಸಂಗೀತ..ಅದ್ಬುತವಾಗಿ ಮೂಡಿ ಬಂದಿದೆ..
"ಬದುಕಿನ ಎಲ್ಲಾ ಪಾಠಗಳನ್ನು ಅನುಭವಿಸಿ ಕಲಿಯಲು ಅಸಾಧ್ಯ..ಕೆಲವನ್ನು ಈ ಸಿನಿಮಾದಿಂದ ಕಲಿಯಬಹುದು ಎಂಬುದು ನನ್ನ ಅನಿಸಿಕೆ"
ಸಿನಿಮಾದ ಕೊನೆಯಲ್ಲಿ ಇಷ್ಟ ಆಗದೆ ಇದ್ರೆ ಮುಖಕ್ಕೆ ಉಗೀರಿ ಅಂತಾ ಹೇಳಿದಿರಾ....ನೋಡಿದ ಪ್ರತಿಯೊಬ್ಬರೂ ಹೊಗಳುತಿದ್ದಾರೆ...ಈ ಹೊಗಳಿಕೆ ಇಡೀ ಚಿತ್ರತಂಡಕ್ಕೆ..ವಿಶೇಷವಾಗಿ ನಿರ್ದೇಶಕ ವಿಜಯ್ ಪ್ರಸಾದ್ ಸರ್ ರವರಿಗೆ..
ಸತೀಶ್ ಎ.ಎಸ್ ..
A TRIBUTE TO TEAM MUNGARU MALE 2
ಚಂದನವನದಲ್ಲಿ ಮತ್ತೆ ಮಳೆ ಸುರಿಸಲು ಮುಂದಾದ ಮುಂಗಾರು ಮಳೆ ೨ ತಂಡಕ್ಕೆ ....
ಅಭಿಮಾನದ ಅಭಿನಂದನಾ ಗೀತಾರ್ಪಣೆ....
ಮುಂಗಾರು ಮಳೆ -೨.. ಕನ್ನಡದ ಬಹು ನಿರೀಕ್ಷಿತ ಚಿತ್ರ...ಈ ಚಿತ್ರದ ''ಸರಿಯಾಗಿ ನೆನಪಿದೆ ನನಗೆ" ಹಾಡಿಗೆ ಗುರುಗಳಾದ ಜಯಂತ್ ಕಾಯ್ಕಿಣಿವರು ಸಾಹಿತ್ಯ ಬರೆದಿದ್ದು ..ಎಲ್ಲರಿಗೂ ಇಷ್ಟವಾಗಿದ್ದು ಗುನುಗಲು ಶುರು ಮಾಡಿರುವುದಂತೂ ನಿಜ.. ಈ ಹಾಡಿನ ಸಂಗೀತಕ್ಕೆ ನನಗೂ ಸಾಹಿತ್ಯ ಬರೆಯಬೇಕೆನಿಸಿ ಮಾಡಿದ ಪ್ರಯತ್ನದ ಫಲ....ಈ ಸಾಲುಗಳು...
ಈ ಸಾಲುಗಳಿಗೆ ಧ್ವನಿಯಾಗಿರುವುದು ಗೆಳೆಯ ರವಿಕಿರಣ್
ಉತ್ತಮ ಸಂಗೀತ ನೀಡಿದ ಅರ್ಜುನ್ ಜನ್ಯಾರವರಿಗೆ ಹಾಗು ಸೀಕ್ವೆಲ್ ಮಾಡಲು ಧೈರ್ಯ ಮಾಡಿದ ನಿರ್ದೇಶಕರಾದ ಶಶಾಂಕ್ ರವರಿಗೆ ಧನ್ಯವಾದಗಳು....
ಮುಂಗಾರು ಮಳೆ ತಂಡಕ್ಕೆ ಶುಭಾಷಯಗಳು...
ಕನಸಲ್ಲಿ ಕೆಣಕಿದೆ ನನಗೆ...
ಇದಕೆಲ್ಲಾ ಕಾರಣ ಕಿರುನಗೆ...
ಮನದಾ..
ಪ್ರತಿ ಹಾಳೆಯೊಳಗೂ ನಿನದೇ ಬರವಣಿಗೆ...
ಕನಸಿನ ಒಲುಮೆಗೆ ಹೆಸರನು ಹುಡುಕುತಾ...
ಅಲೆದಾಡುವುದು....
ಇನ್ನು ಖಚಿತಾ.. ||ಕನಸಲ್ಲಿ||
ನಿನ್ನಲ್ಲೇ ಇದೆ ಎಲ್ಲಾ ಉತ್ತರ...
ನೀನೆ ನನ್ನಯ ಪ್ರಶ್ನಾ ಪತ್ರಿಕೆ....
ಕಣ್ಣಾ ಮುಚ್ಚಲೂ ನೀನೆ ಕಾಣುವೆ..
ನೀನೆ ದೀವಿಗೆ ನನ್ನ ಬಾಳಿಗೆ...
ಬರೆದೂ ನಾನು ಮುದ್ದಾದ ಅಧ್ಯಾಯ...
ಕೂಗಿ ಹೇಳುವೆ ನಿನ್ನಸರೆ ಉಪಮೇಯ..
ನನ್ನಯ ಪ್ರತಿನುಡಿ ನಿನ್ನನೇ ಜಪಿಸುತಾ...
ಹಾಡಾಗುವುದು....
ಇನ್ನು ಖಚಿತಾ.... ||ಕನಸಲ್ಲಿ||
ನಿನ್ನ ನೋಟಕೆ ಸೋತು ಹೋಗಿದೆ..
ಗೆಲುವೆ ಬೇಡದ ನನ್ನ ಹೃದಯವೂ...
ನಿನ್ನ ಕಾಣದ ನನ್ನ ಜೀವಕೆ..
ಊಹೆ ಮೀರಿದ ಅಂಧಕಾರವೂ...
ಕಣ್ಣ ಕರೆಗೆ ನಾನಾದೆ ನಿನ್ನೋನು..
ಕಣ್ಣಂಚಲ್ಲೇ ಉಳಿಬೇಡ ನೀನಿನ್ನೂ...
ಕನಸಿನ ಮಡುವಲಿ ನೆನಪನೂ ಕೆದಕುತಾ...
ಕಳೆದೋಗುವುದು..
ಇನ್ನು ಖಚಿತಾ.... ||ಕನಸಲ್ಲಿ||
ಸಾಹಿತ್ಯ : ಸತೀಶ್ ಎ .ಎಸ್
ಗಾಯನ : ರವಿಕಿರಣ್ ಎಸ್ ಎಮ್
Thursday, March 31, 2016
Wednesday, July 29, 2015
Thursday, September 04, 2014
ಕಣ್ಣೊಳಗಿನ ಕನ್ನಡಿ
ಕನ್ನಡ ಚಿತ್ರರಂಗದ ಸ್ವಮೇಕ್ ರಿಮೇಕ್ ವಾದ ವಿವಾದಗಳ ನಡುವೆ ಮೊನ್ನೆ ನನ್ನ ಫ್ರೆಂಡ್ ಬ್ಲಾಗನಲ್ಲಿ ಓದಿದ ಒಂದು ಬರಹ ತುಂಬಾ ಇಷ್ಟವಾದ ಕಾರಣ ಇಂಗ್ಲಿಷ್ನಲ್ಲಿದ್ದ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕು ಅನ್ನಿಸಿತ್ತು ಅವರಿಂದ ಕಾಪಿ ರೈಟ್ಸ್ ಪಡೆದು ತರ್ಜುಮೆ ಮಾಡಿದ್ದೇನೆ. ತರ್ಜುಮೆಗೆ ಒಪ್ಪಿಗೆ ನೀಡಿದ್ದಕೆ ಧನ್ಯವಾದಗಳು ನಂದಿತಾವಿನಯ್
ಅಂಗ್ಲ ಭಾಷೆಯಲ್ಲಿ ಮೂಲ ಬರಹವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
http://thought-traffik.blogspot.in/2014/06/story.html?m
ಪ್ರಪಂಚ ಪ್ರತಿಯೊಬ್ಬನು ನೋಡುವ ರೀತಿಯ ಮೇಲೆ ಅವಲಂಬಿತವಾಗಿದೆ, ನೋಡುವ ಕಣ್ಣುಗಳಲ್ಲಿ ಪ್ರತಿಯೊಂದು ಸನ್ನಿವೇಶಗಳು ಅವರದೇ ಆದ ಆಯಾಮದಲ್ಲಿ ಚಿತ್ರಿಸಿಕೊಳ್ಳುತ್ತಾರೆ, ಚಿತ್ರಿಸಿಕೊಂಡ ನಂತರ ಒಮ್ಮೆ ತಾಳ್ಮೆಯಿಂದ ವಿಶ್ಲೇಷಿಸಿದರೆ ಅದೆಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ .
ಅರ್ಥೈಸಿಕೊಂಡರೆ ಎದುರಿಗಿರುವವರ ಪ್ರತಿಯೊಂದು ಕಣ್ಣು ಒಂದೊಂದು ಕಥೆ ಹೇಳುತ್ತದೆ ......
ಕೆಲ ದಿನಗಳ ಹಿಂದೆ ಸಂಜೆ ಸೂರ್ಯ ತನ್ನ ದಿನಚರಿ ಮುಗಿಸಿ ಮನೆಗೆ ಹೊರಡುವ ಹುಮ್ಮಸ್ಸಿನಲ್ಲಿದ್ದ ಮುಸ್ಸಂಜೆಯ ಕತ್ತಲು ಕಿಕ್ಕಿರಿದ ಜನಸಂದಣಿಯ ನಡುವೆ ನಾನು ಸಿಟಿ ಬಸ್ಸನ್ನೇರಿ ಮನೆ ಸೇರುವ ತವಕದಲ್ಲಿದ್ದೆ. ದಿನವಿಡೀ ದುಡಿದು ತಮ್ಮ ಮನೆ ಸೇರುವ ಆತುರದಲ್ಲಿರುವ ಸಹಪ್ರಯಾಣಿಕರ ನೋಡಿದ ನನಗೆ ಅವರ ಕಣ್ಣುಗಳು ಒಂದೊಂದು ಕಥೆ ಹೇಳುವ ರೀತಿ ಭಾಸವಾಯಿತು. ಆ ಭಾಸಕ್ಕೆ ಅರ್ಥಕೊಟ್ಟು ಕಲ್ಪಿಸಿದ್ದಕ್ಕೆ ಸಿಕ್ಕ ಪಲಿತಾಂಶ ಈ ಅಂಕಣ ...
ನಾ ಗಮನಿಸಿದ ಮೊದಲ ಕಣ್ಣುಗಳು ೩೦ ವಯಸ್ಸಿನ ಒಬ್ಬ ಮಹಿಳೆಯದ್ದು, ಆಕೆ ಆತನ ಗಂಡನ ಪಕ್ಕ ಕೂತಿದ್ದಳು, ಕಣ್ ತುಂಬಿ ಬಂದಿದ್ದರು ತಡೆ ಹಿಡಿದಿಟ್ಟಿದ್ದ ರಪ್ಪೆಗಳು ಏನನ್ನೋ ನೀರಿಕ್ಷಿಸುತ್ತಾ ಆಕೆಯ ಭಾರವಾದ ಹೃದಯಕ್ಕೆ ಸಂತೈಸುತ್ತಿರುವ ಪ್ರಯತ್ನ ಮಾಡುವಂತಿತ್ತು. ಆಕೆಯು ತನ್ನ ಗಂಡನಿಂದ ಏನನ್ನೋ ನಿರಿಕ್ಷಿಸುತ್ತಿದ್ದಳು ಆಕೆಯ ಕೈಗಳು ತನ್ನ ಗಂಡನ ಹಿಡಿತಕ್ಕೆ ಹಾತೊರೆಯುತ್ತಿತ್ತು ಕೆಲ ಕ್ಷಣಗಳ ನಂತರ ತನ್ನ ಗಂಡನಿಗೆ ಕಾಯದೆ ತಾನೇ ಆತನೆಡೆಗೆ ತಿರುಗಿ ಮುಗುಳ್ನಕ್ಕು ಹೇಳಿದ್ದು ಕೇವಲ ಒಂದೇ ಪದ ''ಸಾರಿ'' . ತದೇಕಚಿತ್ತದಿಂದ ಗಮನಿಸುತ್ತಿದ್ದ ನನಗೆ ಆ ಕಡೆಯಿಂದ ಕೇಳಿದ ಪ್ರತ್ಯುತ್ತರವು ಒಂದೇ ಶಬ್ದ ''ಸಾರಿ''.
ಏನಾಗಿತ್ತೋ ಅವರ ನಡುವೆ ನನಗಂತೂ ಅರಿವಿಲ್ಲ ಅದು ಅವರಿಗೂ ಬೇಕಾಗಿರಲಿಲ್ಲ ಎಲ್ಲಾ ಮರೆತ ಅವರ ಮುಖದಲ್ಲಿ ನರ್ತಿಸುತಿದ್ದಿದ್ದು ''ನಿಷ್ಕಲ್ಮಶ ನಗು" ಗೆದ್ದಿದ್ದು ಅವರ ''ಪ್ರೀತಿ''
ನಾ ಗಮನಿಸಿದ ಮತ್ತೊಬ್ಬ ವ್ಯಕ್ತಿ ೭೦ ವರ್ಷ ವಯಸ್ಸಿನ ಒಬ್ಬ ಹಿರಿಯರನ್ನ, ತಾನು ಕೂತಿದ್ದ ಸೀಟಿನ ಪಕ್ಕದಲ್ಲೇ ತನ್ನ ಮಡದಿಗೆ ಜಾಗವನ್ನು ಕಾದಿರಿಸಿ ಕೂರಿಸಿಕೊಂಡ ಆ ಮುಸ್ಸಂಜೆಯ ಪ್ರೀತಿಯ ಕಣ್ಣುಗಳಲ್ಲಿ ಬಹು ದೂರ ಪ್ರಯಾಣಿಸಿದ ದಣಿವು ಕಾಣುತಿತ್ತು. ಅವರು ಕಿಟಕಿಯಿಂದಾಚೆಗಿನ ಆ ಕಲರ್ಫುಲ್ ದುನಿಯಾವನ್ನು ಕಣ್ ಮಿಟುಕಿಸದೆ ಮೌನದಿಂದ ನೋಡುತಿದ್ದ ರೀತಿ ಪ್ರಾಯಶಃ ಆ ನಗರಕ್ಕೆ ಹೊಸಬರಂತೆ ಬಿಂಬಿಸುತ್ತಿತ್ತು.
ನಾ ನೋಡಿದ ಕಣ್ಣುಗಳ ಸಾಲಿಗೆ ಮತ್ತೊಂದು ಸೇರ್ಪಡೆ ಸುಮಾರು ೨ ವರ್ಷದ ಮಗು. ನಿಧಾನವಾಗಿ ಚಲಿಸುತ್ತಿದ್ದ ಬಸ್ಸಿನಲ್ಲಿ ತನ್ನ ಕೊರಳಿನಲ್ಲಿ ತೂಗಾಡುತ್ತಿದ್ದ ''ಛೋಟಾ ಭೀಮ್ '' ಬಾಟೆಲ್ನಲ್ಲಿ ನೀರನ್ನು ಹೀರುತ್ತಾ ತನ್ನದೇ ಆದ ಪ್ರಪಂಚದಲ್ಲಿ ಚಪ್ಪಾಳೆ ಹಾಕುತ್ತಾ ಸೀಟಿನಿಂದ ಕೆಳಗೆ ಬೀಳುವುದೆಂಬ ತಾಯಿಯ ಭಯವನ್ನು ಲೆಕ್ಕಿಸದೆ ಕುಣಿಯುತ್ತಾ ರಾ,,,ಆಆಆಆಆಆ ...ಈಈಈ ಎಂದು ಹಾಡುತ್ತಿದ್ದ ಆ ಪುಟ್ಟ ಗಾಯಕ ತನ್ನ ಸುತ್ತಲಿನ ಪ್ರಪಂಚದ ಅರಿವಿಲ್ಲದೆ ತನ್ನದೇ ಲೋಕದಲ್ಲಿ ಯಾವುದೇ ಚಿಂತೆಯಿಲ್ಲದೆ ಮುಗ್ದತೆಯಿಂದ ನಗುತ್ತಿದ್ದ .....
ನಾ ಮರೆಯಲಾಗದ ಮುಗ್ದ ಕಣ್ಣುಗಳು ದೇವರಿಗೆಂದು ತನ್ನ ತಲೆಕೂದಲನ್ನು ಜಡೆಯಾಗಿ ಮಾರ್ಪಡಿಸಿ ಮುಡಿ ಕಟ್ಟಿದ್ದ ಆ ಹಳ್ಳಿ ಹುಡುಗನದ್ದು, ಆತನು ಕೂಡ ಈ ಮಾಯಾನಗರಿಗೆ ಹೊಸಬನಿರಬೇಕು ತನ್ನ ಅಗಲವಾದ ಕಣ್ಣುಗಳಿಂದ ರಸ್ತೆಬದಿಯಲ್ಲಿರುವ ಪ್ರತಿ ಅಂಗಡಿಯ ಫಲಕಗಳನ್ನು ಜೋರಾದ ಧ್ವನಿಯಲ್ಲಿ ಓದುತ್ತಿದ್ದ . ನಿಧಾನಗತಿಯ ಟ್ರಾಫಿಕ್ ಕೂಡ ಪ್ರತಿ ಫಲಕವನ್ನು ಓದಲು ಅನುವು ಮಾಡಿಕೊಡುತ್ತಿತ್ತು. ಆತನ ಶ್ರದ್ದೆ ಎಷ್ಟಿತ್ತೆಂದರೆ ಕಿಟಿಕಿಯ ಕಡೆಯಿಂದ ಮುಖವನ್ನೇ ತೆಗೆದಿರಲಿಲ್ಲ, ಬಸ್ಸಿನಿಂದ ಇಳಿಯುವಾಗ ಅವನ ಮುಖದಲ್ಲಿದ್ದ ನಗು ಕಿಟಿಕಿಯ ಗಾಜಿನ ಮುಸುಕಿನಿಂದ ಕಾಣದ ಸೌಂದರ್ಯವನ್ನು ತನ್ನ ತೆರೆದ ಕಣ್ಣಿನಿಂದ ಆಹ್ಲಾದಿಸಲು ಹೊರಟಂತಿತ್ತು.... ಎಲ್ಲೋ ಕೇಳಿದ ಮಾತು "ಸೌಂದರ್ಯ ನೋಡುವವರ ಕಣ್ಣು ಹಾಗು ಮನಸ್ಸಿನಲ್ಲಿ ಅಡಗಿರುತ್ತದೆ" ಎಂಬುದು ನಿಜ ಅನ್ನಿಸಿತು..
ಇಷ್ಟೆಲ್ಲಾ ಆದ ಮೇಲೆ ಐ ಟಿ ಸಿಟಿಯಲ್ಲಿ ಕಿವಿಗೆ ಇಯರ್ ಫೋನ್ ಹಾಕಿ ವೈಲ್ಡ್ ಕ್ರಾಫ್ಟ್ ಬ್ಯಾಗ್ ಹಿಡಿದು ಚಂದದ ಉಡುಗೆ ಉಟ್ಟಿರುವ ಯುವಕನ ತಪ್ಪಿಸಲು ಸಾಧ್ಯವೇ ? ಆತನ ಮೊಬೈಲ್ ರಿಂಗಣಿಸಿದಾಗ ಬೆಚ್ಚಿದಂತೆ ಮೊಬೈಲ್ ತೆಗೆದು ಸೈಲೆಂಟ್ ಮಾಡಿದ, ಬಸ್ಸಿನಲ್ಲಿರುವ ಜನ ಅವನೆಡೆಗೆ ಅಪರಾಧಿಯ ರೀತಿ ನೋಡಿದ್ದು ಕಂಡು ಕಣ್ ಮುಚ್ಚಿ ತಲೆಯೊರಗಿಸಿ ಮಲಗಿದ,ಅವನ ತಲೆಯಲ್ಲಿ ಅದ್ಯಾವ ಸಿನಿಮಾ ಕಥೆ ಓಡುತಿತ್ತೋ ಸ್ವಲ್ಪ ಸಮಯದ ನಂತರ ಮತ್ತೆ ಕಣ್ ತೆಗೆದು ಕಂಡಕ್ಟರ್ ಬಳಿ ಚಿಲ್ಲರೆ ಪಡೆದು ಹೊರನೆಡೆದ....
ನಾವು ಹೋದಲ್ಲೆಲ್ಲ ಲಕ್ಷಾಂತರ ಜನರನ್ನು ನೋಡುತ್ತೇವೆ ಕೆಲವರು ಪರಿಚಿತರು ಅದೆಷ್ಟೋ ಅಪರಿಚಿತರು ಪ್ರತಿಯೋಬ್ಬರದು ಅವರದೇ ಆದ ಕಥೆಯಿರುತ್ತದೆ, ಅವರದೇ ಆದ ಸಂತೋಷ, ದುಃಖ, ಸಮಸ್ಯೆಗಳು, ನಾವು ಬೇರೊಬ್ಬರ ಕಥೆಯ ಪಾತ್ರವಾಗದಿರಬಹುದು ಆದರೆ ನಾವು ನಮ್ಮದೇ ಆದ ಒಂದು ಪಾತ್ರವನ್ನು ಪ್ರತಿದಿನ ಪ್ರತಿಕ್ಷಣ ನಿರ್ವಹಿಸುತ್ತಿರುತ್ತೇವೆ. ನಾವು ಕೇಳಿದ ಕಥೆಗಳು ಬೇರೊಬ್ಬರ ಜೀವನದ್ದೆ ಆದರು ನಮ್ಮ ಜೀವನವು ಬೇರೊಬ್ಬರಿಗೆ ಕಥೆಯಾಗಿರುತ್ತದೆ ...ಏನೇ ಆದರು ಜೀವನ ಸಾಗುತ್ತಿರುತ್ತದೆ......
ಸತ್ಯ
Monday, May 19, 2014
Sunday, March 16, 2014
Saturday, March 15, 2014
Friday, February 21, 2014
Monday, June 20, 2011
Monday, February 14, 2011
Monday, February 07, 2011
Friday, December 31, 2010
ಹೊಸ ವರುಷ
ಹಾಯ್,,ನನ್ನೆಲ್ಲ ಬ್ಲಾಗ್ ಗೆಳೆಯ ಗೆಳತಿಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು .....ಮುಂಬರುವ ವರುಷ ನಿಮ್ಮ ಬಾಳಲ್ಲಿ ಸುಖ ಶಾಂತಿ ನೆಮ್ಮದಿಯಿಂದ ತುಂಬಿರಲಿ .........
ಬಂದಿಹುದು ಹೊಸ ವರುಷ ,,,,,
ತರಲಿ ನಿಮ್ಮ ಬಾಳಲ್ಲಿ ಹರುಷ .....
ನೋವು ದೂರಾಗಲಿ..
ಮನಸು ಹಗುರಾಗಲಿ..
ನಲಿವು ನಿಮ್ಮದಾಗಲಿ..
ಒಲವು ಚಿಗುರಲಿ...
ಸಹಬಾಳ್ವೆ ಮೈಗೂಡಲಿ..ತರಲಿ ನಿಮ್ಮ ಬಾಳಲ್ಲಿ ಹರುಷ .....
ನೋವು ದೂರಾಗಲಿ..
ಮನಸು ಹಗುರಾಗಲಿ..
ನಲಿವು ನಿಮ್ಮದಾಗಲಿ..
ಒಲವು ಚಿಗುರಲಿ...
ಕುಶಿ ತುಂಬಿದ ವರುಷ.....೨೦೧೧..ನಿಮ್ಮ ಬಾಳನ್ನು ಆವರಿಸಿಕೊಳ್ಳಲಿ ...
ಇಂತಿ ನಿಮ್ಮ ಸ್ಟುಪಿಡ್ ಗೆಳೆಯ.......
ಸತ್ಯ
Tuesday, December 21, 2010
ಮುರಿದ ಸಾಲುಗಳು
ಹಾಯ್ ಫ್ರೆಂಡ್ಸ್... ಈ ಅಂಕಣಕ್ಕೆ ಸ್ಪೂರ್ತಿ,,,
ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು,,ಎಂಬ,ಬ್ಲಾಗಿನ ಹೆಸರಲ್ಲಿ,,,ಮನಸಿಗೆ ಹತ್ತಿರವಾದ ಕವನ ಹಾಗು ಅಂಕಣಗಳನ್ನು ಬರೆಯುತ್ತಿರುವ ಸೌಮ್ಯ ಎಂಬವರು,,,,
ಬೋರ್ ಹೊಡಿಸೋ ಕ್ಲಾಸಿನಲ್ಲಿ ಕುಳಿತು ನೋಟ್ ಬುಕ್ ನ ಕೊನೆಯ ಪೇಜಿನಲ್ಲಿ ಗೀಚಿದ ಸಾಲುಗಳನ್ನು ಅವರು..... ಬೇಸರದ ಮನದ ಭಾವಗಳಿಗೆ "ಮುರಿದ ಸಾಲುಗಳು " "broken lines "ಎಂಬ ತಲೆ ಬರಹದೊಂದಿಗೆ ತುಂಬಾ ಅದ್ಬುತವಾಗಿ ಬರೆದಿದ್ದರು,,,ಇದನ್ನು ಓದಿದ ನನಗೆ ನನ್ನ ನೋಟ್ ಬುಕ್ ಕೊನೆಯ ಹಾಳೆಗಳು ನೆನಪಿಗೆ ಬಂದವು,,ಅದರ ಪರಿಣಾಮವೇ..ಈ ನನ್ನ ''ಮುರಿದ ಸಾಲುಗಳು''
ಕ್ಷಮಿಸಿ ಸೌಮ್ಯ ...ನಾನು ಕೂಡ ಅದೇ ತಲೆ ಬರಹವನ್ನು ಉಪಯೋಗಿಸುತ್ತಿದ್ದೇನೆ,,ಕಾರಣ ಅದು,,ನನಗೆ ತುಂಬಾ ಇಷ್ಟವಾಯಿತು ಮತ್ತು ಅದಕ್ಕಿಂತ ಸೂಕ್ತವಾದ ತಲೆ ಬರಹ ಇನ್ನೊಂದಿಲ್ಲ ಎಂಬುದು ನನ್ನ ಅನಿಸಿಕೆ..
''ಭಗ್ನ ಪ್ರೇಮಿಯ ಬಂಜರೆದೆಯಲ್ಲಿ ಭಾವನೆಗಳ ಕಾರಂಜಿ''...!
''ನಿನ್ನ ದಾರಿಗಾಗಿ ಕಾದೆ, ಕಾದೆ,ಕಾದು.. ಸುಸ್ತಾದೆ....ಆದರೂ ಕಾಯುತ್ತಿರುವೆ,,ಏಕೆಂದರೆ ನಾನಿನ್ನು ಬದುಕಿರುವೆ"........!
''ಕಣ್ ಮುಚ್ಚಿದರು ನೀನೆ ಕಾಣುವೆ ಎಂದ ಮೇಲೆ ನನ್ನ ಚಾಳೀಸಿಗೇನು ಕೆಲಸ''.......!
''ನಿನ್ನ ನೆನಪಲ್ಲೇ ನನ್ನ ನಾ ಮರತೆ....ಅದು ಸರಿ ನಾನು ಯಾರು...?
''ಮೊದಲ ನೋಟದಲ್ಲೇ ಪ್ರೀತಿ ಹುಟ್ಟತ್ತೆ ಅಂತ ನಿನ್ನ ನೋಡೋದ ಮೇಲೆ ಅನ್ನಿಸಿದ್ದು....
ಹಾಗೇನೆ,,
ಆ ಪ್ರೀತಿ ಬಹಳ ದಿನ ಉಳಿಯಲ್ಲ ಅಂತ ಇವಾಗ ನನ್ನ ನೋಡಿ ಅನ್ನಸ್ತಾ ಇದೆ'' .....!
''ನೀನು ಪ್ರೀತ್ಸಲ್ಲ ಅಂತಾ ಗೊತ್ತಿದ್ರು ನಿನ್ನನ್ನೇ ಪ್ರೀತಿಸ್ತಾ ಇರೋ ನನ್ನಂತ ಭಂಡ ಈ ಜಗತ್ತಿನಲ್ಲೇ ಯಾರು ಇಲ್ಲ ಕಣೆ ''....!
ನಿದ್ದೆ ಇರದ ಪ್ರತಿ ರಾತ್ರಿ ನಿನದೆ ನೆನಪು ....
ನಿನ್ನ ನೆನದ ಪ್ರತಿ ರಾತ್ರಿ ನಿದ್ದೆಯೇ ಬಾರದು...
ನಿನ್ನ ನೆನಪಿರದ ರಾತ್ರಿಯೇ ಇಲ್ಲದಾಗಿದೆ...
ಬೇಗ ಬಂದು ನನ್ನ ಮಲಗಿಸೆ ಹುಡುಗಿ.....!
ಮುಸ್ಸಂಜೆಯ ಕನಸಲ್ಲಿ ನಿನ್ನನ್ನು ಕಂಡೆ...
ಎಚ್ಚರಾಗಿ ಕಣ್ತೆರೆದು ನೋಡಿದೆ ಎಲ್ಲೆಲ್ಲು ಕತ್ತಲೆ....
ಮತ್ತೆ ಕಣ್ಮುಚ್ಚಿದೆ ಆದರೆ ನೀನೆ ಕಂಡೆ......!
''ಕಾಯುತ್ತಿವೆ ಕಣ್ಣುಗಳು ನಿನ್ನ ಬರುವಿಕೆಗೆ....ಅಗಲಿದ ಅಮ್ಮನಿಗೆ ಕಾಯುತ್ತಿರುವ ಅನಾಥ ಮಗುವಿನಂತೆ''...!
''ನೀನಿಲ್ಲದಿರುವ ನಾನು, ನೀರಿನಿಂದ ಹೊರಗಿರುವ ಮೀನು''...!
''ಪ್ರೀತಿಯ ಅಮಲಿನಲ್ಲಿ ಅಮಾವಾಸ್ಯೆಯ ಇರುಳು ಹಗಲಿನಂತೆ....!
''ದೀರ್ಘ ಕಾಲದ ಹ್ಯಾಂಗ್ ಓವರ್ ಮುರಿದ ಪ್ರೀತಿಯ ನಿಶೆ.....!
''ಯಾವೊಬ್ಬನು,,,ನಾ ಹುಟ್ಟುವಾಗ ಇದೆ ಜಾತಿಯಲ್ಲಿ ಹುಟ್ಟಬೇಕೆಂದು,,ಅಪ್ಲಿಕೇಶನ್ ಹಾಕ್ಕೊಂಡು,,ಹುಟ್ಟಲ್ಲ''...!
''ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ,,,
ಉಸಿರಿರೋವರೆಗೂ ನಾ ಪ್ರೀತಿಸುವೆ ಬಿಡದೆ ನಿನ್ನನೆ''....!
''ಸೋತವರೆಲ್ಲ,,,ಪ್ರೀತಿಸಲಿಲ್ಲವೇ,,,ಎಂಬ..ಪ್ರಶ್ನೆಯು,,,ಯಾವಾಗಲು ಕಾಡುತ್ತದೆ....
ನಾನು ಸೋತಿರುವೆ,,,,ಆದರೆ...ಜಾಸ್ತಿ,,ಪ್ರೀತಿಸಿದೆ ಅನ್ಸತ್ತೆ '',,,,!
ನಾನು ಸೋತಿರುವೆ,,,,ಆದರೆ...ಜಾಸ್ತಿ,,ಪ್ರೀತಿಸಿದೆ ಅನ್ಸತ್ತೆ '',,,,!
''she is the girl whoo fullfills all my imaagination...
i forgot the thing that .....
even she also had an imagination........!
'' ಮರಳಿ ಬರುವೆಯಾ ನೀ ನೆಡೆದು ಹೋದ ದಾರಿಯಲ್ಲಿ,,,
ಕಾರಣ ಕಾಯುತ್ತಿರುವೆ ನಾ ಬೇರೆ ಯಾರಾದರು ಅಳಿಸಿಯಾರು ಎಂಬ ಭಯದಲ್ಲಿ'' .....!
ಕಾರಣ ಕಾಯುತ್ತಿರುವೆ ನಾ ಬೇರೆ ಯಾರಾದರು ಅಳಿಸಿಯಾರು ಎಂಬ ಭಯದಲ್ಲಿ'' .....!
ಪ್ರೀತಿನಾ..ಪ್ರೀತಿಯಿಂದ ಗೆಲ್ಲಬೇಕು..ಅಂತ,,ಇರುವ ಪ್ರೀತಿಯನ್ನೆಲ್ಲಾ ಧಾರೆ ಎರೆದು... ಗೆದ್ದು,,ಪ್ರೆಮಿಗಳಾದವರು,,ಕೆಲವರು....
ಸೋತು... ಭಗ್ನ ಪ್ರೆಮಿಗಳಾದವರು,,ಹಲವರು,,,!
ಪ್ರೀತಿ ಮಾಡುವುದು,,ಅಪರಾಧ,,ಎಂದಾಗಿದ್ದರೆ,,,ಭೂಮಿಯ ಮೇಲೆ,,,,ಕಾರಾಗೃಹದ ವಿನಹ,,ಬೇರೇನೂ,,ಇರುತ್ತಿರಲಿಲ್ಲ...!
ಭಾಷೆ ಉಳಿವಿಗೆ ...
ಬೇಕಿಲ್ಲ ಗೆಳೆಯ ಬಲಿಧಾನ....
ಮೊದಲು ನೀ ನುಡಿ ನಿನ್ನ ಭಾಷೆಯ ,,,
ಕಂಡಾಗ ಪರಭಾಷೆಯ ಮಹಾಶಯ..........!
ಬೇಕಿಲ್ಲ ಗೆಳೆಯ ಬಲಿಧಾನ....
ಮೊದಲು ನೀ ನುಡಿ ನಿನ್ನ ಭಾಷೆಯ ,,,
ಕಂಡಾಗ ಪರಭಾಷೆಯ ಮಹಾಶಯ..........!
''ನಾ ಕಂಡ ಪ್ರತಿ ಚಂದದ ಹುಡುಗಿ ನನ್ನ ಪ್ರಿಯತಮೆಯಾಗಿದ್ದರೆ ಎಂಬ ನವಿರಾದ ಮನಸ್ಸಿನ ಭಾವ ನಿಜವಾಗಿದ್ದರೆ....?
''ಕಣ್ಣು ಕಡಲಾದ ಮೇಲೆ ಕಣ್ಣೀರಿಗೆ ಬರವೇ,,,,!
''ಕೊರೆಯುವ ಚಳಿಯಲ್ಲಿ, ಸುರಿಯುವ ಮಳೆಯಲ್ಲಿ ಅದ್ಯಾಕೆ ನೆನಪಿಗೆ ಬರ್ತಿಯೇ,,,ಹುಡುಗಿ''...!
"ಬಳಲಿ ಬೆಂಡಾಗಿರುವೆ ಆದರೂ ತೆಳಲಾಗದೆ ಮುಳುಗುತ್ತಿರುವೆ ...!
''ಇರನಾರದವನು ಇರುವೆ ಬಿಟ್ಕೊಂಡ ಅಂತ ನಿನ್ನ ಪ್ರೀತಿಸಿದ್ ಮೇಲೆ ಅನ್ನಿಸಿದ್ದು...!
''ಹೆಣ್ಣು '' ತರ್ಕಕ್ಕೆ ನಿಲುಕದವಳು, ವರ್ಣನೆಗೆ ಎಟುಕದವಳು, ಊಹೆಗೆ ಸಿಗದವಳು...ಒಂದೇ ಮಾತಲ್ಲಿ ಹೇಳ್ಬೇಕಂದ್ರೆ.....
ನಮ್ ತಾಯಾಣೆ ಗೊತ್ತಿಲ್ಲ ...!
ಸತ್ಯ ಸಿಂಪ್ಲಿ ಸ್ಟುಪಿಡ್...?
Friday, December 17, 2010
ಭವ್ಯದೀಪ್ತಿ......
ಹೊಸ ಬಾಳ ನಿರೀಕ್ಷೆಯಲ್ಲಿ ..
ಹೊಸ ಬಯಕೆಗಳ ಹೊತ್ತು
ಹೊರಟಿರುವೆ ನಾನು ಒಂಟಿಯಾಗಿ,,,
ಭವಿಷ್ಯದ ..ಭಯಕ್ಕೆ ..ವರ್ತಮಾನಗಳ ಬಲಿಕೊಟ್ಟು,,,
ಮತ್ತೊಮ್ಮೆ ಭೂತಕಾಲದ ಅಧಿಪತಿಯಾಗಿ ..
ಬಳಲಬಾರದೆಂಬ ತವಕ ...
ಬೆಳಕಿನಲ್ಲೂ.ಕತ್ತಲೆಂಬ ಭಾಸವೇ ಅಡಗಿಹುದು..
ನವೀನತೆಯಲ್ಲೂ ಪುರಾತನದ ಕಂಪೆ ತುಂಬಿಹುದು...
ಪ್ರತಿ ನಗುವನ್ನು ಕಣ್ಣೀರೆ ಹಿಂಬಾಲಿಸಿಹುದು
ಅಂಧಕಾರದಿಂದ ಹೊರತಂದು ..
ನವೀನತೆಯ ಸುವಾಸನೆಯ ಉಣಿಸಿ
ಕಣ್ಣಿರಿನ ಸಾಗರದಲ್ಲಿ ನಗುವಿನ ಅಲೆಗಳನ್ನು
ಸದಾ ಕಾಲ ಹೊತ್ತು ತರುವ ....
ನೊಂದ ಜೀವಕ್ಕೆ ತಂಪೆರೆಯುವ ..
ಒಂದು ಪುಟ್ಟ ಜೀವಕ್ಕಾಗಿ ಹಂಬಲಿಸಿಹುದು...
ಈ ನನ್ನ ಮನ...
ಎಲ್ಲಿರುವೆ....ನೀ ...
ಬೇಗ ಬಂದು ಈ ನನ್ನ ಹೊಸ ಬಾಳ ಬೆಳಗೆ..
ಭವ್ಯದೀಪ್ತಿ......
ಸತ್ಯ ಸಿಂಪ್ಲಿ ಸ್ಟುಪಿಡ್
Monday, October 11, 2010
ನಿಜವಾದ ಮನುಜರು.....
ಹಾಯ್
ಫ್ರೆಂಡ್ಸ್ ಅಕ್ಟೋಬರ್ ,,10 "ವಿಶ್ವ ಮಾನಸಿಕ ಆರೋಗ್ಯ ದಿನ"
ನಾನು ಮಾನಸಿಕ ಆರೋಗ್ಯ ಶುಶ್ರೂಶ್ರತೆಯಲ್ಲಿ msc ಮಾಡುತ್ತಿದ್ದು,,, ಈ ದಿನದ ವಿಶೇಷತೆಗೆ,,,ಏನಾದರು,,ಮಾಡಬೇಕೆಂದು,,, ಹೊರಟಾಗ..ನನ್ನಿಂದ ಮೂಡಿಬಂದ ಒಂದು ಪುಟ್ಟ ಕವನ...
NIMHANS ...ಎಂಬ ಮಾನಸಿಕ ಅಸ್ವಸ್ತರ ಆಸ್ಪತ್ರೆಯಲ್ಲಿ ನನಗಾದ ಕೆಲವು ಅವಿಸ್ಮರಣೀಯ ಅನುಭವಗಳೇ,,ನನ್ನ ಈ ಕವನಕ್ಕೆ ಸ್ಪೂರ್ತಿ,,,
ಸರಿ ತಪ್ಪು ತಿಳಿಯದ ಮುಗ್ದರಿವರು..
ಮನಸಿಗನಿಸಿದ್ದನ್ನು ಮಾಡುವ ಮನುಜರಿವರು..
ಹೊರ ಲೋಕದ ಅರಿವಿಲ್ಲದೆ,,
ತಮ್ಮದೇ ಲೋಕದಲ್ಲಿ ತೇಲುತಿಹರು,,,
ಅದಾವ ಜನ್ಮದ ಪಾಪವೋ..
ಬದುಕುತಿಹರು ಭುವಿಯಲಿಂದು..
"ಮತಿ ವಿಕಲರೆಂಬ" ಬಿರುದಿನೊಂದಿಗೆ ....
ಪ್ರೀತಿಯ ಪಾಶಕ್ಕೆ,,,ಬಲಿಯಾದವರುಂಟು ..
ಸಂಸಾರದ ಜಂಜಾಟಕ್ಕೆ ಬೇಸತ್ತು ಬಂದವರುಂಟು..
ಹುಟ್ಟುತ್ತಲೇ,,,ಮತಿ ವಿಕಲರೆಂಬ ,ಬಿರುದನ್ನೂ ಬಳುವಳಿಯಾಗಿ ಪಡೆದವರುಂಟು..
ಸಮಾಜದ ಶೋಷಣೆಗೆ ಒಳಗಾದ ಬಲಹೀನರುಂಟು ,,,.
ಆದರೂ ಕೂಡ ಇವರೆಲ್ಲ..ಯಾರು ,,,,,ನಮ್ಮಂತೆ,,ಮನುಜರು.....
ನಮ್ಮಲ್ಲಿರದ ಅನ್ಯೋನ್ಯತೆ ಅವರಲ್ಲುಂಟು ...
ಸಿಕ್ಕ ತುತ್ತನ್ನು ಹಂಚಿ ತಿನ್ನುವ ಮನೋಭಾವವುಂಟು...
ಮೇಲು ಕೀಳು ಎಂಬ ಬೇದ ಭಾವಗಳಿಲ್ಲ
ಮೊದಲು ಕೊನೆ ಎಂಬ ಸ್ಪರ್ಧೆಯಲ್ಲಿ ನಿಂತವರಲ್ಲ
ಅಸೂಯೆ,ಮೋಸ, ದ್ವೇಷಗಳೆಂಬ ಪದದ ಅರಿವಿಲ್ಲದ ಮುಗ್ದರಿವರು
ಪ್ರೀತಿ ವಿಶ್ವಾಸದಲ್ಲಿ ಯಾರಿಗಿಂತ ಕಡಿಮೆ ಇಲ್ಲ ಇವರು
ಇಷ್ಟೆಲ್ಲಾ ಇರುವ ಇವರು, ನಿಜವಾದ ಮನುಜರು.....
ಸತ್ಯ ಸಿಂಪ್ಲಿ ಸ್ಟುಪಿಡ್......
ನಿರೀಕ್ಷಿತ.....
ಹಾಯ್ ಗೆಳೆಯರೇ ಈ ಕವನ,,ಪ್ರೀತಿಯಲ್ಲಿ ...ಸೋತ,,ನನ್ನ ಗೆಳತಿಗಾಗಿ,,,,
ಸೋತವರೆಲ್ಲ,,,ಪ್ರೀತಿಸಲಿಲ್ಲವೇ,,,ಎಂಬ..ಪ್ರಶ್ನೆಯು,,,ಯಾವಾಗಲು ಕಾಡುತ್ತದೆ....
ನಾನು ಸೋತಿರುವೆ,,,,ಆದರೆ...ಜಾಸ್ತಿ,,ಪ್ರೀತಿಸಿದೆ ಅನ್ಸತ್ತೆ,,,,
ನಾ ನಿನಗೆ ಚಿರಪರಿಚಿತನಲ್ಲದಿರಬಹುದು ,,,
ಆದರೆ ಅಪರಿಚತನಂತು ಅಲ್ಲ ..
ಹೀಗಿರುವಾಗ ಏನೆಂದು ಬರೆಯಲಿ...ಗೆಳತಿ,,,
ಆದರೂ,,,ಬರೆಯಲೇ ಬೇಕೆಂದು,,ಹೊರಟಿರುವೆ...
ಭಾವನೆಗಳಿಗೆ ಬರವಿಲ್ಲ ನಿನ್ನ ಬಳಿ..
ಮಾತಿನಲ್ಲೇ ಕಟ್ಟುವೆ ಸುಂದರ ಸರಪಳಿ..
ಅಭಿನಯ ನಿನಗೆ ಬಂದ ಬಳುವಳಿ..
ಬುದ್ದಿಯಲ್ಲೂ ನೀ ಭವ್ಯ ಶಿರೋಮಣಿ
ಇಷ್ಟಿದ್ದರೂ
ನಲುಗಿಸಿಹುದು ನಿನ್ನ ಪ್ರೀತಿಯ ಸುಳಿ,,,
ತುಂಬಿಹುದು,,ನೋವು ನಗುವಿನ ಬೆನ್ನಲ್ಲೇ ..
ವ್ಯಕ್ತಪಡಿಸಲಾಗದೆ ಮರುಗುತ್ತಿರುವೆ ಮನಸಲ್ಲೇ ....
ಸುಳ್ಳಿಗೆ ಬೆಲೆಕೊಟ್ಟು, ಪ್ರೀತಿಯ ಬಿಡಲಾಗದೆ,,
ಪ್ರೀತಿಗೆ ಬೆಲೆಕೊಟ್ಟು, ಸುಳ್ಳನ್ನು ಮರೆಯಲಾಗದೆ..
ಕಾಲಲ್ಲಿ ಗುಂಡು, ತಲೆಯಲ್ಲಿ ಬೆಂಡು.
ಮುಳುಗಲೊಲ್ಲದು, ತೆಲಲೋಲ್ಲದು ಎಂಬಂತಾಗಿದೆ ನಿನ್ನೀ ಜೀವನ .......
ಗೆಳೆತಿ ........
ಈ ಪ್ರೀತಿಯೇ ಹೀಗೆ ಒಂಥರಾ ,,,ಥರಾ
ಏನಾಗಲಿ,,,,,ಮುಂದೆ ಸಾಗು ,,ನೀ,,,
ಬಯಸಿದ್ದೆಲ್ಲ ಸಿಗದು,,ಬಾಳಲಿ,,,,,,,,
ಸತ್ಯ..ಸಿಂಪ್ಲಿ..ಸ್ಟುಪಿಡ್....
Monday, September 13, 2010
.ಪ್ರದೀಪ.....
ಸರಳತೆಯ ಪ್ರತೀಕ,,,,,,,,
ಸೃಜನಶೀಲತೆಯ ರೂವಾರಿ,,,,
ಭಾವನೆಗಳ ಬಂಡಾರ.....
ಹೃದಯ ಕದಿಯುವ ಮುಗುಳ್ನಗೆ .....
ಛಾಯಾಗ್ರಾಹಕನ ಚಾತುರ್ಯ,,,,,
ಇವಿಷ್ಟು ಉಳ್ಳವನೇ ನನ್ನ ಬಲು ಅಪರೂಪದ ಗೆಳೆಯ
ಪ್ರಜ್ವಲಿಸುವ ದೀಪ ..ಪ್ರದೀಪ.....
ತಿಳಿಯದೆ ಬೆಳೆದು...
ಅರಳಿ ಹೂವಾಗಿ ನಿಂತಿರುವ
ಸ್ನೇಹದ ಎಸಳುಗಳು ನಾವು.....
ಸಾಗಲಿ ಗೆಳೆಯ ನಿನ್ನ ಪಯಣ
ಪ್ರೇಮದ ಕವಿತೆಯ ಮೇಲೆ...
ಬೆಳೆಯಲಿ ನಿನ್ನ ಪ್ರತಿಭೆ
ಛಾಯಾಗ್ರಾಹಕನಾಗಿ
ನಾನಿರುವೆ ನಿನ್ನ ಹಿಂದೆ,,,,,,ಅಭಿಮಾನಿ ಗೆಳೆಯನಾಗಿ..
ಬಾಳು ನೂರು ವರುಷ,,ಹಸನ್ಮುಖಿಯಾಗಿ ,,,
೨೬ ನೇ ವಸಂತಕ್ಕೆ ಕಾಲಿಡುತ್ತಿರುವ ನಿನಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು,,,,,,,,,
ಇಂತಿ,,ನಿನ್ನ ..ಆರ್ಕುಟ್ ಗೆಳೆಯ..
ಸಿಂಪ್ಲಿ ಸ್ಟುಪಿಡ್ ಸತ್ಯ......
miss you....................
I used to miss her,even i am with her...
may be i know that, i am going to miss her for ever in future,,,,,,,,,,
I love her even after the break up....
bcoz that is the only thing which i know.........
I may not be a perfect pair for her,,
but, my love overtakes all the imperfectness...
I always want to be happy,,,,
bcoz i dont want to make her the reason for my tears......
whenever i feel to cry, i wil shout loudly and say....
I am the most happiest person in the world........
she is the girl whoo fullfills all my imaagination...
i forgot the thing that .....
even she also had an imagination........
Monday, August 30, 2010
ಹೆಜ್ಜೆ ಗುರುತು......
ನಾ ಪ್ರೀತಿಸಿ ದಣಿದಿರುವೆ ...
ನೀ ಪ್ರೀತಿಸಲಾಗದೆ ಮಣಿದಿರುವೆ.....
ದಣಿವು ದೇಹಕ್ಕಲ್ಲ ಮನಸ್ಸಿಗೆ..
ಸೋಲು ನಿನಗಲ್ಲ ನನ್ನ ಪ್ರೀತಿಗೆ ...
ದಣಿದರು ದಕ್ಕಲಿಲ್ಲವಲ್ಲ ಎಂಬ ತವಕ ನನಗೆ...
ಸೋತು ದೂರಾದೆನಲ್ಲ ಎಂಬ ಅಳುಕು ನಿನಗೆ ....
ಕಾಡುತ್ತಿವೆ,,ನಿನ್ನ ಹೆಜ್ಜೆ ಗುರುತುಗಳು...
ಕನಸುಗಳಾಗಿ, ನೆನಪುಗಳಾಗಿ,,
ನಾ ನಡೆವ ದಾರಿಯಲ್ಲಿ.....
ಮರಳಿ ಬರುವೆಯಾ ನೀ ನೆಡೆದು ಹೋದ ದಾರಿಯಲ್ಲಿ,,,
ಕಾರಣ ಕಾಯುತ್ತಿರುವೆ ನಾ ಬೇರೆ ಯಾರಾದರು ಅಳಿಸಿಯಾರು ಎಂಬ ಭಯದಲ್ಲಿ.....
ಸತ್ಯ ಸಿಂಪ್ಲಿ ಸ್ಟುಪಿಡ್......
Thursday, March 11, 2010
ಮತ್ತೆ ಬರೆದೆ ಕವನ .....
ಬಹು ದಿನಗಳಾಯ್ತು
ನಾ ಬರೆದು .....ಕವನ
ಎಷ್ಟೇ ಪ್ರಯತ್ನಿಸಿದರೂ
ಆಗುತ್ತಿಲ್ಲ ಕವನದ......ಜನನ
ಇದರಿಂದ ಪರಿತಪಿಸಿ ನೊಂದಿಹುದು
ಸತ್ಯನ ಈ....... ಮನ
ಭಾವನೆಗಳಿಗೇನು ಬರವಿಲ್ಲ .............
ಸ್ಪೂರ್ತಿಯ ಸೆಲೆ ಸದ್ಯಕ್ಕಂತೂ ಬತ್ತಿಲ್ಲ.....
ಪದಗಳ ಭಂಡಾರವು ಕ್ಷೀಣಿಸಿಲ್ಲ.....
ಇನ್ನು ನಾ ಕವಿಯೆಂಬ ನೆನಪು ನನ್ನಿಂದ ಮಾಸಿಲ್ಲ....
ಇಷ್ಟೆಲ್ಲಾ ಇದ್ದರು ನನ್ನಿಂದ ಕವಿತೆಯೊಂದು ಮೂಡುತ್ತಿಲ್ಲ
ಇದರಿಂದ ನಾ ಬೇಸತ್ತು...
ಇಂದು ಬರೆಯಲೇಬೇಕೆಂದು ಹೊರಟಾಗ..
ಮೂಡಿತು...ಈ ಕಿರು ಕವನ ........
ಸತ್ಯ ಸಿಂಪ್ಲಿ ಸ್ಟುಪಿಡ್........
Sunday, February 14, 2010
...ಪ್ರೇಮಿಗಳ ದಿನ,,,,,,,
ಫೆಬ್ರವರಿ ೧೪ ...ಪ್ರೇಮಿಗಳ ದಿನ,,,,,,,
ಪ್ರೀತಿನಾ..ಪ್ರೀತಿಯಿಂದ ಗೆಲ್ಲಬೇಕು..ಅಂತ,,ಇರುವ ಪ್ರೀತಿಯನ್ನೆಲ್ಲಾ ಧಾರೆ ಎರೆದು... ಗೆದ್ದು,,ಪ್ರೆಮಿಗಳಾದವರು,,ಕೆಲವರು,,,...,,ಸೋತು... ಭಗ್ನ ಪ್ರೆಮಿಗಳಾದವರು,,ಹಲವರು,,, .....ಪ್ರೀತಿಯಲ್ಲಿ ಗೆದ್ದವರಿಗೆ,,ಪ್ರೇಮಿಗಳ ಆಚರಣೆಯ,,,ಸಡಗರ,,,,, ಸೋತು,,ಭಗ್ನ ಪ್ರೆಮಿಗಳಾದವರಿಗೆ ...ಪ್ರೀತಿ,,ಯಾಕೆ,,ಮಾಡಿದೆನೋ,,ಎಂಬ ಪಶ್ಚತಾಪದಲ್ಲಿ..ಮನಸ್ಸು,,,ಮರಮರ ....
ಎಲ್ಲ,,ಪ್ರೇಮಿಗಳಿಗೂ,,,ಹಾಗು,,ನನ್ನ ಪ್ರೀತಿಯ ನೊಂದ,,ಭಗ್ನ ಪ್ರೇಮಿಗಳಿಗೂ....ನಿಮ್ಮ ಭಗ್ನ ಪ್ರೇಮಿ ಗೆಳೆಯ,,,ಸತ್ಯ ಸಿಂಪ್ಲಿ ಸ್ತುಪಿಡ್ನಿಂದ...... ಪ್ರೇಮಿಗಳ ದಿನದ ಶುಭಾಶಯಗಳು,,,,,
ಶ್ರೀ,,ರಾಮ ಸೇನೆಯವರಿಗೆ,,,,,
ನಾವು,,ಭಾರತೀಯರು,,,ಪಾಶ್ಚಾತ್ಯ ಸಂಸ್ಕೃತಿಯನ್ನು,,,ಅಳವಡಿಸಿ ಕೊಳ್ಳಬಾರದು ,,ಎಂಬ ನಿಮ್ಮ ನಿಲಿವಿಗೆ,,,,ಸ್ವಾಗತ....ಆದರೆ,,ನಿಮಗೆ,,ಭಾರತೀಯರಲ್ಲಿ,,ಪ್ರೇಮಿಗಳ ದಿನದ ಆಚರಣೆ ಮಾತ್ರ ಪಾಶ್ಚಾತ್ಯ ಸಂಸ್ಕೃತಿಯ,,,ಪ್ರತೀಕವಾಗಿ ,,ಕಂಡಿತೆ,,,,ಇನ್ನುಳಿದ,,,ಎಲ್ಲ ವಿಚಾರದಲ್ಲೂ,,ನಾವು,,ಭಾರತೀಯ ಸಂಸ್ಕೃತಿಯನ್ನೇ ,,ಬಳಸುತ್ತಿದ್ದೆವೆಯೇ,, ಒಮ್ಮೆ ಯೋಚಿಸಿ,,ನೋಡಿ,,,,
ಪ್ರೇಮಿಗಳ ದಿನ....ಪಾಶ್ಚಾತ್ಯ ಸಂಸ್ಕೃತಿಯ ಪ್ರತೀಕವಿರಬಹುದು ..ಆದರೆ,,,ಪ್ರೀತಿ..ಅಲ್ಲ...ಭಾರತೀಯರಿಗೂ,,ಹೃದಯ ಮನಸ್ಸು ಭಾವನೆ,,ಎಲ್ಲ ಇವೆ,,,,
ಪವಿತ್ರವಾದ ಪ್ರೀತಿಗೆ,,,ಸಂಸ್ಕೃತಿಯೆಂಬ,,,ಪವಿತ್ರ ಪದವನ್ನು ,,ಅಕ್ರಮ..ರೀತಯಲ್ಲಿ.. ಬೆರೆಸಿ,,,ಎಲ್ಲ ಯುವ ಜನಾಂಗದ...ಅಸಂಸ್ಕ್ರುತಿಯೆಂಬ ಅಪವಿತ್ರತೆಯ,,,,ದ್ವೇಷಕ್ಕೆ,,ಗುರಿಯಾಗಬೇಡಿ,,,,ಒಳ್ಳೆಯದು,,ಎಲ್ಲೇ ಇದ್ದರು,,ಅಳವಡಿಸಿಕೊಳ್ಳಿ...ನೀವು ಚಿಕ್ಕವರಾಗುವುದಿಲ್ಲ ........
ಪ್ರೀತಿ ಮಾಡುವುದು,,ಅಪರಾಧ,,ಎಂದಾಗಿದ್ದರೆ,,,ಭೂಮಿಯ ಮೇಲೆ,,,,ಕಾರಾಗೃಹದ ವಿನಹ,,ಬೇರೇನೂ,,ಇರುತ್ತಿರಲಿಲ್ಲ ,,,,
ಪ್ರೇಮಿಗಳಿಗೆ,,,,,,,
ಗೆಳೆಯರೇ,,ಪ್ರೇಮಿಗಳು,,ಅಂದರೆ ಯಾರು,,,,,ಪ್ರೀತಿಯಲ್ಲಿ ಗೆದ್ದವರು ಅನ್ನಬಹುದೇ,,,,,ಜಗತ್ತಿನಲ್ಲಿ ..ಪ್ರೀತಿಯಲ್ಲಿ ಗೆದ್ದವರಿಗಿಂತ,,ಸೋತವರೇ,,ಹೆಚ್ಚು,,,,,ಯಾಕೆ..? ಸೋತವರಾರು,,ಪ್ರೀತಿಸಲೇ ಇಲ್ಲವೇ,,,?ಅಸಲಿಗೆ,,ಪ್ರೀತಿ ..ಎಂದರೆ,,,ಏನು,,,,,
ಎರಡು,,ಮನಸ್ಸುಗಳ,,ಮಿಲನ,,ಅನ್ನಬಹುದೇ....
ಅಥವಾ
ಮೊದಲ ನೋಟದಲ್ಲೇ,,,,ಮನಸನ್ನು,,,,ಸೆರೆಮಾಡಿದ,,ಭಾವ,,ಅನ್ನಬಹುದೇ...
ಅಥವಾ,,
ತಪ್ಪು ಅಂತ,,ತಿಳಿದ ,,ಮೇಲು,,ಮಾಡುವ ಮತ್ತೊಂದು,,ತಪ್ಪು,,ಅನ್ನಬಹುದೇ,,,,
ಹೀಗೆ,,ಒಬ್ಬೊಬ್ಬರದು,,ಒಂದೊಂದು,,ವ್ಯಾಕ್ಯಾನ...
ಗೆಳೆಯರಿಗೆ,,ಪ್ರೀತಿಗೆ,,ವ್ಯಾಕ್ಯಾನನೆ ,,ಇಲ್ಲ,,,
ಅದೊಂದು,,,,,ವರ್ಣಿಸಲಾಗದೆ ,,,,,ಅನುಭವಿಸುವ,,ಸುಂದರ,,ಭಾವ,,,,ಇದು,,ಕೂಡ,, ವ್ಯಾಕ್ಯಾನ ...ಅಲ್ಲ ನನ್ನ ಅಭಿಪ್ರಾಯ,,,,,
ಹೀಗಿರುವಾಗ,,,,ನಮ್ಮ ಯುವಕರು,,ಪ್ರೀತಿ,,ಯಾಕೆ ಮಾಡ್ತಾರೆ,,,?
ಶೋಕಿಗಾಗಿ,,,,
ವಯಸ್ಸಿನ ಹಂಬಲಕ್ಕಾಗಿ....
ಕ್ಷಣಿಕ ಸುಖಕ್ಕಾಗಿ .......
ಕಾಲ ಹರಣ ಮಾಡಲು .....
ಇನ್ನು,,ಇತ್ಯಾದಿ ಕಾರಣಗಳಿಗಾಗಿ ,,ಪ್ರೀತಿಮಾಡ್ತಾರೆ,,,,ಇದನ್ನೆಲ್ಲಾ ಪ್ರೀತಿ..ಎಂದು,,ಯಾವತ್ತಿಗೂ,,,,ಕರೆಯಬೇಡಿ,,,,
ಪ್ರೀತಿ,,ಪವಿತ್ರವಾದ ಸಂಬಂದ ,,,,ಅದನ್ನು,,,ಕೆಟ್ಟ ಕಾರಣಗಳಿಗಾಗಿ,,,,,ಉಪಯೋಗಿಸಬೇಡಿ,,,,,,,
ಹಾಗೆ,,ಮಾಡಿದಲ್ಲಿ ನೀವು ನಮ್ಮ ಸಂಸ್ಕೃತಿ,,ಹಾಗು ನಿಮ್ಮ ಪ್ರೀತಿ ಎರಡನ್ನು ಉಳಿಸಿದಂತೆ,,,,,
ಎಲ್ಲರ ,,ಪ್ರೀತಿ,, ಯಶಸ್ವಿಯಾಗಲಿ,,ಸುಮಧುರ ಸುಂದರ ಬದುಕು ನಿಮ್ಮದಾಗಲಿ.....
ಸಿಂಪ್ಲಿ ಸ್ಟುಪಿಡ್ ಸತ್ಯ,,,,,?
Sunday, February 07, 2010
my autograph.....
ಹಾಯ್ ಗೆಳೆಯರೇ ಇದು ನಿಮ್ಮ ಸತ್ಯನ ಆಟೋಗ್ರಾಪ್ ......
ನಾನು ಇವಾಗ ಹೇಳೋಕೆ ಹೊರಟಿರೋದು ನನ್ನ ಜೀವನದಲ್ಲಿ ನಡೆದ ಒಂದು ಪ್ರೇಮ ಕಥೆಯ ಬಗ್ಗೆ,,,,,,,
ಕಂಡೆ ಕಡಲ ತೀರದ ಚೆಲುವೆಯ...
ಕನ್ನಡಮ್ಮನ ಮಡಿಲಲ್ಲಿ .....
ಕಂಡ ಒಡನೆ ಮೂಡಿತು ಪ್ರೀತಿ....
ಎನ್ನ ಮನದಂಗಳದಲ್ಲಿ .......
ಇದೇನಿದು ಕವನ ಅಂದುಕೊಂಡ್ರಾ? ಮುಂದೆ...ಓದಿ....
ನನ್ನಾಕೆಯನ್ನು...... ಕ್ಷಮಿಸಿ ನಾ ಇಷ್ಟ ಪಟ್ಟ ಹುಡುಗಿಯನ್ನು ಐದು ವರ್ಷದ ಹಿಂದೆ ಮೊದಲ ಬಾರಿ ಕಂಡಾಗ ಬರೆದ ನಾಲ್ಕು ಸಾಲುಗಳಿವು... ಅದೇನಾಯ್ತೋ...ಮುಂದೆ ಬರೆಯಲು ಆಗಲೇ ಇಲ್ಲ... ಬಹಳ ಪ್ರಯತ್ನ ಪಟ್ಟು ಕೊನೆಗೆ ಕ್ಲೈಮಾಕ್ಸ್ ...ನೋಡಿ ಬರೆದರಾಯಿತು ಎಂದು ಸುಮ್ಮನಿದ್ದೆ,,,,, ಇವಾಗ ಆ ಕಾಲ ಕೂಡಿ ಬಂದಿದೆ,,,,ಶ್ ಶ್ ಶ್
ಫ್ರೆಂಡ್ಸ್,,,ನಾ ಇಷ್ಟ ಪಟ್ಟ ಹುಡುಗಿ ಕಡಲ ತೀರದವಳು...ಅಂದರೆ ಕೇರಳದವಳು....ಹಾಗೆ ಚೆಲುವೆಯು... ಕೂಡ .ನಾ ಅವಳ ಕಂಡಿದ್ದು ನನ್ನ ಮೊದಲ ವರ್ಷದ ಬಿ ಎಸ್ಸಿ ಕ್ಲಾಸ್ನಲ್ಲಿ ...ಆ ದಿನ ಮೊದಲ ನೋಟಕ್ಕೆ ಎದ್ವಾ ತದ್ವಾ ಫಿದಾ
ಆಗ್ ಬಿಟ್ಟಿದ್ದೆ ಹೇಳ್ಬೇಕು ಅಂದ್ರೆ,,ಪಾಗಲ್ ಆಗಿದ್ದೆ ಕಾರಣ ...ಆ ದಿನ ಆಕೆ ಧರಿಸಿದ್ದ ನೀಲಿ ಬಣ್ಣದ ಫುಲ್ ಸ್ಲೀವ್ ಡ್ರೆಸ್, ಮತ್ತು ಆ ಮುಗ್ದ ಮುಗುಳ್ನಗೆ, ಹಣೆಯಲ್ಲಿ ದರಿಸಿದ್ದ ಕುಂಕುಮ, ಒಂದೇ ನೋಟಕ್ಕೆ ನನ್ನನ್ನು ನಾ ಮರೆಯುವಂತೆ ಮಾಡಿದ್ದಳು, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಕಲ್ಪನೆಯ ಹುಡುಗಿ ಅವಳಾಗಿದ್ದಳು.....ಇಷ್ಟು ಸಾಕಲ್ಲವೇ ಅವಳ ಬಗ್ಗೆ,,,,,
ಅಂದಿನಿಂದ ನನ್ನ ಸೈಕಲ್ ತುಳಿತ ಶುರುವಾಯಿತು ......ಎಲ್ಲೇ ಹೋದರು ಹಿಂಬಾಲಿಸುವುದು...ಅವಳು ಲೈಬ್ರರಿಗೆ ಹೋದ ತಕ್ಷಣ ನನಗೆ ಓದುವುದರ ಬಗ್ಗೆ ಇಂಟರೆಸ್ಟ್ ಬರ್ತಿತ್ತು..ಅವಳಿಗೆ ತಿಳಿಯದಂತೆ ಅವಳನ್ನು ಕದ್ದು ನೋಡುವುದು,,,ಇವೆಲ್ಲ ನಡೆದೆ ಇತ್ತು.. ಎಷ್ಟೇ ಆದರು ಒಂದೇ ಕ್ಲಾಸ್ ಅಲ್ವಾ ಹಾಗೆ ಪರಿಚಯನೂ ಆಯ್ತು ...ಆದರೆ ನಾ ಮಾತಾಡಿಸಿದ್ದು ಕಡಿಮೆ ..ಏಕೆಂದರೆ ಅದು ಹೇಳೋಕಾಗೋಲ್ಲ ,,,ಪ್ರೀತಿಸಿ ನೋಡಿ..ನಿಮಗೆ ತಿಳಿಯುತ್ತೆ ..ಹೀಗೆ ಅವಳನ್ನು ನೋಡುತ್ತಾ ನೋಡುತ್ತಾ ಮೂರು ವರ್ಷಕಳದೆ....
ಈ ಮೂರು ವರ್ಷದಲ್ಲಿ ನಾ ಅವಳ ಮೊದಲು ನೋಡಿದ ದಿನ ,,ಅವಳ ಮೊಬೈಲ್ ನಂಬರ್ ಸಿಕ್ಕ ದಿನ ..ಹೇಗೆ ಹಲವಾರು ವಿಷಯಗಳು ನನ್ನ ಡೈರಿಯಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿವೆ,,,ಅಷ್ಟೇ ಯಾಕೆ ಇವತ್ತಿಗೂ ಅವಳೇ ನನ್ನ ಎಲ್ಲ ಇ ಮೇಲ್
IDಗೆ ಪಾಸ್ವರ್ಡ್ ಆಗಿದ್ದಾಳೆ ಇದೆಲ್ಲ ಯಾಕೆ ಮಾಡಿದೆ ಎಂದರೆ ...ನನಗೆ ಉತ್ತರ ಅವತ್ತು ಗೊತ್ತಿರ್ಲಿಲ್ಲ ಆದರೆ ಇವಾಗ ಉತ್ತರ ಸಿಕ್ಕಿದೆ ಅನಿಸುತ್ತಿದೆ.....ಯಾಕಂದರೆ,,ಈ ರೀತಿ ಒಂದು ಆಟೋಗ್ರಾಪ್ ಸ್ಟೋರಿಗೆ ಬೇಕಿತ್ತೇನೋ ಇದೆಲ್ಲಾ.....ಅನಿಸುತ್ತೆ...
ನನ್ನ ಪ್ರತಿ ಕವನದ ಸ್ಫೂರ್ತಿ ಅವಳಾಗಿದ್ದಳು...ಒಂದು ರೀತಿಯಲ್ಲಿ ಹೇಳ್ಬೇಕಂದ್ರೆ ನನ್ನನ್ನು ಪರಿಪೂರ್ಣ ಕವಿ ಮಾಡಿದಳು ...ವಿಧಿ ವಿಪರ್ಯಾಸ ಅಂದರೆ...ನನ್ನಾವ ಕವನವನ್ನು ಅವಳು ಓದಲಿಲ್ಲ ಕಾರಣ ಅವಳಿಗೆ ಕನ್ನಡ ಬರುತ್ತಿರಲಿಲ್ಲ ..ಮಲೆಯಾಳಂನಲ್ಲಿ ಕವನ ಬರೆಯಲು ನನಗೆ ಮಲಯಾಳಂ ಬರುತ್ತಿರಲಿಲ್ಲ ...ಇನ್ನು ಇಂಗ್ಲಿಷ್ನಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪದಿಸುವಷ್ಟು ಪರಿಣಿತ ನಾನಾಗಿರಲಿಲ್ಲ....
ಅಂತು ಇಂತೂ ಕಷ್ಟ ಪಟ್ಟು ಮಲಯಾಳಂ ಮಾತಾಡೋದು ಕಲಿತೆ ...ಅದೇ ಜೋಶ್ನಲ್ಲಿ ಕಾಲೇಜ್ ಡೇನಲ್ಲಿ "ಹೃದಯದಲ್ಲೂ ನೀನೆ ಇರುವೆ, ಕಣ್ ಮುಂದೆಯೂ ನೀನೆ ಇರುವೆ,,ಕಣ್ ಮುಚ್ಚಿದರು ನೀನೆ ಇರುವೆ,,ಫಾತಿಮಾ ..ಎಂಬ ಮಲೆಯಾಳಂ ಆಲ್ಬಮ್ ಹಾಡನ್ನು ನಾ ಇಷ್ಟ ಪಡುತ್ತಿರವ ಹುಡುಗಿಗಾಗಿ ಸಮರ್ಪಣೆ ಎಂದು ನಾನೇ ಹೇಳಿಕೊಂಡು ಒಂದು ರೀತಿಯಲ್ಲಿ ಹೀರೋ ಆದೆ,,,ಕಾರಣ ಕನ್ನಡದ ಹುಡುಗನೊಬ್ಬ ನಮ್ಮ ಕಾಲೇಜ್ ಇತಿಹಾಸದಲ್ಲಿ ಮಲಯಾಳಂ ಹಾಡು ಹಾಡಿದ್ದು ಪ್ರಥಮ ಆದರೆ ಅಸಲಿ ಪ್ರಾಬ್ಲಮ್ ಶುರುವಾಗಿದ್ದೆ ಅಲ್ಲಿಂದ .... ನಮ್ಮ ಶಿಕ್ಷಕರಿಂದ ಹಿಡಿದು ನನ್ನ ಫ್ರೆಂಡ್ಸ್ ನನ್ನ ಕ್ಲಾಸ್ ಮೇಟ್ಸ್ ... ಎಲ್ಲರದು ಒಂದೇ ಪ್ರಶ್ನೆ...ಯಾರದು ನಿನ್ನ ಫಾತಿಮಾ ?
ಈ ಪ್ರಶ್ನೆಗೆ ಹಾರಿಕೆಯ ಉತ್ತರಗಳನ್ನು ಕೊಡುತ್ತ ಕಾಲ ಕಳೆಯುತ್ತಿದ್ದೆ ,,ಆ ಸಮಯದಲ್ಲಿ ನಾ ಪ್ರೀತಿಸುತ್ತಿರುವ ಹುಡುಗಿಯು ಕೂಡ ನನ್ನನ್ನು ಕೇಳಿದಳು ಯಾರು ನಿನ್ನ ಫಾತಿಮಾ......ಹೇಗಾಗಿರಬಾರದು,,,ನನ್ನ ಪರಿಸ್ಥಿತಿ ...ಬಂದ ಕಣ್ಣಿರನ್ನು ತಡೆದುಕೊಂಡು ಏನೋ ಹಾರಿಕೆ ಉತ್ತರ ಕೊಟ್ಟು ತಪ್ಪಿಸಿಕೊಂಡೆ.......ಇಲ್ಲೂ ವಿಧಿ ಆಟ ಆಡಿತು ,,,,,
ಇನ್ನು farewell ಡೇ ಬಂತು ಕಷ್ಟಪಟ್ಟು ಸಾದನೆ ಮಾಡಿ ಅವಳೊಂದಿಗೆ ಒಂದು ಫೋಟೋ ತೆಗೆಸಿಕೊಂಡೆ,,, ಇಲ್ಲೂ ವಿಧಿ ಆಟ ಆಡಿತು ಅದೊಂದು ಫೋಟೋ ಬಿಟ್ಟು ಉಳಿದೆಲ್ಲ ಫೋಟೋ ಚೆನ್ನಾಗಿ ಬಂದಿದ್ದವು,,,,
ಇನ್ನು ಕೊನೆಯ ದಿನಗಳಲ್ಲಿ ಅವಳ ವರ್ತನೆ ಸ್ವಲ್ಪ ಬದಲಾಯಿತು ಕಾರಣ ಆಕೆಯೇ ನನ್ನ ಫಾತಿಮಾ ಎಂಬ ಅನುಮಾನ ಅವಳಲ್ಲಿ ಮೂಡಿರಬಹುದೆಂಬ ಅನಿಸಿಕೆ ನನ್ನದು....ಅದೇನಾಯಿತೋ ಏನೋ ಆಕೆ ಹೋಗುವಾಗ ನನಗೆ bye ಕೂಡ ಹೇಳದೆ ಹೋದಳು....
ಇದೆಲ್ಲಾ ಆದ ಮೇಲೆ ನಾನು ಸ್ವಲ್ಪ ದಿನ ಭಗ್ನ ಪ್ರೇಮಿ ಆಗಿದ್ದೆ..ಅವಾಗ ನನ್ನಲ್ಲಿ ಬಹಳ ಪ್ರಶ್ನೆ ಮೂಡಿದ್ದವು ,,ನಾ ಪ್ರೀತಿಸಿದ್ದು ತಪ್ಪಾ ,,,ನಾ ಅವಳಿಗೆ ಹೇಳದಿದ್ದು ತಪ್ಪಾ,,,ಅಥವಾ ಪ್ರೀತಿನೆ ತಪ್ಪಾ ಅಂತಾ... ಇಂತಹ ಪ್ರಶ್ನೆಗಳನ್ನು ಹೆದರಿಸುತ್ತಿರುವ ನನ್ನಂತಹ ಸಾವಿರಾರು ಬಡಪಾಯಿ ಹುಡುಗರಿದ್ದಾರೆ,,,, ಅವರಿಗೆಲ್ಲ ನಾ ಹೇಳುವುದು ಇಷ್ಟೇ ,,ನಿಮ್ಮ ಜೀವನದ ಘಟನೆಗಳನ್ನು ಮುಂದೊಂದು ದಿನ ನೆನೆದಾಗ ನಿಮಗೆ ನಗು ಬರುತ್ತದೆ ,,,,,ನಿಜ,,, ನಾನು ಈ ಅಂಕಣ ಬರೆಯುವಾಗ ನಕ್ಕಿದ್ದುಂಟು,,ನಾನು ಹೀಗೆಲ್ಲ ಮಾಡಿದ್ದೇನೆ ಎಂದು,,,,ಆದರೆ ಆ ನಗುವು ಮುಗಿಯು ಮುನ್ನ ನಿಮ್ಮ ಮನದಲ್ಲಿ ಎಲ್ಲೋ ಒಂದು ಕಡೆ ಹೇಳಲಾರದ ಒಂದು ,,,ಭಾವನೆ ಮೂಡುತ್ತದೆ,,,,ಕಣ್ ತುಂಬಿ ಬರುತ್ತದೆ ಅದೇ ನಿಮ್ಮ ನಿಷ್ಕಲ್ಮಶ ಪ್ರೀತಿ,,,,
ಇನ್ನು ...ಆಕೆ ಹೋದ ಮೇಲೆ ನಾ ಅವಳನ್ನು ಮಾತಾಡಿಸಿದ್ದು ಅವಳ ಹುಟ್ಟಿದ ದಿನದಂದು ...ಅವಳಿಗೆ ಶುಭಾಷಯ ಕೋರಲು ಕರೆ ಮಾಡಿದಾಗ ..ಹೀಗೆ ವಿಶೇಷ ಸಂದರ್ಭಗಳ ನೆಪ ಮಾಡಿಕೊಂಡು ಕಾಲ್ ಮಾಡುತ್ತಿದ್ದೆ ಆಕೆಯು ಮಾತನಾಡುತ್ತಿದ್ದಳು...ಈ ಬಾರಿ ಹೊಸ ವರ್ಷದಂದು ಕಾಲ್ ಮಾಡಿದಾಗ ,,ನನ್ನ ಮದುವೆ ನಿಶ್ಚಯವಾಗುವ ಲಕ್ಷಣಗಳಿವೆ..ಹಾಗೆ ಆದಲ್ಲಿ ನಾ ತಿಳಿಸುವೆ ನೀನು ಬರಬೇಕು ಎಂದಳು...ಏನು ಮಾತನಾಡಲಾಗದೆ ಹೂ ಎಂದು ಫೋನ್ ಇಟ್ಟೇ....ಈಗ ಅಂದರೆ ಫೆಬ್ರುವರಿ ಏಳರಂದು ಅವಳ ಮದುವೆ,,,,ಆಕೆ ನನ್ನನ್ನು ಕರೆಯಲಿಲ್ಲ ಬೇರೆ ನನ್ನ ಗೆಳತಿಯರಿಂದ ವಿಷಯ ತಿಳಿಯಿತು ನಾನು ಈ ಕಥೆ ಬರೆದು ಮುಗಿಸುವಹೊತ್ತಿಗೆ ಅವಳ ಮದುವೆ,,,ಬೇರೊಬ್ಬನ ಜೊತೆಗೆ ಕ್ಷಮಿಸಿ ಅವಳು ಇಷ್ಟಪಟ್ಟ ಹುಡುಗನ ಜೊತೆಗೆ ನೆಡೆದುಹೋಗಿದೆ,,,,ನಾ ಅವಳಿಗಾಗಿ ಕೊಡಬೇಕೆಂದು ಐದು ವರ್ಷದಿಂದ ಇಟ್ಟಿದ್ದ ನವಿಲುಗರಿ ನನ್ನೊಂದಿಗೆ ಉಳಿಯಿತು..ಪ್ರಾಯಶಃ ಮದುವೆಗೆ ಕರೆದಿದ್ದಾರೆ ..... ಅದನ್ನು ಆಕೆಗೆ ಕೊಡುವ,,ಕಾಲ ಕೂಡಿಬರುತಿತ್ತು....ಅದರಿಂದಲೂ ನಾ ವಂಚಿತನಾದೆ.....ಪಾಪ...ಮದುವೆಯ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ಮರೆತಿರಬೇಕು....ಹಾಗೆಂದುಕೊಂಡು ನನ್ನ ನಾ ಸಮಾದಾನ ಮಾಡಿಕೊಳ್ಳದೆ ಬೇರೆ ದಾರಿ ಇಲ್ಲ ...
ಗೆಳೆಯರೇ ನನ್ನ ಕಲ್ಪನೆಯ ಹುಡುಗಿ ಅವಳಾಗಿದ್ದಳು ,,,ಅದೇ ರೀತಿ ಅವಳಿಗೂ ಅವನ ಹುಡುಗನ ಬಗ್ಗೆ ಕಲ್ಪನೆ ಇದೆಯಲ್ಲವೇ,,ನಾನು ಅವನಾಗಿರಲಿಲ್ಲ ,,,,,,,,
ಗೊತ್ತಿಲ್ಲದವರಿಗೂ ಒಳ್ಳೆಯದಾಗಲಿ ಎಂದು ಹರಸುವ ನಾನು ......ನಾ ಪ್ರೀತಿಸಿದ ಕ್ಷಮಿಸಿ ನಾ ಪ್ರೀತಿಸುತ್ತಿರುವ ಹುಡುಗಿ ನನ್ನವಳಾಗಲಿಲ್ಲ ಎಂಬ ಮಾತ್ರಕ್ಕೆ ದ್ವೇಷಿಸುವುದು ಯಾವ ನ್ಯಾಯ..?
ಈ ಅಂಕಣದ ಮೂಲಕ ನಾ ಅವಳ ವೈವಾಹಿಕ ಜೀವನ ಶುಭವಾಗಿರಲೆಂದು ,,,,ಹಾರೈಸುತ್ತಿರುವೆ ,,,,ಹಾಗು ಈ ಅಂಕಣ ಓದಿದ ನನ್ನ ಗೆಳೆಯರಲ್ಲಿ ನಾ ಕೆಳುವುದಿಷ್ಟೇ ನೀವು ಕೂಡ ಅವಳ ವೈವಾಹಿಕ ಜೀವನಕ್ಕೆ ಶುಭವಾಗಲೆಂದು ಹಾರೈಸಿ
ನಾ ಬಯಸಿದ್ದೆ ನೀ ಹರಿಸುವೆ..
ನನ್ನ ಬಾಳಲ್ಲಿ ಪ್ರೀತಿಯ ಜಲಧಾರೆ...
ಆದರೆ ನೀನಾಗಿ ಹೋದೆ ನನಗೆ...
ಕೈಗೆಟುಕದ ತಾರೆ .............
WISH U HAPPY MARRIED LIFE DEAR .........
I MISS YOU ...........
ಇಷ್ಟೆಲ್ಲಾ ಆಯಿತು ,,ಮುಂದಾ.......
ದೇವದಾಸ್ ಆಗಿ.....ಹುಚ್ಚನ ತರಹ ತಿರುಗೋ,,,,,, ಯಾವ ಕಲ್ಪನೆಯೂ ಇಲ್ಲ ....ಯಾಕಂದ್ರೆ ಅವಳು ಅವಳನ್ನು ಪ್ರೀತಿಸುತ್ತಿದ್ದ ಒಂದು ಪ್ರೀತಿಯ ಪುಟ್ಟ ಹೃದಯವನ್ನು ಕಳೆದುಕೊಂಡಳು.....
ನಾನು ಕೂಡ ಏನು ಗಳಿಸಲಿಲ್ಲ ,,,ಆದರೆ....ನನಗಾಗಿ ಮುಡಿಪಿಟ್ಟ ಸುಮದುರ ಸುಂದರ ಸವಿ ಸವಿ ನೆನಪುಗಳು....ಕಾಮನಬಿಲ್ಲಿನಂತೆ...ಆಗಾಗ ಬಂದು ಹೋಗುತ್ತವೆ,,,,ಆ ಕಾಮನಬಿಲ್ಲು ಬಂದಾಗ ಎರಡನಿ ಮಳೆ ಬರಲೇಬೇಕು....ಆ ಮಳೆಯ ರೂಪವೇ ...ನನ್ನ ಕಣ್ಣೀರು .... ಆ ಕಣ್ಣೀರಿನ,,,ಹಿಂದಿರುವ ಬಿಂಬ ಎಂದಿಗೂ ಅವಳದೇ ಆಗಿರುತ್ತೆ ....
ಇದ್ದಿಷ್ಟು ಪ್ರೀತಿ ಆಯಿತು,,,, ಇದಕ್ಕೂ ಮೀರಿದ್ದು ಜೀವನ ...ಅದನ್ನು ನಡೆಸಲು.....ಮತ್ತೊಬ್ಬಳ..ಅವಶ್ಯಕತೆ..... ಇದ್ದೆ ಇದೆ.....
ಮುಂದಾ,,,,,,,ಮತ್ತೊಂದು ಹಕ್ಕಿಗಾಗಿ ಬೇಟೆ ಶುರು,,,, ಆದರೆ ಈ ಬಾರಿ ನಾ ಮಿಕವಾಗುವುದಿಲ್ಲ ...
ಸತ್ಯ ಸಿಂಪ್ಲಿ ಸ್ಟುಪಿಡ್.......
Wednesday, January 27, 2010
""ಸ್ನೇಹದ ಮಹಲು""
ಹಾಯ್ ಗೆಳೆಯರೇ,,,ಈ ಕವನ ಆರ್ಕುಟ್ನಲ್ಲಿ ಪರಿಚಯವಾದ ನನ್ನ ಗೆಳತಿಗಾಗಿ....
ಮದುವೆಯ ದಿಬ್ಬಣಕ್ಕೆ ಕಾಲಿಡಲು ನಿಂತಿರುವ ಆಕೆಗೆ.... ಈ ಕವನದ ಮೂಲಕ..ನನ್ನ ಶುಭಾಶಯಗಳು...
ನಾವು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದೆವು ...
ನಾವಿಬ್ಬರು ಅಪರಿಚಿತರು.....
ಇದು ಬಹುದಿನದ ಹಿಂದಿನ ಮಾತು ......
ಬೇಟಿಯಾಗಿದ್ದು ಆರ್ಕುಟ್ನಲ್ಲಿ .....
ಪರಿಚಯವಾಗಿದ್ದು ಚಾಟಿಂಗ್ನಲ್ಲಿ ......
ನಮಗೆ ತಿಳಿಯದೆ ನಮ್ಮ ಕಣ್ಣೆದುರು ಬೆಳೆದು ನಿಂತಿರುವ ....
ಸುಮದುರ ಬಾಂದವ್ಯವೇ....
ಈ ಗೆಳೆತನ....
ಈ ಸ್ನೇಹದ ಮಹಲಿನ ರೂವಾರಿಗಳು ...
ನಾವಿಬ್ಬರು ....ಸತ್ಯ ಅಂಡ್ ಗೀತ ..
ಇದು ಇಂದಿನ ಮಾತು...
ಮದುವೆಯ ದಿಬ್ಬಣಕ್ಕೆ ಕಾಲಿಡಲು ನಿಂತಿರುವ ..
ಹೆಸರಲ್ಲೇ ಹಿತವನ್ನು ತುಂಬಿರುವ .....
ಓ ನನ್ನ ಗೆಳತಿ ಗೀತಾ ....
ನಿನ್ನ ಮುಂಬರುವ ವೈವಾಹಿಕ ಜೀವನ ಸುಕವಾಗಿರಲಿ ....
ಎಂದು ಮುಂಗಡವಾಗಿ ಹಾರೈಸುವ ....
ಬಲು ಅಪರೂಪದ ಗೆಳೆಯ ....
ಸಿಂಪ್ಲಿ ಸ್ಟುಪಿಡ್ ಸತ್ಯ .....
ಮದುವೆಯ ದಿಬ್ಬಣಕ್ಕೆ ಕಾಲಿಡಲು ನಿಂತಿರುವ ಆಕೆಗೆ.... ಈ ಕವನದ ಮೂಲಕ..ನನ್ನ ಶುಭಾಶಯಗಳು...
ನಾವು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದೆವು ...
ನಾವಿಬ್ಬರು ಅಪರಿಚಿತರು.....
ಇದು ಬಹುದಿನದ ಹಿಂದಿನ ಮಾತು ......
ಬೇಟಿಯಾಗಿದ್ದು ಆರ್ಕುಟ್ನಲ್ಲಿ .....
ಪರಿಚಯವಾಗಿದ್ದು ಚಾಟಿಂಗ್ನಲ್ಲಿ ......
ನಮಗೆ ತಿಳಿಯದೆ ನಮ್ಮ ಕಣ್ಣೆದುರು ಬೆಳೆದು ನಿಂತಿರುವ ....
ಸುಮದುರ ಬಾಂದವ್ಯವೇ....
ಈ ಗೆಳೆತನ....
ಈ ಸ್ನೇಹದ ಮಹಲಿನ ರೂವಾರಿಗಳು ...
ನಾವಿಬ್ಬರು ....ಸತ್ಯ ಅಂಡ್ ಗೀತ ..
ಇದು ಇಂದಿನ ಮಾತು...
ಮದುವೆಯ ದಿಬ್ಬಣಕ್ಕೆ ಕಾಲಿಡಲು ನಿಂತಿರುವ ..
ಹೆಸರಲ್ಲೇ ಹಿತವನ್ನು ತುಂಬಿರುವ .....
ಓ ನನ್ನ ಗೆಳತಿ ಗೀತಾ ....
ನಿನ್ನ ಮುಂಬರುವ ವೈವಾಹಿಕ ಜೀವನ ಸುಕವಾಗಿರಲಿ ....
ಎಂದು ಮುಂಗಡವಾಗಿ ಹಾರೈಸುವ ....
ಬಲು ಅಪರೂಪದ ಗೆಳೆಯ ....
ಸಿಂಪ್ಲಿ ಸ್ಟುಪಿಡ್ ಸತ್ಯ .....
Saturday, January 23, 2010
ಕನಸುಗಾರ ......
ಕಂಡೆ ನಾ ನಿನ್ನ ಕನಸಲ್ಲಿ
ಮರುಕ್ಷಣವೇ ನಿಂತೇ ನೀ ನನ್ನ ಮನಸಲ್ಲಿ....
ಕನಸಲ್ಲೇ ಕೊನೆಯಾದೆ...
ಮನಸಲ್ಲೇ ನೆಲೆಯಾದೆ...
ಮರೆಯಲಾಗದ ನೆನಪಾದೆ
ಅಳಿಸಲಾಗದ ಚಿತ್ರವಾದೆ....
ಕನಸು ಮನಸುಗಳ ನಡುವೆ..
ಮರೆಯದೆ ನೆನಪಾಗಿ....
ಕನಸೇಕೆ ಬಿತ್ತೆಂಬ..ಮನಸ್ಸಿನ ಪ್ರಶ್ನೆಗೆ....
ಉತ್ತರ ತಿಳಿಯದೆ...
ಕನಸು ಕಾಣುವುದನ್ನೇ ಬಿಟ್ಟಿರುವೆ....
ಆದರೇನು ಮಾಡಲಿ...
ಕಣ್ ಮುಚ್ಚಿದರೆ ನೀನೆ ಕಾಣುವೆ...
ಸತ್ಯ .......
Tuesday, January 19, 2010
ನಮ್ಮ ಪ್ರೀತಿಯ ಚಾಮಯ್ಯ ಮೇಸ್ಟ್ರು......
ಚಾಮಯ್ಯ ಮೇಸ್ಟ್ರೆ......
ಶಿಷ್ಯ ರಾಮಾಚಾರಿ ಹಿಂದೆ....
ನೀವು..ಹೊರಟಿರ?
ನಿಮ್ಮ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.....
ನಿಮ್ಮ ಅಭಿಮಾನಿ ವೃಂದ.....
ಶಿಷ್ಯ ರಾಮಾಚಾರಿ ಹಿಂದೆ....
ನೀವು..ಹೊರಟಿರ?
ನಿಮ್ಮ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.....
ನಿಮ್ಮ ಅಭಿಮಾನಿ ವೃಂದ.....
Thursday, December 31, 2009
ಎದ್ದೇಳು ಕನ್ನಡಿಗ....
ಕನ್ನಡಿಗರಲ್ಲಿ ಮನವಿ.......
ಎದ್ದೇಳಿ....ಸಾಕು ನಿಮ್ಮ ಉದಾರತೆ ..ಇಲ್ಲದಿದ್ದರೆ
ಮಲಗಿದಲ್ಲೇ ಮಣ್ಣು ಮುಚ್ಚುವರು...ಈ ಹೊಸ ವರ್ಷದಿಂದ ಹೊಸ ಮನುಷ್ಯರಾಗಿ
ಕಳೆದು ಹೋಗುತ್ತಿರುವ ನಮ್ಮ ಕನ್ನಡವನ್ನು ಉಳಿಸಿಕೊಳ್ಳೋಣ ....ಇಂದು ನೀವು ಏಳದಿದ್ದರೆ ಮುಂದೆ ನಿಮ್ಮ ಮಕ್ಕಳು ಮಲಗಲು ಸಾದ್ಯವಿಲ್ಲ ,,,,, ಪರಭಾಷೆಯ ವ್ಯಾಮೋಹ ಸಾಕು.....ಉಳಿಸಿ ಬೆಳಸಿ ನಮ್ಮ ಕನ್ನಡವನ್ನು......
ಮಲಗಿದಲ್ಲೇ ಮಣ್ಣು ಮುಚ್ಚಿ ಕೊಂದರು ...ನಮ್ಮ ಮಣ್ಣಲ್ಲೇ ನಾ ಸಾಯುತ್ತಿರುವೆ ಎನ್ನುವ ನಿಮ್ಮ ಉದಾರತೆಯನ್ನು ಸಾಕು ಮಾಡಿ ಈ ಹೊಸ ವರ್ಷದಿಂದ ಪರಭಾಷೆಯವರ ಜೊತೆ ಕನ್ನಡದಲ್ಲಿ ಮಾತನಾಡಿ ಈ ಕನ್ನಡ ನಿಮ್ಮದು...ಗೆಳೆಯರೇ....ಈ ಕವನದ ಉದ್ದೇಶ ಪ್ರಶಸ್ತಿ ಗೆಲ್ಲಬೇಕು ಅಥವಾ ನಾ ಕವಿಯೆಂದು ತೋರಿಸಬೇಕೆಂದಲ್ಲ ,,,,,ಈ ಕವನ ಓದಿದವರಲ್ಲಿ ಹತ್ತು ಜನ... ಅವರ ಪರಭಾಷೆಯ ಗೆಳೆಯರು ಸಿಕ್ಕಿದಾಗ ಒಣಕ್ಕಂ ಅನ್ನುವ ಮುಂಚೆ ಈ ಕವನವನ್ನು ನೆನೆದು ನಮಸ್ಕಾರ ಎಂದರೆ ನಾ ರುಣಿಯಾಗಿರುವೆ...ನಮೆಲ್ಲ ಗೆಳೆಯರಿಗೆ ಹೊಸ ವರ್ಷದ ಶುಭಾಶಯಗಳು.....
ಎಲ್ಲ ಭಾಷೆ ಕಲಿಯಿರಿ ಆದರೆ ಕನ್ನಡವನ್ನು ಉಳಿಸಿ ಬೆಳಸಿ......
ಎದ್ದೇಳು ಕನ್ನಡಿಗನೇ
ಹೊಸ ವರುಷ ಬಂದಿಹುದು ...
ಮಲಗಿದಲ್ಲೇ ಮಣ್ಣು ಮುಚ್ಚುವ ಜನರಿಹರು ...
ಬಂದವರಿಗೆಲ್ಲ ಬಾ ಎಂದು....
ನೀ ಸಹೃದಯಿಯಾದೆ ,,,
ಸಾಕು ಮಾಡು....
ಬಂದವರೆಲ್ಲ ಯೋಗ್ಯರಲ್ಲ ......
ಬಂದವರನ್ನು ಬದಲಾಯಿಸು....
ನೀ ಬದಲಾಗದಿರು....
ಉದಾರತೆಯ ಉತ್ತುಂಗದಲಿ
ಹಾರುವ ಮುನ್ನ .......
ನೆನೆಸಿಕೊ ಒಮ್ಮೆ......
ರೆಕ್ಕೆ ಇಲ್ಲದ ಹಕ್ಕಿಯನ್ನ......
ಸ್ವಾರ್ತಿಯಾಗು....
ನಿನಗಾಗಿ ಅಲ್ಲ
ನಿನ್ನ ನೆಲ ಜಲ ಭಾಷೆಗಾಗಿ...
ಭಾಷೆ ಉಳಿವಿಗೆ ...
ಬೇಕಿಲ್ಲ ಗೆಳೆಯ ಬಲಿಧಾನ....
ಮೊದಲು ನೀ ನುಡಿ ನಿನ್ನ ಭಾಷೆಯ ,,,
ಕಂಡಾಗ ಪರಭಾಷೆಯ ಮಹಾಶಯ..........
ಸತ್ಯ..........
Tuesday, December 29, 2009
""ಯಾವ ಮೋಹನ ಮುರುಳಿ ಕರೆಯಿತು ದೂರ ತೀರಕೆ ನಿಮ್ಮನು....""
ಓ..ದೇವರೇ ಒಳ್ಳೆಯವರಿಗೆ,,ಆಯಸ್ಸುಕಡಿಮೆ ..ಎಂದು..ಮತ್ತೊಮೆ ನಿಜ ಮಾಡಿದೆ....
ಜನ್ಮದಿನದಂದೆ ಜವರಾಯನ ಕರೆಗೆ ಓಗೊಟ್ಟು ನಮ್ಮನೆಲ್ಲ ಅಗಲಿದ ಅಶ್ವಥ್ ಸರ್...ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ....ವೀ ಮಿಸ್ ಯು ......
ನಿಮಗಾಗಿ ಅರ್ಪಣೆ ಈ ಚಿಕ್ಕ ಕವನ ......
ಏನಿತ್ತು ಅವಸರ
ಗಾನ ಗಾರುದಿಗನೆ..
ಅಗಲಿ ಹೋಗಲು ನಮ್ಮನು....
ಹೇಳಿ ಹೋಗು ಕಾರಣ ಹೋಗುವ ಮೊದಲು..
ಎಂದು ಹೇಳಿದ ನೀವೇ ಹೋಗಿರುವಿರಿ
ಹೇಳದೆ ನಮಗೆ ಕಾರಣ...
ಇದು ತಪ್ಪಲ್ಲವೇ ಗುರುವೇ....ಎಂದರೆ?
ಮತ್ತೆ ನೀವೇ ಹೇಳುವಿರಿ....
ತಪ್ಪು ಮಾಡದೋರ್ ಯಾರವ್ರೆ.....?
ಕಂಚಿನ ಕಂಠದಿ ...ನಮಗೆಲ್ಲ
ಸಂಗೀತ ಸುದೆಯ ರಸ ಉಣಬಡಿಸಿ...
ಅದೆಸ್ಟೋ ಶಿಷ್ಯಕೋಟಿಗೆ ಗುರುವಾಗಿ..
ಕನ್ನಡಿಗರ ಆರಾದ್ಯ ದೈವವಾಗಿ...
ಸಂಗೀತಲೋಕದ ಅನಬಿಶಕ್ತ ದೊರೆಯಾಗಿ...
ಭಾವಗೀತೆಗಳ ಭವ್ಯದೀಪ್ತಿಯಾಗಿ....
ಪ್ರಜ್ವಲವಾಗಿ ಬೆಳಗುತ್ತಿದ್ದ ಈ ಹಣತೆ..
ನಂದಿದೆ ಇಂದಿಗೆ .....
ಉಳಿದಿರುವುದು ಕತ್ತಲು ಮಾತ್ರ...
ಆ ಕತ್ತಲಲ್ಲೂ ನಿಮ್ಮ ಹಾಡು ,,,ನಮ್ಮೊಂದಿಗಿದೆ....
ನೀವಿರುವಿರಿ ನಮ್ಮ ಮನಗಳಲ್ಲಿ ಇಂದಿಗೂ ಎಂದೆಂದಿಗೂ....
ಅದಾವ ಮೋಹನ ಮುರಳಿ ಕರೆಯಿತು ಗುರುಗಳೇ..
ದೂರ ತೀರಕೆ ನಿಮ್ಮನು.......
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ,,,,,,,,,,,,
ಮತ್ತೊಮ್ಮೆ ಹುಟ್ಟಿ ಬನ್ನಿ ನಮಗಾಗಿ......
ನಿಮ್ಮ ಬರುವಿಕೆಯ ನಿರೀಕ್ಷೆಯಲ್ಲಿ ....
ಎಲ್ಲ ಕನ್ನಡಿಗರು........
ಸತ್ಯ...........
ಜನ್ಮದಿನದಂದೆ ಜವರಾಯನ ಕರೆಗೆ ಓಗೊಟ್ಟು ನಮ್ಮನೆಲ್ಲ ಅಗಲಿದ ಅಶ್ವಥ್ ಸರ್...ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ....ವೀ ಮಿಸ್ ಯು ......
ನಿಮಗಾಗಿ ಅರ್ಪಣೆ ಈ ಚಿಕ್ಕ ಕವನ ......
ಏನಿತ್ತು ಅವಸರ
ಗಾನ ಗಾರುದಿಗನೆ..
ಅಗಲಿ ಹೋಗಲು ನಮ್ಮನು....
ಹೇಳಿ ಹೋಗು ಕಾರಣ ಹೋಗುವ ಮೊದಲು..
ಎಂದು ಹೇಳಿದ ನೀವೇ ಹೋಗಿರುವಿರಿ
ಹೇಳದೆ ನಮಗೆ ಕಾರಣ...
ಇದು ತಪ್ಪಲ್ಲವೇ ಗುರುವೇ....ಎಂದರೆ?
ಮತ್ತೆ ನೀವೇ ಹೇಳುವಿರಿ....
ತಪ್ಪು ಮಾಡದೋರ್ ಯಾರವ್ರೆ.....?
ಕಂಚಿನ ಕಂಠದಿ ...ನಮಗೆಲ್ಲ
ಸಂಗೀತ ಸುದೆಯ ರಸ ಉಣಬಡಿಸಿ...
ಅದೆಸ್ಟೋ ಶಿಷ್ಯಕೋಟಿಗೆ ಗುರುವಾಗಿ..
ಕನ್ನಡಿಗರ ಆರಾದ್ಯ ದೈವವಾಗಿ...
ಸಂಗೀತಲೋಕದ ಅನಬಿಶಕ್ತ ದೊರೆಯಾಗಿ...
ಭಾವಗೀತೆಗಳ ಭವ್ಯದೀಪ್ತಿಯಾಗಿ....
ಪ್ರಜ್ವಲವಾಗಿ ಬೆಳಗುತ್ತಿದ್ದ ಈ ಹಣತೆ..
ನಂದಿದೆ ಇಂದಿಗೆ .....
ಉಳಿದಿರುವುದು ಕತ್ತಲು ಮಾತ್ರ...
ಆ ಕತ್ತಲಲ್ಲೂ ನಿಮ್ಮ ಹಾಡು ,,,ನಮ್ಮೊಂದಿಗಿದೆ....
ನೀವಿರುವಿರಿ ನಮ್ಮ ಮನಗಳಲ್ಲಿ ಇಂದಿಗೂ ಎಂದೆಂದಿಗೂ....
ಅದಾವ ಮೋಹನ ಮುರಳಿ ಕರೆಯಿತು ಗುರುಗಳೇ..
ದೂರ ತೀರಕೆ ನಿಮ್ಮನು.......
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ,,,,,,,,,,,,
ಮತ್ತೊಮ್ಮೆ ಹುಟ್ಟಿ ಬನ್ನಿ ನಮಗಾಗಿ......
ನಿಮ್ಮ ಬರುವಿಕೆಯ ನಿರೀಕ್ಷೆಯಲ್ಲಿ ....
ಎಲ್ಲ ಕನ್ನಡಿಗರು........
ಸತ್ಯ...........
Monday, December 28, 2009
How can i wish u.....?
Hi frnz,,, u wanna impress ur girlfriend who is away from u ,,,,by wishing in a special way on her birthday..,,,
lets,,,see sathya,,,s style,,,ofcourse it works,,, i am damn sure.......and tell me ur openion after reading this....
Hi
Dear...
How can i wish u .........?
can i hug u and wish u
or
can i give rose and wish u
or
can i give a card and wish u...
or
can i shake ur hand and wish u...
or
can igive a kiss and wish u........
NO
I CAN"T
because u r not with me
still i wanna wish u.....
SO
I decided
first pray to god ......
Oh...god give me a chance
to wish in all the above types to mydear...
every year that to for ever........
AND
Now i am wishing you...
through this small poem,,,,
as a gift on your birthday.....
I WISH U MANY MORE RETURNS OF THE DAY....DEAR
BE HAPPY FOR EVER.....
MISS....................YOU..........................
yours.....
SATHYA....SIMPLY .... STUPID....
lets,,,see sathya,,,s style,,,ofcourse it works,,, i am damn sure.......and tell me ur openion after reading this....
Hi
Dear...
How can i wish u .........?
can i hug u and wish u
or
can i give rose and wish u
or
can i give a card and wish u...
or
can i shake ur hand and wish u...
or
can igive a kiss and wish u........
NO
I CAN"T
because u r not with me
still i wanna wish u.....
SO
I decided
first pray to god ......
Oh...god give me a chance
to wish in all the above types to mydear...
every year that to for ever........
AND
Now i am wishing you...
through this small poem,,,,
as a gift on your birthday.....
I WISH U MANY MORE RETURNS OF THE DAY....DEAR
BE HAPPY FOR EVER.....
MISS....................YOU..........................
yours.....
SATHYA....SIMPLY .... STUPID....
CARDIAC QUEEN
Hi frnz,, this is my first poem in english..that to 5 yearsback,,, i know some mistakes are there still i dnt want to change because its my 1st poem...so more attachment.....
Whenever i Saw
her loveliness, so perfectly she seems
made me a statue....
Whenever i talk
her voice only recall
made me dumb...
Whenever i approch
her brightness clearly shines
made me a blind.....
but...
Whenever i remember...
her loveliness,voice,brightness
stands infront of me ,,,
that made me living,talking & seeing person..
u know who is she,,,
she is my CARDIAC QUEEN,,,,,,
sathya...........
Whenever i Saw
her loveliness, so perfectly she seems
made me a statue....
Whenever i talk
her voice only recall
made me dumb...
Whenever i approch
her brightness clearly shines
made me a blind.....
but...
Whenever i remember...
her loveliness,voice,brightness
stands infront of me ,,,
that made me living,talking & seeing person..
u know who is she,,,
she is my CARDIAC QUEEN,,,,,,
sathya...........
Friday, December 25, 2009
MARINE PEARL...
I Saw a marine pearl
glittering in a seashore..
that made me glance
again and again.....
when i try to reach that ,,,
it just went away...
when i tried to leave that,,,,
it attracts me,,,,
If i get that,,,
then,,,
i save that in abbys of my heart....
and make my blood marine.....
If i dnt...
then,,,
i lead my life in rememberence of that pearl....
and my tears make the marine for its stay.....
Do u knw who is that ""MARINE PEARL""
She is my only ""CARDIAC QUEEN""
Who always remind me to ""BE HAPPY""
SATHYA.........
glittering in a seashore..
that made me glance
again and again.....
when i try to reach that ,,,
it just went away...
when i tried to leave that,,,,
it attracts me,,,,
If i get that,,,
then,,,
i save that in abbys of my heart....
and make my blood marine.....
If i dnt...
then,,,
i lead my life in rememberence of that pearl....
and my tears make the marine for its stay.....
Do u knw who is that ""MARINE PEARL""
She is my only ""CARDIAC QUEEN""
Who always remind me to ""BE HAPPY""
SATHYA.........
ನಾ ಕವಿಯಾಗಿದ್ದು.........
ಹಾಯ್,,, ಗೆಳೆಯರೇ ಈ ಕವನ ಮೂಡಿ ಬಂದಿದ್ದು ..
ನನ್ನ ಗೆಳತಿಗಾಗಿ...ಆಕೆಯ ಹೆಸರು...ರಜಿ,,,,
ಆಕೆ ನನ್ನ ಕವನಗಳನ್ನು ನೋಡಿ...ಛೇಡಿಸಿದ್ದು,,,ಹೀಗೆ...
ಪ್ರೀತಿಯ,,, ವರ್ಣಿಸಿ ಕವನ ಬರೆಯುವುದನ್ನು ಬಿಟ್ಟು...ನೀನು ಕವಿಯಾಗಿದ್ದರೆ ಪ್ರಕೃತಿಯ ವರ್ಣಿಸಿ...ಕವನ ಬರೆದು... ತೋರಿಸು....ಎಂದು....
ಆದ್ದರಿಂದ ....ಈ...ಕಿರು ಕವನ ......
ನಾನೆದ್ದೆ ಬೇಗನೆ ಇಂದು
ಕಾರಣ ಬರೆಯಲೇಬೇಕು ಕವನ ಪ್ರಕೃತಿಯ ಮೇಲೆಂದು...
ಹಕ್ಕಿಗಳ ಚಿಲಿಪಿಲಿಯ ನಾದಕ್ಕೆ
ಅರಳುತ್ತಿರುವ ಹೂಗಳ ಕಂಪಿಗೆ
ಚುಮುಚುಮು ಮಂಜಿನ ಸ್ಪರ್ಶಕೆ
ನಾ ಮರತೆ ನನ್ನನ್ನು ಇಂದು .....
ಮಾಗಿಯ ಚಳಿಗೆ ಎಚ್ಹೆತ್ತು ಕಣ್ತೆರೆದು ನೋಡಿದೆ ..
ಪಡುವಣದಿ ಮೂಡಿದ ರವಿಯು...
ಮಾಡಿದ ನನ್ನನ್ನು ಒಬ್ಬ ಕವಿಯು..
ಈ ಕವನಕ್ಕೆ ಸ್ಪೂರ್ತಿ ರವಿಯೋ ,,ರಜಿಯೋ
ತಿಳಿಯದು ಈ ಕವಿ ಹೃದಯಕ್ಕೆ
ಅಂತೂ ಬರೆದೆನು ಕವನ ಪ್ರಕೃತಿಯ ಮೇಲೆ ..
ತೋರಿಸಲು ಆ ಕಪಿ ಹೃದಯಕ್ಕೆ...
sathya.....
ನನ್ನ ಗೆಳತಿಗಾಗಿ...ಆಕೆಯ ಹೆಸರು...ರಜಿ,,,,
ಆಕೆ ನನ್ನ ಕವನಗಳನ್ನು ನೋಡಿ...ಛೇಡಿಸಿದ್ದು,,,ಹೀಗೆ...
ಪ್ರೀತಿಯ,,, ವರ್ಣಿಸಿ ಕವನ ಬರೆಯುವುದನ್ನು ಬಿಟ್ಟು...ನೀನು ಕವಿಯಾಗಿದ್ದರೆ ಪ್ರಕೃತಿಯ ವರ್ಣಿಸಿ...ಕವನ ಬರೆದು... ತೋರಿಸು....ಎಂದು....
ಆದ್ದರಿಂದ ....ಈ...ಕಿರು ಕವನ ......
ನಾನೆದ್ದೆ ಬೇಗನೆ ಇಂದು
ಕಾರಣ ಬರೆಯಲೇಬೇಕು ಕವನ ಪ್ರಕೃತಿಯ ಮೇಲೆಂದು...
ಹಕ್ಕಿಗಳ ಚಿಲಿಪಿಲಿಯ ನಾದಕ್ಕೆ
ಅರಳುತ್ತಿರುವ ಹೂಗಳ ಕಂಪಿಗೆ
ಚುಮುಚುಮು ಮಂಜಿನ ಸ್ಪರ್ಶಕೆ
ನಾ ಮರತೆ ನನ್ನನ್ನು ಇಂದು .....
ಮಾಗಿಯ ಚಳಿಗೆ ಎಚ್ಹೆತ್ತು ಕಣ್ತೆರೆದು ನೋಡಿದೆ ..
ಪಡುವಣದಿ ಮೂಡಿದ ರವಿಯು...
ಮಾಡಿದ ನನ್ನನ್ನು ಒಬ್ಬ ಕವಿಯು..
ಈ ಕವನಕ್ಕೆ ಸ್ಪೂರ್ತಿ ರವಿಯೋ ,,ರಜಿಯೋ
ತಿಳಿಯದು ಈ ಕವಿ ಹೃದಯಕ್ಕೆ
ಅಂತೂ ಬರೆದೆನು ಕವನ ಪ್ರಕೃತಿಯ ಮೇಲೆ ..
ತೋರಿಸಲು ಆ ಕಪಿ ಹೃದಯಕ್ಕೆ...
sathya.....
Thursday, December 03, 2009
ಪ್ರೀತಿಯ......ಫಲ
ಚಿನ್ನ ನಾ ಪ್ರೀತಿಸಿದೆ ನಿನ್ನ ...
ಬಯಸದೆ ಬೇರೇನೂ ನಿನ್ನಿಂದ ...
ಬಯಸದ ನನಗೆ ನೀ ಕೊಟ್ಟ ಉಡುಗೊರೆ...
ನೊಂದ ಹೃದಯ .......
ಬರಿದಾದ ಮನ .....
ಬತ್ತಿ ಹೋದ ಭಾವನೆಗಳು ....
ಕಾಡುವ ನೆನಪುಗಳು....
ಭಗ್ನ ಪ್ರೇಮಿ ಎಂಬ ಬಿರುದು .....
ಇವಿಷ್ಟು ಕೊಟ್ಟು ನೀ ಸ್ವಾಭಿಮಾನಿಯಾದೆ
ಪಡೆದ ನಾನು..... .......
........... ............. ......
ಕಳೆದು ಹೋಗಿರುವೆ....
ಚಿನ್ನಾ...
ಬಯಸದೆ ಬಂದ ಭಾಗ್ಯ ಅಂದರೆ ಇದೇನಾ?
ಬಯಸದೆ ಬೇರೇನೂ ನಿನ್ನಿಂದ ...
ಬಯಸದ ನನಗೆ ನೀ ಕೊಟ್ಟ ಉಡುಗೊರೆ...
ನೊಂದ ಹೃದಯ .......
ಬರಿದಾದ ಮನ .....
ಬತ್ತಿ ಹೋದ ಭಾವನೆಗಳು ....
ಕಾಡುವ ನೆನಪುಗಳು....
ಭಗ್ನ ಪ್ರೇಮಿ ಎಂಬ ಬಿರುದು .....
ಇವಿಷ್ಟು ಕೊಟ್ಟು ನೀ ಸ್ವಾಭಿಮಾನಿಯಾದೆ
ಪಡೆದ ನಾನು..... .......
........... ............. ......
ಕಳೆದು ಹೋಗಿರುವೆ....
ಚಿನ್ನಾ...
ಬಯಸದೆ ಬಂದ ಭಾಗ್ಯ ಅಂದರೆ ಇದೇನಾ?
....[ದು][ನಿ]ರಾಸೆ
ಹಾಲಿನಂತ ಸ್ನೇಹಕ್ಕೆ, ಪ್ರೀತಿಯೆಂಬ ಎರಡಕ್ಷರದ ಹುಳಿ ಹಿಂಡಿ
ಒಡೆದು ಹೋದ ಹಾಲನ್ನಿಡಿದು ದು:ಖಿಸುತ್ತಿರುವ ಪಾಪಿ ನಾನು
ತಿಳಿಯದೆ ಹುಳಿ ಹಿಂಡಿದೆ ಕ್ಷಮಿಸು ಎಂದು ಸುಳ್ಹೇಗೆ ಹೇಳಲಿ
ತಿಳಿದು ಏಕೆ ಹುಳಿ ಹಿಂಡಿದೆ ಎಂದು ನೀ ಕೇಳಿದರೆ ನಾ ಏನ ಹೇಳಲಿ
ಬೆಳದಿಂಗಳಿಗೆ ಆಸೆ ಪಟ್ಟು
ನಕ್ಷತ್ರದ ಬೆಳಕಿಗೂ ಚ್ಯುತಿ ತಂದಿರುವೆ
ಕ್ಷಮಿಸುವೆಯ ಗೆಳತಿ ....
''ನಿರಾಸೆ''ಗೀಡು ಮಾಡಿದ ಈ ''ದುರಾಸೆ''ಯ
ದ್ರೋಹಿ ಮನಸನ್ನ .........
ಸತ್ಯ.............
'ಬಂಜರೆದೆಯ ಒಡೆಯ''
'
ಬಂದವರೆಲ್ಲ ಪ್ರೀತಿ ಎಂಬ
ಬೀಜ ಬಿತ್ತಿದರು.....
ಬಿತ್ತಿದ ಬೀಜಕ್ಕೆ....
ಭಾವನೆಗಳ ಮಳೆ ಸುರಿಸಿ
ಕನಸಿಂದ ಆರೈಕೆ ಮಾಡುತ್ತ
ಪಸಲಿಗಾಗಿ ಕಾಯುತಿದ್ದೆ....
ಪಸಲು ಬರುವ ಮುನ್ನವೇ
ಬೆಳೆದು ನಿಂತ ಪ್ರೀತಿಯ ಮರವನ್ನು
ಬುಡ ಸಮೇತ ಕತ್ತರಿಸಿ
ನೆನಪೆಂಬ ಬೇರನ್ನು ಬಿಟ್ಟಿದ್ದಾರೆ.....
ಬತ್ತಿರುವ ಭಾವನೆಗಳಿಂದ
ಮಳೆ ಸುರಿಸಲಾಗದೆ ...
ಕಮರಿ ಹೋಗಿರುವ ಕನಸುಗಳಿಂದ
ಉಳುಮೆ ಮಾಡಲಾಗದೆ
ಪರಿತಪಿಸುತ್ತಿರುವ .....
''ಬಂಜರೆದೆಯ ಒಡೆಯ ನಾನು''.......
ಸತ್ಯ .........
ಬಂದವರೆಲ್ಲ ಪ್ರೀತಿ ಎಂಬ
ಬೀಜ ಬಿತ್ತಿದರು.....
ಬಿತ್ತಿದ ಬೀಜಕ್ಕೆ....
ಭಾವನೆಗಳ ಮಳೆ ಸುರಿಸಿ
ಕನಸಿಂದ ಆರೈಕೆ ಮಾಡುತ್ತ
ಪಸಲಿಗಾಗಿ ಕಾಯುತಿದ್ದೆ....
ಪಸಲು ಬರುವ ಮುನ್ನವೇ
ಬೆಳೆದು ನಿಂತ ಪ್ರೀತಿಯ ಮರವನ್ನು
ಬುಡ ಸಮೇತ ಕತ್ತರಿಸಿ
ನೆನಪೆಂಬ ಬೇರನ್ನು ಬಿಟ್ಟಿದ್ದಾರೆ.....
ಬತ್ತಿರುವ ಭಾವನೆಗಳಿಂದ
ಮಳೆ ಸುರಿಸಲಾಗದೆ ...
ಕಮರಿ ಹೋಗಿರುವ ಕನಸುಗಳಿಂದ
ಉಳುಮೆ ಮಾಡಲಾಗದೆ
ಪರಿತಪಿಸುತ್ತಿರುವ .....
''ಬಂಜರೆದೆಯ ಒಡೆಯ ನಾನು''.......
ಸತ್ಯ .........
ಸ್ನೇಹಾನಾ/ಪ್ರೀತಿನಾ.....?
ನೆನೆದ ಪ್ರತಿ ಕ್ಷಣವೂ ನಿನ್ನ ಪಡೆಯಬೇಕೆಂಬ ಹಂಬಲ...
ಪಡೆಯುವುದು ಕನಸೆಂದು ಅರಿವಾದಾಗ
ಬೇಡವಾಗಿದೆ ಈ ನಿಜ ಜೀವನ...
ಯಾರಿಗೆ ಹೇಳಲಿ ಏನೆಂದು ಹೇಳಲಿ ನಾ ಪಡುತ್ತಿರುವ ಪರಿತಾಪ...
ನೆನಪಿಗೆ ಮಸಿ ಬಳಿದು, ಕನಸ್ಸಿಗೆ ಕಣ್ಕಟ್ಟಿ
ಸ್ನೇಹಕ್ಕೆ ಬೆಲೆಕೊಡಲೆತ್ನಿಸುತ್ತಿರುವೆ...
ಆದರೂ ನೀ ಮರಳಿ ನೆನಪಾಗುತ್ತಿರುವೆ, ಕನಸಾಗಿ ಕಾಡುತ್ತಿರುವೆ
ನೀನೆ ಹೇಳು ....ಇದು ಸ್ನೇಹಾನಾ/ಪ್ರೀತಿನಾ......?
ಸತ್ಯ ....
ಒಂಟಿ ನಾವಿಕ ........
ಮನದಾಳದಲ್ಲಿ ನೆನಪಿನ ಅಲೆ ಬಡಿದು....
ದಿಕ್ಕೆಟ್ಟು ನಿಂತ ಪ್ರೀತಿಯ ಹಡಗಿನ....
ಒಂಟಿ ನಾವಿಕನ ಅಂತರಾಳದ ಮಾತು....
ಕೂಗಿ ಹೇಳಿದರು ಕೇಳದಷ್ಟು ಅಲೆಯ ಸದ್ದು...
ನೆನಪಿನ ಭೋರ್ಗರೆತಕೆ ಮನಸನ್ನು ಮುಡಿಪಿಟ್ಟು....
ನಾ ಒಂಟಿಯಲ್ಲವೇ ಎಂದು ಬೇಸರದ ನಿಟ್ಟುಸಿರಿಟ್ಟು ...
ಕಾಯುತ್ತಿರುವೆ ನಿನಗಾಗಿ ಈ ಹೃದಯ ಮೀಸಲಿಟ್ಟು ...
ಬರುವೆಯಾ ಗೆಳತಿ ........
ಈ ಒಂಟಿ ನಾವಿಕನ .........
ಪ್ರೀತಿಗೆ ಬೆಲೆಕೊಟ್ಟು ........?
ಸತ್ಯ .......
''ನೀ ಮಾಡಿದ್ದು ಸರಿಯಾ......?''
ಓ.... ಮನಸೇ
ನಿನ್ನ ಅರಿಯದ ಮನಸ್ಸಿಗೆ, ನೀ ಏಕೆ ಸೋಲುವೆ
ನಿನಗನಿಸಿದ್ದೆಲ್ಲ ನನ್ನಿಂದ ಮಾಡಿಸುವೆ
ನೀ ಏಕೆ ಹೀಗೆ....
ಬಿಟ್ಟು ಬಿಡು ನನ್ನ.....
ಭಾವನೆಗಳ ಜೊತೆ ಆಟ ಆಡಿ...
ಪ್ರೀತಿ ಎಂಬ ಅಪರಾಧ ಮಾಡಿಸಿ
ಭಗ್ನ ಪ್ರೇಮಿ ಎಂಬ ಬಿರುದು ಕೊಟ್ಟು ...
ಯಾವುದೋ ಮೂಲೆಯಲ್ಲಿ ಅವಿತು ನಗುತ್ತಿರುವೆಯಾ ?
ನಗು....ನಗು.....
ಆದರೆ
ನನ್ನದೊಂದು ಮನವಿ.....
ನಿನಗೂ ಒಂದು ಒಳ ಮನಸ್ಸಿದೆಯಲ್ಲ ....
ಕೇಳು ಒಮ್ಮೆ ಆ ಮನಸ್ಸನ್ನು ....
ನೀ ...ಮಾಡಿದ್ದು ಸರಿಯಾ.....?
ಇಂತಿ ನಿನ್ನ ಪ್ರೀತಿಯ.....
ನನ್ನ ಹೃದಯ .....
ಸತ್ಯ.......
'' ಮತ್ತೆ ಸಿಗುವ ''
ಹೇಗೆ ಹೇಳಲಿ ಗೆಳತಿ ವಿದಾಯ
ನನಗಿಂತ ನಾ ಇಷ್ಟಪಡುವ ಕೆಲವರಲ್ಲಿ ಒಬ್ಬಳಾಗಿರುವ ನಿನಗೆ
ನಾ ಹೇಗೆ ಹೇಳಲಿ ಗೆಳತಿ ವಿದಾಯ
ಅರಿಯದೆ ಬೆಳೆದ ಗೆಳೆತನದ ಆಳ ನಮಗೆ ತಿಳಿಯದು
ನೆನೆದರೆ ತೆಲುವೆ, ಮರೆತರೆ ಮುಳುಗುವೆ ಎನ್ನುವ ನನಗೆ
ದಡವ ಸೇರುವ ತವಕವಿಲ್ಲ ......
ಚಳಿಯೋ ಮಳೆಯೋ ಪ್ರಾಣವಿರುವವರೆಗೂ,
ಈ ಬಾಳ ನೌಕೆಯಲಿ ಸ್ನೇಹದ ಪ್ರಯಾಣ .....
ಇದ ನೀ ಮರೆಯದಿರು ಮರೆತು ಮರುಗದಿರು ಗೆಳತಿ.....
ಇಸ್ಟೆಲ್ಲಾ ತಿಳಿದು ನಾ ಹೇಗೆ ಹೇಳಲಿ ವಿದಾಯ ....
ಬದಲಿಗೆ ನಾ ಹೇಳುವೆ ''ಮತ್ತೆ ಸಿಗುವ''
ಸತ್ಯ...........
Subscribe to:
Posts (Atom)